ದೃಶ್ಯ ಸಂಕುಲ

Author : ಮಲ್ಲಿಕಾರ್ಜುನ ಬಾಗೋಡಿ

Pages 104

₹ 150.00




Year of Publication: 2016
Published by: ಸರಚಂದ್ರ ಪ್ರಕಾಶನ
Address: ನಂ. 2-907/12, ಗುಬ್ಬಿ ಕಾಲೋನಿ, ಗುಲಬರ್ಗಾ (ಕಲಬುರಗಿ)-585105 (ಕರ್ನಾಟಕ)
Phone: 94486 52157

Synopsys

ದೃಶ್ಯ ಸಂಕುಲ ಮಲ್ಲಿಕಾರ್ಜುನ ಬಾಗೋಡಿ ಅವರ 10ನೇ ಕೃತಿ.  ಪ್ರಾಚೀನ ಚಿತ್ರಿತ ನೆಲೆಗಳು, ಸಮಕಾಲೀನ ಕಲೆಯ ಒಲವುಗಳು, ಕೆಲ ಹೊಸ ಸಂಗತಿಗಳೊಂದಿಗೆ ರೂಪಿಸಲ್ಪಟ್ಟ ವೈಚಾರಿಕ ಬರಹಗಳು, ದೃಶ್ಯಕಲೆಯ ಸಾಧಕರು-ಪೋಷಕರು ಸೇರಿದಂತೆ ಒಟ್ಟು 11 ಲೇಖನಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ.  ಸಂಸ್ಕೃತಿಯ ಬಹುಮುಖಿ ನೆಲೆಗಳನ್ನು ಅನಾವರಣಗೊಳಿಸುವ ಇಲ್ಲಿನ ಲೇಖನಗಳಲ್ಲಿ ಕೆಲವು ಬೇರೆ ಬೇರೆ ಸಂದರ್ಭದಲ್ಲಿ ಪ್ರಕಟವಾಗಿದ್ದವು, ಕೆಲವು ಕೆಲವು ವಿಚಾರಗೋಷ್ಠಿಗಳಲ್ಲಿ ಮಂಡಿತ ಪ್ರಬಂಧಗಳು.

ರಾಷ್ಟ್ರಕೂಟ ಪ್ರಭುತ್ವ ಮತ್ತು ದೃಶ್ಯಕಲೆ, ಅವರ್ಣನೀಯ ನೇಸರಗಾನ, ನಾಲವಾರ ವಾರದ ಮನೆಯಲ್ಲಿನ ಭಿತ್ತಿ ಚಿತ್ರಗಳು, ಪೇಠಶಿರೂರ ಲಾಳಿಯವರ ಮನೆಯಲ್ಲಿನ ಭಿತ್ತಿ ಚಿತ್ರಗಳು, ಅಬ್ಬೆ ತುಮಕೂರು ಮಾಲಿಗೌಡರ ಮನೆ : ದೃಶ್ಯಾತ್ಮಕ ನೆಲೆಯಲ್ಲಿ,  ಗರುಡಾದ್ರಿ ಮನೆತನ : ಕೆಲ ಹೊಸ ಸಂಗತಿಗಳು,  ಮಾಣಿಕನಗರ ಮಹಾಸಂಸ್ಥಾನ: ಬೀದರ ಸ್ಕೂಲ್‌ನ ನೆಲೆಯಾಗಿತ್ತೆ?, ಕಲಾತ್ಮಕ ವಿನ್ಯಾಸದ ಸಗರನಾಡ ಸೀರೆಗಳು, ಸಾರ್ಥಕ ಬದುಕಿಗೆ ನೆರಳಿನಾಸರೆ, ಪ್ರೊ. ಎ.ಎಸ್. ಪಾಟೀಲ : ಧರ್ಮ-ಅಧ್ಯಾತ್ಮಗಳ ಸಮ್ಮಿಲನ, ಚಿತ್ತಾಪುರ ತಾಲೂಕಿನ ಸಾಂಸ್ಕೃತಿಕ ಒಳನೋಟ.

About the Author

ಮಲ್ಲಿಕಾರ್ಜುನ ಬಾಗೋಡಿ
(10 June 1974)

ಕಲಬುರಗಿ ಜಿಲ್ಲೆಯ ಚಿತ್ತಾಪುರದವರಾದ ಡಾ. ಮಲ್ಲಿಕಾರ್ಜುನ ಬಾಗೋಡಿ ಅವರು ದೃಶ್ಯಕಲಾ ಸಾಹಿತ್ಯದ ಪ್ರಮುಖ ಲೇಖಕರು. ಸ್ವತಃ ಕಲಾವಿದರಾಗಿರುವ ಮಲ್ಲಿಕಾರ್ಜುನ ಅವರು ಸದ್ಯ ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಸುರಪುರದ ಚಿತ್ರಕಲೆ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ದೊರೆತಿದೆ. ...

READ MORE

Related Books