ಬಾಶೆಯ ಬಗೆಗೆ ನೀವೇನು ಬಲ್ಲಿರಿ ?

Author : ಡಿ.ಎನ್. ಶಂಕರ ಬಟ್

Pages 208

₹ 140.00




Year of Publication: 2010
Published by: ಭಾಷಾ ಪ್ರಕಾಶನ
Address: ಡಿ.ಎನ್.ಶಂಕರ್ ಬಟ್ ಅಂಚೆ ಪೆಟ್ಟಿಗೆ :- ಬಿ.ಮಂಚಾಲೆ, ಸಾಗರ ೫೭೭ ೪೩೧

Synopsys

ಭಾಷಾ ಸಮಸ್ಯೆಯನ್ನು ಪರಿಹರಿಸಲು ಯಾರೂ ಭಾಷಾ ಪಂಡಿತರಲ್ಲಿಗೆ ಓಡುವುದಿಲ್ಲ. ಆದರೆ, ಇದರಿಂದಾಗುವ ಅನಾಹುತಗಳು ಮಾತ್ರ ಹಲವು. ಲಿಪಿಯ ಹೆಸರಿನಲ್ಲಿ (ಇತ್ತೀಚೆಗಿನ ಋಕಾರದ ಸಮಸ್ಯೆ), ಭಾಷಾ ಮಾಧ್ಯಮದ ವಿಷಯದಲ್ಲಿ, ವ್ಯಾಕರಣದ ವಿಷಯದಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಹಲವಿವೆ ಎಂಬುದನ್ನು ಈ ಪುಸ್ತಕ ತೋರಿಸಿ ಕೊಡುತ್ತದೆ. ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಸಮಾಜದಲ್ಲಿ ಬೇರೆ ಬೇರೆ ನಿರ್‍ದಾರಗಳನ್ನು ಮಾಡುವವರು ಅವಶ್ಯವಾಗಿಯೂ ತಿಳಿದಿರಬೇಕಾದ ವಿಷಯಗಳಿವು.

About the Author

ಡಿ.ಎನ್. ಶಂಕರ ಬಟ್

ಹಿರಿಯ ಲೇಖಕ ಡಿ.ಎನ್. ಶಂಕರ ಬಟ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಮದ್ರಾಸ್ ವಿಶ್ವವಿದ್ಯಾಲಯದಿಂದ  ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವೀಧರರು.  ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ.ಪದವೀಧರರು. ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ...

READ MORE

Related Books