ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ

Author : ಚಿ.ಸಿ. ನಿಂಗಣ್ಣ

Pages 724

₹ 595.00




Year of Publication: 2017
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಮುಖ್ಯ ರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ.

Synopsys

ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ-ಲೇಖಕ ಚಿ.ಸಿ. ನಿಂಗಣ್ಣ ಅವರ ಸಂಪಾದಿತ ಕೃತಿ. ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ತಿಳಿಯಲು ಸರಳವಾಗಿಸುವ ಉದ್ದೇಶ ಈ ಕೃತಿಯ ಹಿಂದಿದೆ. ಪ್ರತಿ ವಿಷಯದ ಅಧ್ಯಯನಶೀಲತೆಯನ್ನು ಕೋಶದ ಒಟ್ಟು ಅಂದದಲ್ಲಿ ಕಾಣಬಹುದು.ಈ ಕೃತಿಯು ಮೊದಲು ಮುದ್ರಣ ಗೊಂಡಿದ್ದು-2008ರಲ್ಲಿ. ಈಗ 4 ನೇ ಮುದ್ರಣ ಕಂಡಿದೆ. ಒಟ್ಟು 13 ಅಧ್ಯಾಯಗಳಿವೆ. 

ಈ ಸಂಪಾದಿತ ಗ್ರಂಥವು ಕನ್ನಡ ಸಾಹಿತ್ಯದ ಪೂರ್ವದ ಹಳೆಗನ್ನಡ, ನಡುಗನ್ನಡ, ಹರಿದಾಸರ ಸಾಹಿತ್ಯ, ಹೊಸಗನ್ನಡ, ಕನ್ನಡಭಾಷೆ ಮತ್ತು ವ್ಯಾಕರಣ, ತೌಲನಿಕ ಕಾವ್ಯವೀಮಾಂಸೆ, ಅಲಂಕಾರಪರಿಚಯ, ಸಾಹಿತ್ಯವಿಮರ್ಶೆ, ಛಂದಃಶಾಸ್ತ್ರ, ಶಾಸನ ಅಧ್ಯಯನ ಮತ್ತು ಕನ್ನಡ ಸಂಸ್ಕøತಿ ಇತಿಹಾಸ, ಗ್ರಂಥ ಸಂಪಾದನೆ ಹಾಗೂ ಹಸ್ತಪ್ರತಿಶಾಸ್ತ್ರ, ಜಾನಪದ ಅಧ್ಯಯನ, ಹಾಗು ಕೆಲವು ವೈಶಿಷ್ಟ್ಯಗಳು ಹೀಗೆ ಕೃತಿಯಲ್ಲಿ ಚರ್ಚಿಇತ ವಿಷಯಗಳು.

ಕನ್ನಡ ಸಾಹಿತ್ಯದ ವಿವಿಧ ಮಜಲುಗಳ ಪ್ರಮುಖ ಮಾಹಿತಿಯನ್ನು ದಾಖಲಿಸಲಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಯ ಬಹುಮುಖ ನೆಲೆಗಳನ್ನು ಒಳಗೊಂಡಿದ್ದು, ಕನ್ನಡ ಸಾಹಿತ್ಯದ ಸಮಗ್ರ ಇತಿಹಾಸವನ್ನುಸಂಗ್ರಹಿಸುವ ಪ್ರಯತ್ನವಿದೆ. ಕನ್ನಡ ಸಾಹಿತ್ಯ ಅಧ್ವಯನ ಆಯ್ಕೆ ಮಾಡಿದ ಪರೀಕ್ಷಾರ್ಥಿಗಳಿಗೆ ಉಪಯುಕ್ತವಾಗಿದೆ.

ಕೆ.ಎ.ಎಸ್. ಪ್ರೌಢಶಾಲಾ, ಉಪನ್ಯಾಸಕರ ಸ್ಪರ್ಧಾಕಾಂಕ್ಷಿಗಳ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ ನೀಡುವ ಕನ್ನಡ ಸಾಹಿತ್ಯದ ಗ್ರಂಥವಿದು. ಪೂರ್ವದ ಹಳೆಗನ್ನಡ ಕವಿಗಳಿಂದ  ಹಿಡಿದು ಚಂಪು, ವಚನ, ರಗಳೆ, ಷಟ್ಪದಿ, ಕೀರ್ತನೆ, ನವ್ಯ, ನವೋದಯ ಪ್ರಗತಿಶೀಲ, ದಲಿತ ಬಂಡಾಯ, ಹೊಸಗನ್ನಡದ ಸಾಹಿತಿಗಳ ವಿವರಗಳನ್ನುಒದಗಿಸುತ್ತದೆ. ಕನ್ನಡ ಸಾಹಿತ್ಯ ದಿಗ್ಗಜರಾದ ಡಾ.ಎಂ.ಎಂ. ಕಲಬುರಗಿ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ ಬಸವರಾಜ ಸಬರದ ಅವರು  ಅರ್ಥಪೂರ್ಣವಾಗಿ ಬೆನ್ನುಡಿ ಬರೆದು ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

About the Author

ಚಿ.ಸಿ. ನಿಂಗಣ್ಣ

ಲೇಖಕ ಡಾ. ಸಿ. ಚಿ. ನಿಂಗಣ್ಣ ಅವರು ಮೂಲತಃ ಕಲಬುರಗಿಯವರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಚೆಯಲ್ಲಿ ಪಡೆದರು. “ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ” ವಿಷಯವಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್ ಡಿ ಪಡೆದರು. ಸದ್ಯ, ಕಲಬುರಗಿಯ  ಸಂತ ಜೋಸೆಫ್ ಪಿ.ಯು. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಕ.ಸಾ.ಪ. ಸಾಹಿತ್ಯ ಸಂಚಾಲಕರಾಗಿದ್ದು, ವಚನಸಾಹಿತ್ಯ, ಜಾನಪದ ಹಾಗೂ ವಿಮರ್ಶೆ ವಲಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು: ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ (ಮಹಾಪ್ರಬಂಧ) ಕನ್ನಡ ವ್ಯಾಕರಣ, ಬಡವರ ಬಂಗಾರ, ಶಿವಾಜಿ, ಹಬ್ಬಗಳು, ಸ್ಪಂದನ, ಬಸವಣ್ಣನವರ ವಚನಗಳಲ್ಲಿ ಸಮಾಜೋಧಾರ್ಮಿಕ ಪ್ರಜ್ಞೆ ...

READ MORE

Related Books