ಬೇಂದ್ರೆ ಕಾವ್ಯದಲ್ಲಿ ಪ್ರತಿಮೆ-ಪ್ರತೀಕ-ಅಲಂಕಾರ

Author : ಬಿ.ಬಿ. ರಾಜಪುರೋಹಿತ

Pages 144

₹ 100.00




Year of Publication: 2012
Published by: ಶ್ರೀಮಾತಾ ಪ್ರಕಾಶನ
Address: ಅಂಬಿಕಾತನಯದತ್ತ ವೇದಿಕೆ, ವಿಶ್ವಶ್ರಮ ಚೇತನ, ಗೋಕುಲ ರಸ್ತೆ, ಹುಬ್ಬಳ್ಳಿ-580030

Synopsys

ಬೇಂದ್ರೆಯವರ ಕಾವ್ಯದಲ್ಲಿ ಪ್ರತಿಮಾ ಸಂವಿಧಾನ, ಪ್ರತೀಕ ಸಂಯೋಜನೆ ಮತ್ತು ಅಲಂಕಾರ ವೈಭವ ತಿಳಿಯುವ ದೃಷ್ಟಿಯಿಂದ ಸಿದ್ಧಪಡಿಸಲಾದ ಕೃತಿಯಿದು. ಸುದೀರ್ಘ ಮೂವತ್ತೆರಡು ಪುಟಗಳ ಮುನ್ನುಡಿಯು ಈ ಕೋಶದ ಮಹತ್ವವನ್ನು ವಿವರಿಸುತ್ತದೆ.

ಪ್ರತಿಮೆ ಕಣ್ಣಿಗೆ, ಕಿವಿಗೆ ಪಂಚೇಂದ್ರಿಯ ಜ್ಞಾನಗಳಿಗೆ ದಕ್ಕುವಂತಹದ್ದು. ಪ್ರತಿಮೆ ಮನಸ್ಸಿಗೆ ಆಹ್ಲಾದ ನೀಡಿದರೆ ಪ್ರತೀಕ ಬುದ್ಧಿಗೆ ತೃಪ್ತಿ ಕೊಡುತ್ತದೆ. ಪ್ರತಿಮೆ-ಪ್ರತೀಕಗಳು ಕಾವ್ಯದ ಅಂತರಂಗದ ಸೊತ್ತಾದರೆ ಅರ್ಥಾಲಂಕಾರಗಳು ಬಾಹ್ಯದ ಸೊತ್ತು. ಬೇಂದ್ರೆಯವರ ಕಾವ್ಯ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ನಡೆದ ವಿಶಿಷ್ಟ ಪ್ರಯತ್ನ.

About the Author

ಬಿ.ಬಿ. ರಾಜಪುರೋಹಿತ
(20 May 1935 - 24 June 2020)

ಭಾಷಾ ವಿಜ್ಞಾನಿ ಬಿ.ಬಿ. ರಾಜಪುರೋಹಿತ  ಅವರು  ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರು. 1935ರ ಮೇ 20ರಂದು ಜನಿಸಿದರು.  ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪಡೆದಿರುವ ಅವರು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರ; ವಚನ ವ್ಯಾಕರಣ (ವ್ಯಾಕರಣ), ಬೇಂದ್ರೆ ಕಾವ್ಯ ಭಾಷೆ; ಕನ್ನಡವೆಲ್ಲ ಒಂದೇ, ಭಾಷೆ ಮತ್ತು ಅರ್ಥಗಳ ಗುಟ್ಟು; ಧ್ವನಿ ವಿಜ್ಞಾನ; ವ್ಯಾ-ಸಾ-ನು-ಭಾವ; ಧ್ವನಿಯ ಶ್ರಾವಣ ಮತ್ತು ಚಾಕ್ಷುಷ ರೂಪ; ವಚನ ಸಾಹಿತ್ಯದ ಭಾಷಾ ಶೈಲಿ (ಭಾಷಾ ವಿಜ್ಞಾನ). ಏಳು ಬೀಳಿನ ಕಡಲು; ಗಂಗಾವತರಣ; ಬೇಂದ್ರೆ ಕಾವ್ಯ ನಿಘಂಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. A ...

READ MORE

Related Books