ಮಹಾವಿಷ್ಣು ನಿಧಿ (ದೇವನಹಲ್ಳಿ ಚೆನ್ನಕೇಶವ ಆಚಾರ್ಯರ ರೇಖಾಚಿತ್ರಗಳು)

Author : ಕೆ.ವಿ. ಸುಬ್ರಹ್ಮಣ್ಯಂ

Pages 172

₹ 120.00




Published by: ಕರ್ನಾಟಕ ಶಿಲ್ಪಕಲಾ ಅಕಾಡೆಮಿ,
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು

Synopsys

ದೇವನಹಳ್ಳಿಯ  ಶಿಲ್ಪಕಲಾ ಶಾಲೆಯ ಎ.ಸಿ. ಹನುಮಂತಾಚಾರ್ಯ ಅವರು ಶಿಲ್ಪಕಲಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಗುರುಕುಲ ಪದ್ಧತಿಯಲ್ಲಿ ಶಿಲ್ಪಕಲೆಯನ್ನು ಕಲಿಸುವ ಮೂಲಕ ಸಾಂಪ್ರದಾಯಿಕ ಶಿಲ್ಪ ಕಲಾವಿದರ ಸಮೂಹ ಸೃಷ್ಟಿಗೆ ಕಾರಣವಾದ ದೇವನಹಳ್ಳಿ  ಶಿಲ್ಪಕಲಾ ಶಾಲೆಗೆ ಒಂದು ಸಾಂಸ್ಕೃತಿಕ ಮಹತ್ವ ಇದೆ. ಎ.ಸಿ. ಹನುಮಂತಾಚಾರ್ಯ ಅವರ ತಂದೆ ದೇವನಹಳ್ಳಿ ಚೆನ್ನಕೇಶವ ಆಚಾರ್ಯರ ರೇಖಾಚಿತ್ರಗಳು ಮೊದಲ ಬಾರಿಗೆ ಸಾರ್ವಜನಿಕರ, ಕಲಾಸಕ್ತರ ಕಣ್ಣಿಗೆ ಗೋಚರವಾಗುತ್ತಿವೆ.

ಶಿಲ್ಪ ಸಿದ್ಧಾಂತಿ, ಶಿಲ್ಪವಲ್ಲಭ, ಶಿಲ್ಪವಿದ್ವಾನ್ ಬಿರುದುಗಳಿಗೆ ಪಾತ್ರರಾಗಿದ್ದ ಚೆನ್ನಕೇಶವ ಆಚಾರ್ಯರು ಸಂಪ್ರದಾಯ ಮತ್ತು ಶಾಸ್ತ್ರಬದ್ಧವಾಗಿ ರೇಖಾಚಿತ್ರಗಳು ಹನುಮಂತಾಚಾರ್ಯ ಅವರ ಕುಟುಂಬದವರ ಸಂಗ್ರಹದಲ್ಲಿದ್ದವು. ಅವುಗಳನ್ನು ಸಂಗ್ರಹಿಸಿ, ಸಂಪಾದಿಸಿ, ಸೂಕ್ತ ಟಿಪ್ಪಣಿ ಬರೆದು ಪ್ರಕಟಿಸುವ ಮೂಲಕ ಕೆ.ವಿ. ಸುಬ್ರಹ್ಮಣ್ಯಂ ಅವರು ಅಪರೂಪದ ಕೆಲಸ ಮಾಡಿದ್ದಾರೆ.

‘ದೇವತೆಗಳು ಪರೋಕ್ಷ ಪ್ರಿಯರು’ ಬರಹದ ಮೂಲಕ ಈ ಸಂಪುಟಕ್ಕೆ ಪೂರ್ವ ಪೀಠಿಕೆ ಒದಗಿಸಲಾಗಿದೆ. ವಿಷ್ಣು ಮತ್ತು ವಿಷ್ಣುಕತೆಗಳಿಗೆ ಸಂಬಂಧಿಸಿದಂತಹ ರೇಖಾ ಚಿತ್ರಗಳನ್ನು ಈ ಸಂಪುಟವು ಒಳಗೊಂಡಿದೆ.

