ಸಗರನಾಡಿನ ದೃಶ್ಯಕಲೆ

Author : ಮಲ್ಲಿಕಾರ್ಜುನ ಬಾಗೋಡಿ

Pages 34

₹ 10.00




Year of Publication: 2011
Published by: ಪ್ರಸಾರಾಂಗ, ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರಗಿ

Synopsys

ಸುರಪುರದ ಪ್ರಭು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿದ ’ಸಗರನಾಡಿನ ದೃಶ್ಯಕಲೆ’ ಕುರಿತಾದ ಪ್ರಬಂಧದ ವಿಸ್ತೃತ ರೂಪ ಈ ಕಿರು ಹೊತ್ತಿಗೆ.
ಕೃಷ್ಣಾ-ಭೀಮಾ ನದಿಗಳ ನಡುವಿನ ಪ್ರದೇಶವನ್ನು ಸಗರನಾಡು ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ಸಂಸ್ಥಾನವನ್ನು ಸ್ಥಾಪಿಸಿ ರಾಜ್ಯಭಾರ ಮಾಡಿದ ಸುರಪುರ ನಾಯಕರಿಂದಾಗಿ ಸಗರನಾಡನ್ನು ಸುರಪುರ ನಾಡೆಂತಲೂ ಕರೆಯಲಾಗುತ್ತದೆ. ಬಯಲು ಸೀಮೆಯೊಂದಿಗೆ ಬೆಟ್ಟಗುಡ್ಡಗಳ ಸಾಲುಗಳ ಮಧ್ಯೆ ಇರುವ ಈ ಪ್ರದೇಶ ನೋಡಲು ಬಲು ಸುಂದರ. ಸಾಂಸ್ಕೃತಿಕವಾಗಿಯೂ ಈ ಪ್ರದೇಶ ಶ್ರೀಮಂತ ವಲಯ ಎನಿಸಿಕೊಂಡಿದೆ. ಬಿಜಾಪೂರದ ಆದಿಲ್‌ಷಾಹಿಗಳು, ಬಹಮನಿ ಸುಲ್ತಾನರು ಮತ್ತು ಸುರಪುರ ನಾಯಕ ಮನೆತನದವರು ಕಲೆಗಳಿಗೆ ವಿಶೇಷ ಮನ್ನಣೆಯನ್ನು ನೀಡಿರುವರು. ರಾಜಾಶ್ರಯ ತಪ್ಪಿದ ಮೇಲೆ ಮಠಾಧೀಶರು, ಶ್ರೀಮಂತ ವ್ಯಕ್ತಿಗಳು ಇಲ್ಲವೆ ಅಧಿಕಾರಿ ವರ್ಗದವರು ಈ ಭಾಗದಲ್ಲಿನ ವಿವಿಧ ಪ್ರಕಾರದ ಕಲೆಗಳನ್ನು ಪೋಷಿಸಿಕೊಂಡು ಬಂದಿರುವರು. ಒಂದೊಮ್ಮೆ ಈ ಭಾಗದಲ್ಲಿ ನೇಯ್ಗೆ ಕಲೆಯೂ ವಿಶೇಷವಾಗಿ ಕಾಣಿಸಿಕೊಂಡಿದೆ. ರಂಗಂಪೇಟೆ, ರುಕ್ಮಾಪುರ, ಗೋಗಿ ಮತ್ತಿತರ ಗ್ರಾಮಗಳಲ್ಲಿ ತಾಳಮಂಡಲ, ಮೋತಿಚುರಿ ಹೆಸರುಳ್ಳ ಕಲಾತ್ಮಕ ವಿನ್ಯಾಸದ ಸೀರೆಗಳನ್ನು ನೇಯಲಾಗುತ್ತಿದೆ. ಹಾಗೆಯೇ ಈ ಭಾಗದ ಗೋನಾಳ, ಗಾಜರಕೋಟ ಮತ್ತಿತರೆಡೆ ಸುಂದರವಾದ ಕುದುರೆ ಶಿಲ್ಪಗಳನ್ನು ನಿರ್ಮಿಸಲಾಗುತ್ತಿದೆ. ಈ ವೃತ್ತಿಪರ ಕುಶಲಕರ್ಮಿಗಳು ಒಂದೊಮ್ಮೆ ಸುರಪುರ ಅರಸರ ಪೋಷಣೆಯೊಂದಿಗೆ ತಮ್ಮ ಕಸುಬನ್ನು ಕಲೆಯಾಗಿಸಿಕೊಂಡದ್ದೂ ಉಂಟು. ಇಂಥ ಇನ್ನೂ ಅನೇಕ ವಿಷಯಗಳನ್ನು ಅತ್ಯಂತ ವಿವರವಾಗಿ ಕಟ್ಟಿಕೊಡಲಾಗಿದೆ.   
 

About the Author

ಮಲ್ಲಿಕಾರ್ಜುನ ಬಾಗೋಡಿ
(10 June 1974)

ಕಲಬುರಗಿ ಜಿಲ್ಲೆಯ ಚಿತ್ತಾಪುರದವರಾದ ಡಾ. ಮಲ್ಲಿಕಾರ್ಜುನ ಬಾಗೋಡಿ ಅವರು ದೃಶ್ಯಕಲಾ ಸಾಹಿತ್ಯದ ಪ್ರಮುಖ ಲೇಖಕರು. ಸ್ವತಃ ಕಲಾವಿದರಾಗಿರುವ ಮಲ್ಲಿಕಾರ್ಜುನ ಅವರು ಸದ್ಯ ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಸುರಪುರದ ಚಿತ್ರಕಲೆ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ದೊರೆತಿದೆ. ...

READ MORE

Related Books