ರವಿಕಾಶಿ ಅವರು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಬರೆದ ನಲ್ವತ್ತಕ್ಕೂ ಹೆಚ್ಚು ಲೇಖನಗಳಲ್ಲಿ ಆಯ್ದ ಕೆಲವು ಲೇಖನಗಳನ್ನು ಇದೀಗ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ.
ಅವರು ಸ್ವತಃ ಕಲಾವಿದನಾಗಿ ಪಡೆದ ಅನುಭವವಲ್ಲದೆ ಅವರಿಗಿರುವ ಪೂರ್ವಸಂಸ್ಕಾರ, ವ್ಯಾಪಕವಾದ ಓದು, ನಿರಂತರವಾಗಿ ದೇಶ-ವಿದೇಶಗಳಲ್ಲಿ ಸಂಚಾರ, ಕಲಾ ಶಿಬಿರಗಳಲ್ಲಿ ಭಾಗವಹಿಸುವಿಕೆ, ಇಂದಿನ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಕಲಾವಿದರೊಂದಿಗೆ ಚರ್ಚೆ, ಒಡನಾಟ, ಕಲಾಬರಹಗಾರರು, ಗ್ಯಾಲರಿಯ ಪ್ರೇಕ್ಷಕರು ಇವರೇ ಮುಂತಾದವರಲ್ಲಿ ನಡೆಸುವ ಮಾತುಕತೆ, ಸಂದರ್ಶನ, ಲೇಖನ ಬರೆಯುವಾಗ ಇರುವ ಪದಸಂಪತ್ತು, ಒಂದು ಆಲೋಚನೆಯನ್ನು ಹಲವು ನಿಟ್ಟುಗಳಿಂದ ನೋಡಿ ಬೆಳೆಸುತ್ತಾ ಹೋಗುವಿಕೆ ಇವೆಲ್ಲದರ ಒಟ್ಟು ಮೊತ್ತ ಅವರಿಗಿರುವುದರಿಂದಲೇ ಇಲ್ಲಿಯ ಲೇಖನಗಳು ತಿಳಿಸುತ್ತದೆ.