ಸುರಪುರ ಚಿತ್ರಕಲೆ

Author : ಮಲ್ಲಿಕಾರ್ಜುನ ಬಾಗೋಡಿ

Pages 240

₹ 200.00
Year of Publication: 2009
Published by: ಸರಚಂದ್ರ ಪ್ರಕಾಶನ
Address: ನಂ. 2-907/12, ಗುಬ್ಬಿ ಕಾಲೋನಿ, ಗುಲಬರ್ಗಾ (ಕಲಬುರಗಿ)-585105 (ಕರ್ನಾಟಕ)
Phone: 94486 52157

Synopsys

ಪಿಎಚ್.ಡಿ. ಪದವಿಗಾಗಿ ಮಲ್ಲಿಕಾರ್ಜುನ ಬಾಗೋಡಿ ಅವರು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ’ಸುರಪುರ ಶೈಲಿಯ ಚಿತ್ರಕಲೆ’ ಪ್ರಬಂಧ. ಸುರಪುರ ಸಂಸ್ಥಾನ  ಇತಿಹಾಸ, ಸಾಹಿತ್ಯ, ಕಲೆ, ವಾಸ್ತುಶಿಲ್ಪ ಕುರಿತು ಈಗಾಗಲೇ ಅಧ್ಯಯನಗಳು ಆಗಿವೆ. ಆದರೆ, ಸುರಪುರ ಸಂಸ್ಥಾನದಲ್ಲಿ ಅರಳಿದ ಚಿತ್ರಕಲೆಯ ಕುರಿತು ಸಾಂದರ್ಭಿಕ ಬರೆಹಗಳು ಬಂದಿರುವುದನ್ನು ಬಿಟ್ಟರೆ, ಸಮಗ್ರವಾದ ಅಧ್ಯಯನ ನಡೆದಿರಲಿಲ್ಲ. ಆ ಕೊರತೆಯನ್ನು ಈ ಪುಸ್ತಕ ತುಂಬಿದೆ.

ಬಾಗೋಡಿಯವರೇ ಹೇಳುವಂತೆ ’ಸುರಪುರ ಚಿತ್ರಕಲೆ’ ಭಾರತೀಯ ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ತನ್ನ ವಿಶಿಷ್ಟ ರಚನೆ ಹಾಗೂ ತಂತ್ರಗಳಿಂದ ಸ್ವತಂತ್ರ ಶೈಲಿಯನ್ನು ಕಂಡುಕೊಂಡಿದೆ’. ಇಂಥ ಒಂದು ವಿಶಿಷ್ಟ ಕಲೆಯನ್ನು ಪುಸ್ತಕದ ರೂಪದಲ್ಲಿ ತರುವುದರ ಮೂಲಕ ಕಲಾಸಕ್ತರಿಗೆ ಹತ್ತಿರವಾಗಿದ್ದಾರೆ. ಕ್ಷೇತ್ರಕಾರ್ಯ ಅವಲಂಬಿಸಿ ರೂಪುಗೊಂಡಿದೆ.. ನಾಡಿನ ಅನೇಕ ಕಡೆಗಳಲ್ಲಿ ಸಂಚರಿಸಿ, ವ್ಯವಸ್ಥಿತವಾಗಿ ಪ್ರಬಂಧವನ್ನು ಸಿದ್ಧಪಡಿಸಿದ್ದಾರೆ. 
ಒಟ್ಟು ಒಂಭತ್ತು ಅಧ್ಯಾಯಗಳಲ್ಲಿ ಸುರಪುರ ಚಿತ್ರಕಲೆಯ ವಿಷಯಗಳು ಹರಡಿವೆ. ಸಮಾರೋಪದಲ್ಲಿ ಪ್ರತಿಯೊಂದು ಅಧ್ಯಾಯದಲ್ಲಿ ಚರ್ಚಿಸಿದ ವಿಷಯಗಳ ಪಟ್ಟಿಯೊಂದಿಗೆ ಕೆಲವು ಫಲಿತಗಳನ್ನು ನೀಡಲಾಗಿದೆ.

About the Author

ಮಲ್ಲಿಕಾರ್ಜುನ ಬಾಗೋಡಿ
(10 June 1974)

ಕಲಬುರಗಿ ಜಿಲ್ಲೆಯ ಚಿತ್ತಾಪುರದವರಾದ ಡಾ. ಮಲ್ಲಿಕಾರ್ಜುನ ಬಾಗೋಡಿ ಅವರು ದೃಶ್ಯಕಲಾ ಸಾಹಿತ್ಯದ ಪ್ರಮುಖ ಲೇಖಕರು. ಸ್ವತಃ ಕಲಾವಿದರಾಗಿರುವ ಮಲ್ಲಿಕಾರ್ಜುನ ಅವರು ಸದ್ಯ ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಸುರಪುರದ ಚಿತ್ರಕಲೆ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ದೊರೆತಿದೆ. ...

READ MORE

Related Books