ಕಂಪ್ಯೂಟರ್‌-ತಂತ್ರಜ್ಞಾನ ಪದವಿವರಣ ಕೋಶ

Author : ಟಿ.ಜಿ. ಶ್ರೀನಿಧಿ

Pages 342




Year of Publication: 2017
Published by: ಕನ್ನಡ ಅಭಿವೃದ್ಧಿ ಪ್ರಾಧಿಕಾರ
Address: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೊಠಡಿ ಸಂಖ್ಯೆ 263, 2ನೇ ಮಹಡಿ, ವಿಧಾನ ಸೌಧ, ಬೆಂಗಳೂರು 560 001
Phone: 08022286773

Synopsys

ಕಂಪ್ಯೂಟರ್ ವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ 300ಕ್ಕೂ ಹೆಚ್ಚು ಇಂಗ್ಲಿಷ್ ಪದಗಳ ಕನ್ನಡ ವಿವರಣೆ ಕೃತಿಯಲ್ಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ನುಡಿಕೋಶವನ್ನು ಪ್ರಕಟಿಸಿದೆ. ಒಂದೊಂದು ಪದದ ಬಗ್ಗೆಯೂ ಪ್ಯಾರಾಗಟ್ಟಲೆ ಮಾಹಿತಿ ನೀಡಲಾಗಿದೆ. ಹಾಗಾಗಿ ಇದನ್ನು ಕಂಪ್ಯೂಟರ್‌ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಟ್ಟ ವಿಶ್ವಕೋಶ ಎಂದೂ ಕರೆಯಬಹುದು. 

ತಂತ್ರಜ್ಞಾನದ ಬಗ್ಗೆ ಅಪಾರ ಕೆಲಸ ಮಾಡಿರುವ ಟಿ.ಜಿ. ಶ್ರೀನಿಧಿ ಕೃತಿಯ ಲೇಖಕರು. ನಾಗೇಶ ಹೆಗಡೆ, ಜಗನ್ನಾಥ ಪ್ರಕಾಶ್‌ ಅವರಂತಹ ಹಿರಿಯರು ಪದಕೋಶದ ಸಂಪಾದಕೀಯ ಮಂಡಳಿಯಲ್ಲಿದ್ದಾರೆ. 

About the Author

ಟಿ.ಜಿ. ಶ್ರೀನಿಧಿ

ಟಿ.ಜಿ. ಶ್ರೀನಿಧಿ ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಪ್ರೋಗ್ರಾಮರ್ ಅನಲಿಸ್ಟ್ ಆಗಿ ಉದ್ಯೋಗ ಮಾಡುತ್ತಿದ್ಧಾರೆ.  ವಿಜ್ಞಾನ-ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುವುದು ಇವರ  ಅಚ್ಚುಮೆಚ್ಚಿನ ಹವ್ಯಾಸ. ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಕನ್ನಡ ಜಾಲ ತಾಣ 'ಇಜ್ಞಾನ ಡಾಟ್ ಕಾಮ್' (www.ejnana.Com) ನ ರೂವಾರಿ. ನಾಲ್ಕು ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಆರು ಪುಸ್ತಕಗಳು ಈವರೆಗೆ ಪ್ರಕಟವಾಗಿವೆ. ಪ್ರಸ್ತುತ ಉದಯವಾಣಿಯಲ್ಲಿ 'ವಿಜ್ಞಾಪನೆ' ಅಂಕಣ ಪ್ರಕಟವಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ, ಉಷಾಕಿರಣ ಹಾಗೂ ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರರೂ ಆಗಿದ್ದರು. 'ಶ್ರೀನಿಧಿಯ ಪ್ರಪಂಚದಲ್ಲಿ (WWW.Srinidhi.net.in) ಬ್ಲಾಗಿಸುವುದು, ಛಾಯಾಗ್ರಹಣ, ಪ್ರವಾಸ ಹಾಗೂ ಪುಸ್ತಕಗಳ ಓದು ...

READ MORE

Related Books