ದೃಶ್ಯಧ್ಯಾನ

Author : ಕೆ.ವಿ. ಸುಬ್ರಹ್ಮಣ್ಯಂ

Pages 128

₹ 150.00
Year of Publication: 2017
Published by: ಕರ್ನಾಟಕ ಲಲಿತ ಕಲಾ ಅಕಾಡೆಮಿ
Address: ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು-560002
Phone: 0802248029

Synopsys

ಕೆ.ವಿ ಸುಬ್ರಹ್ಮಣ್ಯಂ ಕನ್ನಡ ದೃಶ್ಯ ಸಂಸ್ಕ್ರತಿಯ ಸಾಕ್ಷರತೆಗೆ ಗಣನೀಯ ಕೊಡುಗೆ ನೀಡಿದವರು.  ಅನೇಕ ದಶಕಗಳಿಂದ ಕಲಾ ಸಾಹಿತ್ಯವನ್ನು ಕನ್ನಡದಲ್ಲಿ ಬಹಳ ನಿಷ್ಠೆಯಿಂದ , ಕಾಳಜಿಯಿಂದ ಬರೆದವರು.  ಕಲಾ ಸಾಹಿತ್ಯ, ಕಲಾ ವಿಮರ್ಶೆಯಂತಹ, ನಿರ್ಲಕ್ಷಿತ ಕ್ಷೇತ್ರದ ಸಾಧನೆ ಮಾಡಲು ಬದ್ಧತೆ, ಪ್ರಾಮಾಣಿಕತೆ , ನಿಷ್ಠೂರತೆಗಳು ಹೇಗೆ ಮು‍ಖ್ಯ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ದೃಶ್ಯ ಕಲೆಯ ಇತಿಹಾಸದ ಬಗೆ ವಿವರಣೆಯನ್ನು ನೀಡುತ್ತದೆ. ಈ ವರೆಗೂ ಅ‍ಪ್ರಕಟಿತ, ಕೆಲವು ಚಿತ್ರಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ.

About the Author

ಕೆ.ವಿ. ಸುಬ್ರಹ್ಮಣ್ಯಂ
(18 December 1949)

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಾಗಟ ಅಗ್ರಹಾರದವರಾದ ಕೆ.ವಿ. ಸುಬ್ರಹ್ಮಣ್ಯಂ (ಜನನ: 18-12-1949) ಅವರು ದೃಶ್ಯಕಲೆಯ ಇತಿಹಾಸ- ವಿಮರ್ಶೆಗಳಿಗೆ ಸಂಬಂಧಿಸಿದ ಸಾಹಿತ್ಯ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು. ಕರ್ನಾಟಕದ ಆಧುನಿಕ ಶಿಲ್ಪಕಲೆ (1994), ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ (2007), ಕೆ. ವೆಂಕಟಪ್ಪ ಪುನರಾಲೋಕನ, ಇನ್ ಸ್ಟಾಲೇಷನ್ ಕಲಾ ಪ್ರಪಂಚ ಅವರ ಕೃತಿಗಳು. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ದೃಶ್ಯಕಲಾ ವಿಮರ್ಶೆ ಹಾಗೂ ಲೇಖನಗಳನ್ನು ಪ್ರಕಟಿಸಿರುವ ಅವರು ಸುಮಾರು ನಾಲ್ಕು ದಶಕಗಳ ಕಾಲ ಸತತವಾಗಿ ವಿಮರ್ಶೆ ಬರೆಯುತ್ತ ಬಂದಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ (1999), ಚೆನ್ನೈನ ಯುನೈಟೆಡ್ ರೈಟರ್ಸ್ ...

READ MORE

Related Books