ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್

Date: 25-10-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕ ಮತ್ತು ಬ್ರೆಜಿಲ್ ಮೂಲದ ಸ್ಟ್ರೀಟ್ ಆರ್ಟ್ ಕಲಾವಿದ ಕೀತ್ ಅಲನ್ ಹೆರಿಂಗ್ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಕೀತ್ ಅಲನ್ ಹೆರಿಂಗ್ (Keith Allen Haring) 
ಜನನ: 04 ಮೇ, 1958 
ಶಿಕ್ಷಣ: ಸ್ಕೂಲ್ ಆಫ್ ವಿಷುವಲ್ ಆರ್ಟ್, ನ್ಯೂಯಾರ್ಕ್ 
ವಾಸ: ನ್ಯೂಯಾರ್ಕ್, ಅಮೆರಿಕ ಮತ್ತು ಬ್ರೆಜಿಲ್ 
ಕವಲು: ಸ್ಟ್ರೀಟ್ ಆರ್ಟ್ 
ವ್ಯವಸಾಯ: ಮೂರಲ್, ಗ್ರಾಫಿಟಿ, ಪಬ್ಲಿಕ್ ಆರ್ಟ್ 

ಕೀತ್ ಹೆರಿಂಗ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕೀತ್ ಹೆರಿಂಗ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:  

ಜನ ಇದು ಚೀಪ್, ಕಲೆಯೇ ಅಲ್ಲ ಎಂದೆಲ್ಲ ಭಾವಿಸುವ ಚಿತ್ರಗಳಿಗೆ ಕಲೆಯ ಗರ್ಭಗುಡಿಗಳೊಳಗೆ (ಅರ್ಥಾತ್, ಮ್ಯೂಸಿಯಂಗಳು, ಗ್ಯಾಲರಿಗಳೊಳಗೆ) ಸ್ಥಾನ ಒದಗಿಸಿಕೊಟ್ಟ 20ನೇ ಶತಮಾನದ ಅಪರೂಪದ ಕಲಾವಿದರಲ್ಲಿ ಒಬ್ಬರು ಕೀತ್ ಹೆರಿಂಗ್. ಸರಳವಾದ, ಯಾರಿಗೂ ಅರ್ಥ ಆಗಬಹುದಾದ ಚಿತ್ರಗಳು, ಅದಕ್ಕೆ ಒಂದಿಷ್ಟು ಬರಹಗಳೊಂದಿಗೆ ಪ್ರಸ್ತುತಪಡಿಸುವ ಕೀತ್ ಹೆರಿಂಗ್,  ಗಂಭೀರವಾದ ಸಂಗತಿಗಳನ್ನೂ ಕಾರ್ಟೂನಿಕ್ ಆಗಿ ಪ್ರಖರ ಬಣ್ಣಗಳಲ್ಲಿ ಹೇಳಿದರೆ ನೋಡುಗರಿಗೆ ಅವು ಸುಲಭಗ್ರಾಹ್ಯ ಎಂದು ನಂಬಿದವರು. ಏಡ್ಸ್, ಡ್ರಗ್ಸ್, ಅಕ್ರಮ ಸಂಬಂಧಗಳು, ಜಾತಿ ತಾರತಮ್ಯ ಇತ್ಯಾದಿ ಸಂಗತಿಗಳನ್ನೆಲ್ಲ ಅವರು ಹೀಗೆ ಬಿಂಬಿಸಿ, ಅವುಗಳಿಗೆ ಸಾಂಸ್ಕೃತಿಕ ಕಾಮೆಂಟರಿಗಳನ್ನು ಸಮರ್ಥವಾಗಿ, ಜನಮಾನಸಕ್ಕೆ ತಲುಪುವಂತೆ ಒದಗಿಸಿದ್ದಾರೆ. 

