
“ನನ್ನೊಳಗಿನ ಮಾತುಕತೆ" ಎ.ಎಂ ಪ್ರಕಾಶ್ ಅವರ ಕೃತಿಯಾಗಿದ್ದು, ಇಲ್ಲಿ ಅವರ ವಿಭಿನ್ನ ರೇಖಾ ಚಿತ್ರಗಳನ್ನು ಕಾಣಬಹುದು. ಪ್ರಕಾಶ್ ಅವರು ಕಲಾವಿದ್ಯಾರ್ಥಿಯಾಗಿದ್ದಾಗಿನಿಂದಲೂ ಹಿರಿಯ ಕಲಾವಿದರುಗಳಾದ ಕೆ.ಕೆ. ಹೆಬ್ಬಾರ್, ಪಾಬ್ಲೋ ಪಿಕಾಸೊ, ಕೆ.ಜಿ. ಸುಬ್ರಹ್ಮಣ್ಯಂ ಪೌಲ್ ಕ್ಲೀ ಮುಂತಾದವರ ರೇಖಾಚಿತ್ರಗಳನ್ನು ಬೆರಗಿನಿಂದ ಕಂಡು, ಪ್ರೇರಿತಗೊಂಡು ರೇಖೆಗಳನ್ನು ತನ್ನ ಕಲಾಭಿವ್ಯಕ್ತಿ ಯಾಗಿಸಿಕೊಂಡವರು. ಇವರ ರೇಖಾಕೃತಿಗಳನ್ನು ಕಂಡು "ಈ ಕುರಿತು ಪುಸ್ತಕವೊಂದು ಪ್ರಕಟವಾದರೆ ಚೆನ್ನ" ಎಂದು ಮುಂದೆ ಬಂದವರು ಸುಂದರ ಪ್ರಕಾಶನದ ಇಂದಿರಾ ಸುಂದರ್. ಮುತುವರ್ಜಿ ವಹಿಸಿ ಕಲಾತ್ಮಕವಾದ ಅಪರೂಪದ ಈ ನನ್ನೊಳಗಿನ ಮಾತುಕತೆ ಪುಸ್ತಕ ಮೂಡಲು ಕಾರಣರಾಗಿದ್ದಾರೆ. ಈ ಪುಸ್ತಕದಲ್ಲಿ ಪ್ರಕಾಶ್ ಅವರ ಬಾಲ್ಯದಲ್ಲಿನ ಕೆಲವು ನೆನಪಿನ ಚಿತ್ರಿಕೆಗಳ ಮೂಲಕ ಅವರ ದೃಶ್ಯಜಗತ್ತು ತೆರೆದುಕೊಂಡ ಮಿಂಚುಗಳನ್ನು ಪುಟ್ಟ ಬರಹಗಳ ಮೂಲಕ ದಾಖಲಿಸುವ ಪ್ರಯತ್ನ ಮಾಡಿದ್ದಾರೆ.
©2025 Book Brahma Private Limited.