ತಮಿಳು-ಕನ್ನಡ ದ್ವಿಭಾಷಾ ನಿಘಂಟು

Author : ಪಾ. ಶ. ಶ್ರೀನಿವಾಸ

Pages 512

₹ 400.00




Year of Publication: 2006
Published by: ಪ್ರಿಯದರ್ಶಿನಿ ಪ್ರಕಾಶನ,
Address: # 138, 7ನೇ ಸಿ, ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು560104

Synopsys

ಹಿರಿಯ ಲೇಖಕ ಪಾ.ಶ. ಶ್ರೀನಿವಾಸ ಅವರ ಪ್ರಧಾನ ಸಂಪಾದಕತ್ವದಲ್ಲಿ, ಡಾ. ಪ್ರ.ವಿ. ಕುಲಕರ್ಣಿ ಹಾಗೂ ಡಾ. ಹರಿಕೃಷ್ಣ ಭರಣ್ಯ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ತಮಿಳು-ಕನ್ನಡ ದ್ವಿಭಾಷಾ ನಿಘಂಟು ಇದು. ನಿಘಂಟುಗಳು ಭಾಷೆಯ ಜಟಿಲತೆಯನ್ನು ಸಡಿಲಗೊಳಿಸಿ, ಅರ್ಥಗಳ ವಿವರಣೆ ನೀಡುತ್ತವೆ. ಮತ್ತೊಂದೆಡೆ, ನಿಘಂಟುಗಳು, ಎರಡು ಭಾಷೆಯಲ್ಲಿಯ ಸಾಮೀಪ್ಯ-ವೈರುಧ್ಯಗಳನ್ನು ತಿಳಿಯಲು ನೆರವಾಗುತ್ತವೆ. ಒಂದು ಪದದ ಅರ್ಥವನ್ನು ಬೇರೊಂದು ಭಾಷೆಯಲ್ಲಿ ತಿಳಿಯಲೂ ಸಹಕಾರಿಯಾಗುತ್ತವೆ. ಈ ಹಿನ್ನೆಲೆಯಲ್ಲಿ, ಈ ನಿಘಂಟು ತಮಿಳು ಪದಗಳನ್ನು ಕನ್ನಡಿಗರು ಅರ್ಥಮಾಡಿಕೊಳ್ಳುವುದಕ್ಕೆ ಸಹಾಯಕವಾಗಿದೆ. ಅದು ಒಂದು ವಿದ್ವತ್ ಪೂರ್ಣ ಪರಾಮರ್ಶನ ಮೌಲ್ಯದ ಕೃತಿಯೂ ಆಗಿದೆ. ತಮಿಳು ಪದಗಳನ್ನು, ಅವುಗಳ ಕನ್ನಡ ಅರ್ಥಗಳನ್ನು ದಾಖಲಿಸಿರುವ ರೀತಿಯಲ್ಲಿ ಶಿಸ್ತನ್ನು ಒಳಪಡಿಸಲಾಗಿದೆ.

About the Author

ಪಾ. ಶ. ಶ್ರೀನಿವಾಸ

ಪಾ.ಶ. ಶ್ರೀನಿವಾಸ ಅವರು ,ಮೂಲತಃ ಮಂಡ್ಯದವರು. ಕೃತಿಗಳು: (ತಮಿಳುನಿಂದ ಕನ್ನಡಕ್ಕೆ ಅನುವಾದಿತ) ತಿರುಕ್ಕುರಳ್, ಪ್ರಸಾರ ಸಣ್ಣಕತೆಗಳು, ವಿಚಾರಣೆ, ತಿರುವಳ್ಳುವರ್, ಜ್ಞಾನರಥ ಕಾಲ್ಪನಿಕ ಗದ್ಯಕಥೆ ಹಾಗೂ (ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿತ) ನಾಗಣ್ಣನ ನಾಟ್ಯ ಹಾಗೂ ಹಾರಾಡುವ ತರಗತಿ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಅನುವಾದ ಬಹುಮಾನ(1982), ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಲಭಿಸಿದೆ. ...

READ MORE

Related Books