ಹಳೆಯ ಅಮೂರ್ತ ಕಲೆ ಮತ್ತು ಅವರ ಸಮಕಾಲೀನರ ಎಕ್ಸ್‌ಪ್ರೆಷನಿಸ್ಟ್ ಅಭಿವ್ಯಕ್ತಿಗಳಿಂದ ದೂರಾಗಿ ಫಿಗರೇಟಿವ್ ಚಿತ್ರಗಳ ಮೊರೆಹೋದ ಕೀತ್, ಸ್ಪಷ್ಟ ಮತ್ತು ಸರಳ ರೇಖೆಗಳಲ್ಲಿ ಬಿಡಿಸುತ್ತಿದ್ದ ಚಿತ್ರಗಳಿಗೆ ಕ್ಯಾನ್‌ವಾಸ್‌ಗಳೆಂದರೆ ಸಾರ್ವಜನಿಕ ಸ್ಥಳಗಳೇ.  ರಸ್ತೆ ಬದಿಯ ಗೋಡೆಗಳು, ಸಬ್‌ವೇ ಗೋಡೆಗಳಲ್ಲಿ ಸಾವಿರಾರು ಚಿತ್ರಗಳನ್ನು ಅವರು ಜಗತ್ತಿನಾದ್ಯಂತ ರಚಿಸಿದ್ದಾರೆ. ನ್ಯೂಯಾರ್ಕಿನ ಸಬ್‌ವೇಗಳಲ್ಲಿ ಚಿತ್ರಗಳನ್ನು ರಚಿಸುತ್ತಿದ್ದಾಗಲೇ ಅವರು ಅಲ್ಲಿನ ಪೊಲೀಸರಿಂದ ಹಲವು ಬಾರಿ ಸಾರ್ವಜನಿಕ ಗೋಡೆಗಳನ್ನು ವಿರೂಪಗೊಳಿಸಿದ ಆಪಾದನೆಯ ಮೇರೆಗೆ ಬಂಧನಕ್ಕೊಳಗಾದದ್ದಿದೆ. ಹಾಗೆ ಬಂಧಿತರಾಗಿ ಹೋದಾಗ, ಅಲ್ಲಿನ ಪೊಲೀಸರಲ್ಲೂ ಅವರ ಅಭಿಮಾನಿಗಳಿದ್ದುದರಿಂದ ಅವರನ್ನು ಗೌರವಯುತವಾಗಿಯೇ ನಡೆಸಿಕೊಂಡು, ಕೈ ಕುಲುಕಿ ಕಳಿಸಿಕೊಡುತ್ತಿದ್ದರಂತೆ. 

ಹೀಗೆ ಸ್ಟ್ರೀಟ್ ಆರ್ಟಿಗೆ ಮಾನ್ಯತೆ ಮತ್ತು ಒಂದು ಲೆಜಿಟಿಮೆಸಿ ತಂದುಕೊಟ್ಟ ಕೀತ್ ಅವುಗಳನ್ನು ಕಲೆಯೇ ಅಲ್ಲ ಎಂದು ನಿರ್ಲಕ್ಷಿಸಿದ್ದ ಗ್ಯಾಲರಿಗಳಲ್ಲಿ, ಮ್ಯೂಸಿಯಂಗಳಲ್ಲಿ  ಪ್ರದರ್ಶಿಸುವುದಕ್ಕೆ ಹಾದಿ ತೆರೆದುಕೊಟ್ಟರು. ಪೆನ್ಸಿಲ್ವೇನಿಯಾದಲ್ಲಿ ಮಧ್ಯಮ ವರ್ಗದ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಕೀತ್ ಹೆರಿಂಗ್ ಅವರಿಗೆ ಮೂವರು ತಂಗಿಯರು. ತಂದೆ ಹವ್ಯಾಸಿ ಕಾರ್ಟೂನಿಸ್ಟ್ ಆದ್ದರಿಂದ, ಬಾಲ್ಯದಲ್ಲೇ ಕೀತ್‌ಗೆ ಗೆರೆಗಳೊಂದಿಗೆ ಆಡುವ ಅಭ್ಯಾಸ ಇತ್ತು ಮತ್ತು ಅದರಲ್ಲಿ ಸಾಕಷ್ಟು ನಿಯಂತ್ರಣವೂ ಇತ್ತು.  ಪಿಟ್ಸ್‌ಬರ್ಗಿನಲ್ಲಿ ಕಮರ್ಷಿಯಲ್ ಆರ್ಟ್ ಕಲಿಯಲು ಕಾಲೇಜಿಗೆ ಸೇರಿದ ಕೀತ್, ಅಲ್ಲಿನ ಕಲಾವಾತಾವರಣದಿಂದ ಪ್ರಭಾವಿತರಾಗಿ, ತಾನು ಕಮರ್ಷಿಯಲ್ ಆರ್ಟ್ ಕಲಿಯುವುದರಲ್ಲಿ ಅರ್ಥವಿಲ್ಲ ಎಂದು ಅರಿತು ಅದನ್ನು ಮಧ್ಯದಲ್ಲೇ ಕೈಬಿಟ್ಟರು. 1978ರಲ್ಲಿ ಅವರಿಗೆ ಪಿಟ್ಸ್‌ಬರ್ಗ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸೆಂಟರಿನಲ್ಲಿ ಅಕಸ್ಮಾತ್ ಆಗಿ ಸೋಲೋ ಪ್ರದರ್ಶನಕ್ಕೆ ಅವಕಾಶ ಸಿಕ್ಕಿತು. ಏಕೆಂದರೆ, ಶೋ ಬುಕ್ ಮಾಡಿದ್ದ ಕಲಾವಿದರ ಪ್ರದರ್ಶನ ರದ್ದಾಗಿತ್ತು. ಅಲ್ಲಿ ದೊರೆತ ಯಶಸ್ಸು ಮತ್ತು ಆತ್ಮವಿಶ್ವಾಸ, ಅವರನ್ನು ನ್ಯೂಯಾರ್ಕಿನೆಡೆಗೆ ಒಯ್ದಿತು. 

