ಬೇಂದ್ರೆಕಾವ್ಯ : ಪದನಿರುಕ್ತ

Author : ಜಿ. ಕೃಷ್ಣಪ್ಪ

Pages 512

₹ 480.00




Year of Publication: 2018
Published by: ವಂಶಿ ಪಬ್ಲಿಕೇಷನ್ಸ್
Address: ಟಿ.ಬಿ ಬಸ್ ಸ್ಟಾಂಡ್ ಹತ್ತಿರ, ಬಿ.ಎಚ್ ರಸ್ತೆ, ನೆಲಮಂಗಳ ಬೆಂಗಳೂರು. 562-123
Phone: 9916595916

Synopsys

ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಆರಂಭದ ಕವಿತೆಗಳಿಂದ ಹಿಡಿದು, ಮರಣೋತ್ತರವಾಗಿ ಪ್ರಕಟಗೊಂಡ ಕವಿತೆಗಳವರೆಗೂ ನೂರಾರು ಕವಿತೆಗಳಲ್ಲಿ ಬರುವ ಸುಲಭವಾಗಿ ಅರ್ಥವಾಗದ ಸುಮಾರು 1400 ಪದಗಳ ಅರ್ಥ ಏನು ಎಂಬುದನ್ನು ಲೇಖಕರು ಇಲ್ಲಿ  ವಿವರಿಸಿದ್ದಾರೆ. ಲೇಖಕರು ಧಾರವಾಡದ ಸುತ್ತಮುತ್ತ ಹಲವು ಜಾತ್ರೆ, ಸಮಾರಂಭಗಲ್ಲಿ ಓಡಾಡಿ ಪದಗಳ ಅರ್ಥವನ್ನು ಸಂಗ್ರಹಿಸಿ ಇಲ್ಲಿ ಕೊಟ್ಟಿದ್ದಾರೆ. ಬೇಂದ್ರೆ ಕಾವ್ಯದ ವಾಚ್ಯಾರ್ಥ, ಧ್ವನ್ಯರ್ಥ, ಲಕ್ಷ್ಯಾರ್ಥಗಳನ್ನು ಹೇಗೆ ಗ್ರಹಿಸಬೇಕು ಎಂಬುದನ್ನು ತಿಳಿಸಿದ್ದಾರೆ. 

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books