ಅನುಕ್ತ

Author : ರವಿಕುಮಾರ ಕಾಶಿ

Pages 240

₹ 325.00




Year of Publication: 2012
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಆದಿಮ ಕಾಲದಿಂದ ಹಿಡುದು ಇತ್ತೀಚಿನವರೆಗಿನ ಕಲಾವಿಕಾಸದಲ್ಲಿ ಕಂಡುಬರುವ ವಿವಿಧ ಪಂಥಗಳ, ಶೈಲಿಗಳ ಕಲಾಕೃತಿಗಳನ್ನು ಪರಿಶೀಲಿಸುವ ಜೊತೆಜೊತೆಗೇ ಪ್ರಮುಖ ಕಲಾವಿದರನ್ನೂ ಪರಿಚಯಮಾಡಿಕೊಡುವ, ಕಲೆಯನ್ನು ಕುರಿತು, ಅದರ ವಿಧಾನಗಳನ್ನು ಕುರಿತು, ಅದರ ತಂತ್ರವನ್ನು ಕುರಿತು ವಿಶೇಷ ಬೆಳಕನ್ನು ಚೆಲ್ಲುವ, ಎಲ್ಲಕ್ಕಿಂತ ಮಿಗಿಲಾಗಿ ಓದುಗರನ್ನು ‘ನೋಡು’ವಂತೆ ಪ್ರೇರೇಪಿಸುವ ಅಪರೂಪದ ಪುಸ್ತಕ ಇದು. ಕಲೆಯ ಬಗ್ಗೆ ಇಷ್ಟು ಒಳನೋಟಗಳುಳ್ಳ, ಕಲಾಸಂಪತ್ತನ್ನು ಅರ್ಥಮಾಡಿಸಿ, ಅದರ ಗುಣಗ್ರಹಣಕ್ಕೆ ಹಾದಿಗಳನ್ನು ಮಾಡಿಕೊಡುವ ಇಂಥ ಇನ್ನೊಂದು ಪುಸ್ತಕವನ್ನು ನಾನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಇಲ್ಲ ಕಲೆಯನ್ನೂ ಮನುಷ್ಯನಿರ್ಮಿತವೆಂದೇ ಬಗೆದು ಅದನ್ನು ಕಲಾವಿದರಲ್ಲದ ಇತರ ಜನರಿಗೆ ಸಾಧ್ಯವಾದಷ್ಟು ಮಟ್ಟಿಗೆ ಪರಿಚಯಿಸಿ ಅವರ ಅಬಿರುಚಿಯನ್ನು ಎತ್ತರಿಸಬೇಕೆಂಬ ಕೆಲಸವನ್ನು ಹೀಗೆ ಯಶಸ್ವಿಯಾಗಿ ಮಾಡಬಹುದೆಂಬುದಕ್ಕೆ ‘ಅನುಕ್ತ’ ಎಂಬ ಈ ಪುಸ್ತಕವೇ ಸಾಕ್ಷಿ... ರವಿಕುಮಾರ್ ಸ್ವತಃ ಒಬ್ಬ ಸಮರ್ಥ ಕಲಾವಿದರು. ಆದ್ದರಿಂದ ಅವರ ಈ ಪುಸ್ತಕಕ್ಕೆ ಒಂದು ಬಗೆಯ ಅಧಿಕೃತತೆ (ಅಥೆಂಟಿಸಿಟಿ) ಪ್ರಾಪ್ತವಾಗಿದೆ. ಇಲ್ಲಿನ ಪುಟಪುಟದಲ್ಲೂ ಚಿತ್ರ, ಶಿಲ್ಪಗಳ ಛಾಯಾಚಿತ್ರಗಳಿದ್ದು ಅವು ಕಲೆಯ ಇತಿಹಾಸ, ರಾಜಕೀಯ ವಿದ್ಯಮಾನ, ಪ್ರಸ್ತುತ ಜೀವನ, ಕಲಾ ಚಳವಳಿ, ಶೈಲಿಯ ವೈವಿಧ್ಯ ಮೊದಲಾದುವುಗಳನ್ನು ಮನಮುಟ್ಟುವಂತೆ ಸ್ಪಷ್ಟಪಡಿಸುವ ಕನ್ನಡಿಗಳಾಗಿವೆ. -ಎಸ್. ದಿವಾಕರ್ (ಮುನ್ನುಡಿಯಿಂದ)

About the Author

ರವಿಕುಮಾರ ಕಾಶಿ

ಕಲಾವಿದ ಹವ್ಯಾಸಿ ಬರಹಗಾರ ರವಿಕುಮಾರ ಕಾಶಿ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಕಾಲೇಜ್‌ ಆಫ್‌ ಫೈನ್‌ ಆರ್ಟ್‌‌ನಿಂದ ಪದವಿ ಹಾಗೂ ಬರೋಡಾದ ಫೈನ್‌ ಆರ್ಟ್ಸ್‌ ಫ್ಯಾಕಲ್ಟಿ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿತ್ರ, ಶಿಲ್ಪ, ಛಾಯಾಗ್ರಹಣ ಮತ್ತು ಇನ್‌ಸ್ಟಾಲೇಷನ್‌ ಕ್ಷೇತ್ರದಲ್ಲಿ ಕಲಾಕೃತಿ ರಚಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಜೊತೆಜೊತೆಗೆ ದೃಶ್ಯಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡುತ್ತಾರೆ. ಇವರ ಕಣ್ನೆಲೆ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ವಿವಿಧ ದೇಶಗಳಲ್ಲಿ ದೃಶ್ಯಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಕನ್ನಡ ಮಾತ್ರವಲ್ಲದೆ ಇಂಗ್ಲಿಷ್‌ ಭಾಷೆಯಲ್ಲಿಯೂ ಕೃತಿ ರಚಿಸಿದ್ದಾರೆ. ಇವರ ಸೇನಾ ಪರ್ವ ಕೃತಿಯು ಕನ್ನಡ ...

READ MORE

Related Books