1978ರಲ್ಲಿ ನ್ಯೂಯಾರ್ಕಿನ ಸ್ಕೂಲ್ ಆಫ್ ವಿಷುವಲ್ ಆರ್ಟ್ ಸೇರಿಕೊಂಡ ಕೀತ್,  ನ್ಯೂಯಾರ್ಕಿನ ಪರ್ಯಾಯ ಕಲಾ ಚಳುವಳಿಗಳತ್ತ ಆಸಕ್ತರಾದರು ಮತ್ತು ಆರಂಭದಲ್ಲಿ ಕೇವಲ ಚಾಕ್ ಗಳನ್ನು ಬಳಸಿ ನ್ಯೂಯಾರ್ಕಿನ ಸಬ್‌ವೇ ಗೋಡೆಗಳಲ್ಲೆಲ್ಲ ಚಿತ್ರ ಬರೆಯತೊಡಗಿದರು. 1980-85ರ ನಡುವೆ ಅವರು ಇಂತಹ ಸಾವಿರಾರು ಚಿತ್ರಗಳನ್ನು ರಚಿಸಿದ್ದಾರೆ. 

80 ರ ದಶಕದಲ್ಲಿ ತನ್ನನ್ನು “ರೆಬೆಲ್” ಕಲಾವಿದ ಎಂದು ಪ್ರತಿಷ್ಠಾಪಿಸಿಕೊಂಡ ಕೀತ್, ಅಲ್ಲಿನ ಪ್ರಮುಖ ಗ್ಯಾಲರಿಗಳಲ್ಲಿ ಮತ್ತು ಹಲವು ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಅವಕಾಶ ಪಡೆದರು. ಅವರ ಮೂರಲ್‌ಗಳು, ಸಾರ್ವಜನಿಕ ಶಿಲ್ಪಗಳು ಯುರೋಪ್, ಆಸ್ಟ್ರೇಲಿಯಾಗಳಲ್ಲೂ ಪ್ರದರ್ಶಿತವಾಗಿವೆ. ಪ್ರಸಿದ್ಧ ಕಲಾವಿದ ಆಂಡಿ ವರೋಲ್ ಅವರೊಂದಿಗೆ ಗೆಳೆತನ ಹೊಂದಿದ್ದ ಕೀತ್ ಏಡ್ಸ್ ರೋಗದ ವಿರುದ್ಧ ಹಲವು ಕಲಾಚಳುವಳಿಗಳಲ್ಲಿ ಪಾಲ್ಗೊಂಡು ಆಕ್ಟಿವಿಸ್ಟ್ ಅನ್ನಿಸಿಕೊಂಡಿದ್ದರು. ಅವರ ಕಲಾಕೃತಿಗಳನ್ನು ಅಮೆರಿಕದ ಹಲವು ಸಾಂಪ್ರದಾಯಿಕ ದೊಡ್ಡ ಗ್ಯಾಲರಿಗಳು ಪ್ರದರ್ಶಿಸಲು ಹಿಂಜರಿಯುತ್ತಿದ್ದವು. ಅದು ಕಲೆಯೇ ಅಲ್ಲ ಎಂಬ ಚಿಂತನೆಯ ಫಲಶೃತಿ ಅದು. 

