ಪದ ಪುರಾಣ

Author : ರವೀಂದ್ರ ಬಟಗೇರಿ

Pages 72

₹ 100.00




Year of Publication: 2018
Published by: ಕೆ.ಬಿ. ಪ್ರಗತಿ ಬರಹ ಪಬ್ಲಿಷಿಂಗ್‌ ಹೌಸ್
Address: ನಂ.119, 3ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104

Synopsys

ಕನ್ನಡ ಭಾಷೆ ಬಳಕೆ ಸಂಬಂಧಿಸಿದಂತೆ ಮಾಹಿತಿ ನೀಡುವ ಹತ್ತು ಲೇಖನಗಳ ಸಂಗ್ರಹ ’ಪದ ಪುರಾಣ’. ರವೀಂದ್ರ ಬಟಗೇರಿ ಅವರ ಚೊಚ್ಚಲ ಕೃತಿ ಇದಾಗಿದ್ದು, ಕನ್ನಡ ವಿಶ್ವವಿದ್ಯಾಲಯದ ವಾರದ ಚರ್ಚೆಯಲ್ಲಿ ನಡೆದ ವಿಷಯ ಚರ್ಚೆಯನ್ನು ಇಲ್ಲಿನ ಲೇಖನಗಳಲ್ಲಿ ಬರೆಯಲಾಗಿದೆ. ಇಲ್ಲಿನ ಲೇಖನಗಳು, ಪದ, ವಾಕ್ಯ, ಲಿಪಿ, ಧ್ವನಿಗೆ ಸಂಬಂಧಿಸಿದ್ದಾಗಿದೆ. 

ಈ ಕೃತಿಯಲ್ಲಿ ಕನ್ನಡ ಪದ ರಚನಾ ವಿಧಾನವನ್ನು ಗಮನಿಸುತ್ತಾ ಪ್ರತಿಧ್ವನಿ ಪದಗಳ ಬಗ್ಗೆಯೂ ಚರ್ಚಿಸಲಾಗಿದೆ. ಕನ್ನಡ ಆಡುನುಡಿಯ ಧ್ವನಿ ವ್ಯತ್ಯಾಸಗಳನ್ನು ಗಮನಿಸುತ್ತಾ, ಶಿಷ್ಠಕನ್ನಡದೊಂದಿಗೆ ಹೋಲಿಸಿ, ಚರ್ಚಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. 

About the Author

ರವೀಂದ್ರ ಬಟಗೇರಿ
(20 June 1988)

ಯುವ ಬರಹಗಾರ ರವೀಂದ್ರ ಬೆಟಗೇರಿ ಅವರು ಜನಿಸಿದ್ದು 1988 ಜೂನ್‌  20ರಂದು. ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ವಳವಂಡವಾಡಿ ಇವರ ಹುಟ್ಟೂರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಪದ ಪುರಾಣ ಇವರ ಚೊಚ್ಚಲ ಕೃತಿಯಾಗಿದೆ.  ...

READ MORE

Related Books