ದೃಶ್ಯ ಕಲಾ ಪ್ರಪಂಚ

Author : ಎನ್. ಮರಿಶಾಮಾಚಾರ್



Published by: ಸಿ.ಎಂ.ಎನ್. ಪ್ರಕಾಶನ

Synopsys

‘ದೃಶ್ಯ ಕಲಾ ಪ್ರಪಂಚ’ ಕೃತಿಯು ಎನ್. ಮರಿಶಾಮಾಚಾರ್ ಅವರ ಲೇಖನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಎಚ್.ಎ.ಅನಿಲ್ ಕುಮಾರ್ ಅವರು, `ಸಮಗ್ರವಾಗದಿದ್ದರೂ ಸಂಕ್ಷಿಪ್ತವಾಗಿಯಾದರೂ, ಪ್ರಪಂಚದ ದೃಶ್ಯಕಲೆಯ ಬಗ್ಗೆ ಪುಸ್ತಕ ಬರೆಯಬೇಕು ಎನ್ನುವುದು ನನ್ನ ಬಹುದಿನದ ಕನಸು‘ ಎಂದು ಮೊದಲ ಮಾತಿನಲ್ಲಿ ಹೇಳಿಕೊಂಡಿರುವ ಕಲಾವಿದ ಮರಿಶಾಮಾಚಾರ್ ಅವರ ಇಪ್ಪತ್ತನೆಯ ಪುಸ್ತಕ ಇದಾಗಿದೆ. ಅವರದೇ ರಕ್ಷಪುಟ ಹಾಗೂ ಒಳಪುಟ ವಿನ್ಯಾಸದೊಂದಿಗೆ ಸುಂದರವಾಗಿ ಸಜ್ಜಾಗಿದೆ ಹಾಗೂ ಕಲಾವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಅಲಭ್ಯವಾಗಿರುವ ಪುಸ್ತಕಗಳ ಕೊರತೆಯನ್ನು ತುಂಬಿಕೊಡುವಂತಿದೆ. `ಕಲೆ ಎಂದರೇನು? ಕಲೆಯ ಹುಟ್ಟಿಗೆ ಮುನ್ನ ಇದ್ದ ದೃಶ್ಯ ಸೃಷ್ಟಿಗಳಾವುವು? `ಕಲೆಯ ಸಾವಿನ‘ ನಂತರ ದೃಶ್ಯಕಲೆ ಹಾಗೂ ಅದರ ವ್ಯಾಖ್ಯೆ-ವಾಚ್ಯಾರ್ಥಗಳು ಬೆರೆತ ತತ್ವಾಧಾರಿತ ಕಲೆಯ ವಿಶ್ವರೂಪವು ಹೇಗೆ ಮಾನವಶಾಸ್ತ್ರೀಯ ಗುಣ ಹೊಂದಿವೆ? ಮುಂತಾದ ವಿಷಯಗಳ ಕುರಿತು ಸಂಕ್ಷಿಪ್ತವಾಗಿ, ಸೂಕ್ತವಾಗಿ ಬರೆಯಲಾಗಿರುವ ಈ ಪುಸ್ತಕ, ಲೇಖಕರ ಅಷ್ಟೂ ಲೇಖನಗಳ ಶೈಲಿಗಳ, ಆಸಕ್ತಿ-ನಿಲುವು-ತತ್ವಾದರ್ಶಗಳ ಸಂಗ್ರಹ ರೂಪದಂತಿದೆ‘ ಎಂದಿದ್ದಾರೆ.

About the Author

ಎನ್. ಮರಿಶಾಮಾಚಾರ್
(15 May 1951 - 03 April 2013)

ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್‌ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್‌  ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್‌ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್‌ ಅವರು ಜಯನಗರದ ಆರ್‌.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್‌ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್‌.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...

READ MORE

Related Books