ಮುಂದೆ 1986ರಲ್ಲಿ ತನ್ನ ಕಲಾಕೃತಿಗಳನ್ನು ಮಾರಲು ನ್ಯೂಯಾರ್ಕಿನ ಪ್ರತಿಷ್ಠಿತ ಮಾನ್ನ್‌ಹಟನ್ನ್ ನಲ್ಲಿ ತನ್ನದೇ ಅಂಗಡಿ ಪಾಪ್ ಶಾಪ್ ತೆರೆದ ಕೀತ್ ಅದನ್ನು ಯಶಸ್ವಿಯಾಗಿ ನಡೆಸಿದರು. ಸ್ವತಃ ಸಲಿಂಗ ಸಂಬಂಧಗಳನ್ನು ಹೊಂದಿದ್ದ ಕೀತ್ 1988ರಲ್ಲಿ ಏಡ್ಸ್ ಸೋಂಕಿಗೆ ಒಳಗಾದರು. ಏಡ್ಸ್ ವಿರುದ್ಧ ವ್ಯಾಪಕವಾಗಿ ಜನಜಾಗೃತಿ ಮೂಡಿಸಿದ್ದ ಅವರು ತಾವೇ ಸ್ವತಃ ಏಡ್ಸ್‌ಗೆ ಒಳಗಾಗಿ, ಅದರ ಸಂಕೀರ್ಣ ತೊಂದರೆಗಳ ಕಾರಣದಿಂದಾಗಿ 1990ರಲ್ಲಿ ನಿಧನಹೊಂದಿದರು. ಇಂದು ಅವರ ಕೀತ್ ಹೆರಿಂಗ್ ಫೌಂಡೇಷನ್ ಈ ಚಟುವಟಿಕೆಗಳನ್ನು ಮುಂದುವರಿಸಿದೆ.  

ಸ್ಟ್ರೀಟ್ ಆರ್ಟ್ ಕಲಾವಿದರಾಗಿ ಅವರ ಸಾಧನೆಗಳು ಮುಂದೆ ಷೆಫರ್ಡ್ ಫೈರಿ, ಬಾಂಕ್ಸಿ ಅವರಂತಹ ಪ್ರಮುಖ ಕಲಾವಿದರಿಗೆ ಪ್ರೇರಣೆ ಆಗಿದೆ. ಅವರ ಕೊನೆಗಾಲದಲ್ಲಿ ಅವರನ್ನು ಕಲಾವಿಮರ್ಶಕ ಡೇವಿಡ್ ಶೆಫ್ ಅವರು ರೋಲಿಂಗ್ ಸ್ಟೋನ್ ಮ್ಯಾಗಝೀನಿಗಾಗಿ  ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ No matter how long you work, it’s always going to end sometime. And there’s always going to be things left undone. And it wouldn’t matter if you lived until you were seventy-five. There would still be new ideas. There would still be things that you wished you would have accomplished. You could work for several lifetimes. If I could clone myself, there would still be too much work to do – even if there were five of me. And there are no regrets. Part of the reason that I’m not having trouble facing the reality of death is that it’s not a limitation, in a way. It could have happened any time, and it is going to happen sometime. If you live your life according to that, death is irrelevant. Everything I’m doing right now is exactly what I want to do (ಸಂದರ್ಶನ ಆಗಸ್ಟ್ 1989)  

ಕೀತ್ ಹೆರಿಂಗ್ ಅವರ ಕುರಿತ ಡಾಕ್ಯುಮೆಂಟರಿ “ದಿ ಮೆಸೇಜ್”: 

ಕೀತ್ ಹೆರಿಂಗ್ ಅವರ ಕಿರು ಸಂದರ್ಶನ: 

ಕೀತ್ ಹೆರಿಂಗ್ ಅವರ ರೋಲಿಂಗ್‌ಸ್ಟೋನ್ ಸಂದರ್ಶನದ ಪೂರ್ಣಪಾಠ

ಚಿತ್ರ ಶೀರ್ಷಿಕೆಗಳು:

ಕೀತ್ ಹೆರಿಂಗ್ ಅವರ Crack Down! (1986)  

ಕೀತ್ ಹೆರಿಂಗ್ ಅವರ Crack is Wack - mural at East 128th Street and Harlem River Drive (1980)  

ಕೀತ್ ಹೆರಿಂಗ್ ಅವರ Fertility Suite, Untitled 1, (1983)  

ಕೀತ್ ಹೆರಿಂಗ್ ಅವರ Ignorance = Fear, (1989)  

ಕೀತ್ ಹೆರಿಂಗ್ ಅವರ Painting a 100-metre section of the Berlin Wall in (1986) 

ಕೀತ್ ಹೆರಿಂಗ್ ಅವರ Piglet Goes Shopping, (1989)  

ಕೀತ್ ಹೆರಿಂಗ್ ಅವರ Safe sex poster (1987)  

ಕೀತ್ ಹೆರಿಂಗ್ ಅವರ untitled (1979)  

ಕೀತ್ ಹೆರಿಂಗ್ ಅವರ untitled (1981)  

ಕೀತ್ ಹೆರಿಂಗ್ ಅವರ Untitled (1983 )  

ಕೀತ್ ಹೆರಿಂಗ್ ಅವರ untitled (1984)  

ಕೀತ್ ಹೆರಿಂಗ್ ಅವರ Untitled (1985)  

ಈ ಅಂಕಣದ ಹಿಂದಿನ ಬರೆಹಗಳು:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...