ವಿಷ್ಣು, ವಿಷ್ಣುವಿನ ಅವತಾರಗಳು, ಚತುರ್ವಿಂಶತಿ ಮೂರ್ತಿ ಲಕ್ಷಣ, ಅನಂತಶಯನ, ಮೋಹಿನೀ, ಶ್ರೀರಾಮ, ಶ್ರೀಕೃಷ್ಣನ ವಿವಧ ರೂಪಗಳು, ದತ್ತಾತ್ರೇಯ, ಸಮುದ್ರಮಥನ, ಮಹಾಭಾರತ, ಶಿಶುಪಾಲವಧೆ, ತಾಲಮಾನ ರೇಖಾಕೃತಿ ಲಕ್ಷಣ, ನರಸಿಂಹ, ತತ್ಪುರುಷ, ಸೂರ್ಯ ಮತ್ತು ಇತರ ಗ್ರಹಗಳು, ಅಷ್ಟದಿಕ್ಪಾಲಕರ ಮೂರ್ತಿ ಕೆತ್ತನೆಯ ಹಿನ್ನೆಲೆಯಾಗಿ ರಚಿಸಿದ ರೇಖಾಚಿತ್ರಗಳನ್ನು ಈ ಗ್ರಂಥದಲ್ಲಿ ಅಳವಡಿಸಲಾಗಿದೆ. ನೂರಕ್ಕೂ ಹೆಚ್ಚು ವರ್ಷ ಹಿಂದಿನ ರೇಖಾಚಿತ್ರಗಳು ಸಂರಕ್ಷಣೆಯ ಸಮಸ್ಯೆಗಳನ್ನು ಮೀರಿಯೂ ಉಳಿದುಕೊಂಡಿವೆ ಮತ್ತು ಅವು ನೋಡುಗನಿಗೆ ಲಭ್ಯವಾಗಿರುವುದೇ ವಿಶೇಷ.

ಪ್ರತಿ ಚಿತ್ರ ಪ್ರಕಾರಗಳಿಗೂ ನೀಡಲಾಗಿರುವ ಟಿಪ್ಪಣಿಯು ಪುಸ್ತಕವು ಕೇವಲ ನೋಡುವುದಕ್ಕೆ ಮಾತ್ರ ಸೀಮಿತವಾಗದೇ ಅಧ್ಯಯನ- ಓದಿಗಾಗಿ ರೂಪಿಸಿದಂತಿದೆ. ಸಾಂಪ್ರದಾಯಿಕ ಶಿಲ್ಪಗಳು ರೂಪುಗೊಳ್ಳುವದದರ ಹಿನ್ನೆಲೆಯಲ್ಲಿ ರೂಪು ತಳೆದ ರೇಖಾಚಿತ್ರಗಳ ಪ್ರಾಮುಖ್ಯತೆ ಹಾಗೂ ಅವುಗಳ ಸ್ವರೂಪದ ಬಗ್ಗೆ ನೀಡಿರುವ ಟಿಪ್ಪಣಿಗಳು ಮಹತ್ವದ ಮಾಹಿತಿ ಒದಗಿಸುವಲ್ಲಿ ಯಶಸ್ವಿಯಾಗಿವೆ. ಸಂಪಾದಿಸಿ, ಬರೆದು ಪ್ರಕಟಿಸಿದ ಸುಬ್ರಹ್ಮಣ್ಯಂ ಅವರ ಶ್ರಮ ಎದ್ದು ಕಾಣುವಂತಿದೆ.

About the Author

ಕೆ.ವಿ. ಸುಬ್ರಹ್ಮಣ್ಯಂ
(18 December 1949)

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಾಗಟ ಅಗ್ರಹಾರದವರಾದ ಕೆ.ವಿ. ಸುಬ್ರಹ್ಮಣ್ಯಂ (ಜನನ: 18-12-1949) ಅವರು ದೃಶ್ಯಕಲೆಯ ಇತಿಹಾಸ- ವಿಮರ್ಶೆಗಳಿಗೆ ಸಂಬಂಧಿಸಿದ ಸಾಹಿತ್ಯ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು. ಕರ್ನಾಟಕದ ಆಧುನಿಕ ಶಿಲ್ಪಕಲೆ (1994), ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ (2007), ಕೆ. ವೆಂಕಟಪ್ಪ ಪುನರಾಲೋಕನ, ಇನ್ ಸ್ಟಾಲೇಷನ್ ಕಲಾ ಪ್ರಪಂಚ ಅವರ ಕೃತಿಗಳು. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ದೃಶ್ಯಕಲಾ ವಿಮರ್ಶೆ ಹಾಗೂ ಲೇಖನಗಳನ್ನು ಪ್ರಕಟಿಸಿರುವ ಅವರು ಸುಮಾರು ನಾಲ್ಕು ದಶಕಗಳ ಕಾಲ ಸತತವಾಗಿ ವಿಮರ್ಶೆ ಬರೆಯುತ್ತ ಬಂದಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ (1999), ಚೆನ್ನೈನ ಯುನೈಟೆಡ್ ರೈಟರ್ಸ್ ...

READ MORE

Related Books