ಕಲಾ ಸಂತೆಜಾತ್ರೆ ಕಲಾಯಾತ್ರೆ

Author : ರಾಜು ಮಳವಳ್ಳಿ

Pages 114

₹ 200.00




Year of Publication: 2016
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ಕನ್ನಡ ಭವನ, ಎರಡನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು-560002
Phone: 08022480297

Synopsys

ಲೇಖಕ ರಾಜು ಮಳವಳ್ಳಿ ಅವರು ಸಂಪಾದಿಸಿದ ’ಕಲಾ ಸಂತೆಜಾತ್ರೆ ಕಲಾಯಾತ್ರೆ’ ವೈಚಾರಿಕ ಸಾಹಿತ್ಯ ಚಿತ್ರ ಸಂಪುಟ-2ರ ಕೃತಿ. ಡಾ. ಎಂ.ಎಸ್. ಮೂರ್ತಿ ಅವರು ಪ್ರಧಾನ ಸಂಪಾದಕರು. 'ದೃಶ್ಯಕಲೆಯ ವ್ಯಾಕರಣ' ಎನ್ನುವುದನ್ನು ಇಂದಿನ ಕಲಾಶಿಕ್ಷಣ ವಿದ್ಯಾರ್ಥಿಗಳಿಗೆ ಇನ್ನಷ್ಟು ಮನನ ಮಾಡುವ ಅಗತ್ಯವಿದ್ದು, ಈ ಕೃತಿಯು ಸಮರ್ಪಕವಾಗಿ ಬಳಕೆಯಾಗುತ್ತದೆ. ಈ ನಿಟ್ಟಿನಲ್ಲಿ. ಇಂದಿನ ಕಲಾ ಸಮುದಾಯದಲ್ಲಿ ಯುವ ಕಲಾವಿದರು ರೇಖಾಚಿತ್ರವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ? ಎಂಬ ವಾಸ್ತವವನ್ನು ದಾಖಲಿಸುವ ದೃಷ್ಟಿಯಿಂದ ಈ ಪ್ರಯೋಗ ನಡೆದಿದೆ. ಯುವ ಕಲಾವಿದರಿಗೆ ರೇಖೆಗಳ ಕುರಿತು ಆಸಕ್ತಿ ಮೂಡಿಸುವ ಸಲುವಾಗಿ 'ಸಂತೆ ಜಾತ್ರೆ-ಕಲಾಯಾತ್ರೆ' ಎಂಬ ಯೋಜನೆಯನ್ನು ಅಕಾಡೆಮಿಯ ಅವಧಿಯ ಪ್ರಾರಂಭದಲ್ಲೇ ಅನುಷ್ಠಾನಗೊಳಿಸಲಾಗಿದೆ. ಅಕಾಡೆಮಿಯ ಉದ್ದೇಶದಂತೆ ಹಳ್ಳಿಗಳ ಸಂತೆ, ಜಾತ್ರೆಗಳೆಂಬ ಆಚರಣೆ, ನಂಬಿಕೆ, ಅಲ್ಲಿನ ಜನರ ಪರಸ್ಪರ ಸ್ಪಂದನೆಗಳು ರೇಖಾಚಿತ್ರಗಳಾಗಿ ಚಾರಿತ್ರಿಕವಾಗಿ ಇಲ್ಲಿ ದಾಖಲಾಗಿವೆ. ಪೂರ್ಣ ಕಲಾಕೃತಿಗೆ ಬಳಸಿಕೊಂಡು ರೇಖೆಗಳನ್ನು ಧ್ಯಾನಿಸಿದ ಜಗದ್ವಿಖ್ಯಾತ ಕಲಾವಿದ ’ಪಾಲ್ ಕ್ಲೆ’ ಯ ಕೆಲವು ರೇಖೆಗಳೊಂದಿಗೆ ಅವರ ವೈಚಾರಿಕ ಬರಹವೂ ಇಲ್ಲಿದೆ. ಹಿರಿಯ ಕಲಾವಿದರು ಹೇಗೆ ರೇಖೆಗಳನ್ನು ತಮ್ಮ ಕಲಾರಚನೆಗೆ ಬಳಸಿಕೊಂಡಿದ್ದರು ಎನ್ನುವ ಅಂಶವನ್ನು ದಾಖಲಿಸುವ ದೃಷ್ಟಿಯಿಂದ ಅವರ ಕೃತಿಗಳನ್ನು ಕೂಡ ಇಲ್ಲಿ ಪ್ರಕಟಿಸಲಾಗಿದೆ. ಒಟ್ಟಾರೆಯಾಗಿ, ಗ್ರಾಮೀಣ ನೆಲೆಯ ಎಲ್ಲಾ ’ದೃಶ್ಯ ಸಂಭ್ರಮ’ ಗಳ ಚಿತ್ರಣಗಳನ್ನು ತಿಳಿಯಲು ಈ ಕೃತಿ ಸ್ಫೂರ್ತಿಯಾಗುತ್ತದೆ.

About the Author

ರಾಜು ಮಳವಳ್ಳಿ

ಲೇಖಕ -ಪತ್ರಕರ್ತ ರಾಜು ಮಳವಳ್ಳಿ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಬೆಂಗಳೂರು ಆವೃತ್ತಿಯಲ್ಲಿ ಉಪಸಂಪಾದಕರಾಗಿದ್ದಾರೆ. ‘ಕನ್ನಡ ಸಿರಿ ಪುಂಡಲೀಕ ಹಾಲಂಬಿ’ ಎಂಬುದು ಇವರ ಕೃತಿ.  ಅಂದದೂರು (ಬೆಂಗಳೂರು ನಗರ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಸಂಚಿಕೆ),  ಕೆಂಪಾಂಬುಧಿ (ಬೆಂಗಳೂರು ನಗರ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಸಂಚಿಕೆ),  ನವರತ್ನ ಕನ್ನಡ ಚಿಂತನೆ (ಸಮ್ಮೇಳನಾಧ್ಯಕ್ಷರ ಭಾಷಣಗಳ ಸಂಕಲನ), ಅಂಗೈಯಲ್ಲಿ ಬೆಂಗಳೂರು (ಶ್ರೀ ರಾ.ನಂ.ಚಂದ್ರಶೇಖರ್ ಅವರೊಡಗೂಡಿ) ಕೃತಿಗಳನ್ನು ಸಂಪಾದಿಸಿದ್ದಾರೆ.  ...

READ MORE

Related Books