ಕನ್ನಡ ಭಾಷೆಯ ಕಲ್ಪಿತ ಚರಿತ್ರೆ

Author : ಡಿ.ಎನ್. ಶಂಕರ ಬಟ್

Pages 152

₹ 130.00

Buy Now


Year of Publication: 2022
Published by: ಡಿ.ಎನ್. ಶಂಕರ ಬಟ್

Synopsys

ಕನ್ನಡ ಬಾಶೆಯ ಚರಿತ್ರೆಯನ್ನು ಈ ಪುಸ್ತಕದಲ್ಲಿ ಎರಡು ಬೇರೆಬೇರೆ ಘಟಕಗಳಾಗಿ ವಿಂಗಡಿಸಿ, ಅವುಗಳಲ್ಲಿ ಪ್ರತಿಯೊಂದಕ್ಕೂ ಬೇರೆಬೇರೆ ಮೂಲಬಾಶೆಗಳನ್ನು ಕಲ್ಪಿಸಿ ಅವುಗಳ ಮೂಲಕ ಆ ಚರಿತ್ರೆಯನ್ನು ವಿವರಿಸಲಾಗಿದೆ. ಕನ್ನಡ, ತಮಿಳು, ತೆಲುಗು ಮೊದಲಾದ ದ್ರಾವಿಡ ಬಾಶೆಗಳಿಗೆಲ್ಲ ಮೂಲವಾಗುವಂತಹ ’ಮೂಲದ್ರಾವಿಡ’ ಬಾಶೆಯಿಂದ ಕನ್ನಡವೂ ಮತ್ತು ಕನ್ನಡದ ಉಪಬಾಶೆಗಳಿಗೆಲ್ಲ ಮೂಲವಾಗುವಂತಹ ಮೂಲ ಕನ್ನಡದಿಂದ ಆದುನಿಕ ಕನ್ನಡದ ಈ ಬೇರೆಬೇರೆ ಪ್ರಬೇದಗಳೂ ಹೇಗೆ ಇಳಿದುಬಂದಿರಬಹುದೆಂಬುದನ್ನು ಈ ಎರಡು ಗಟ್ಟಗಳ ಮೂಲಕ ’ಕಲ್ಪಿಸಿ’ ಹೇಳುವ ಪ್ರಯತ್ನವೇ ಈ ಪುಸ್ತಕ. ಬಾಶೆಯೊಂದರ ಚರಿತ್ರೆಯನ್ನು ಈ ರೀತಿ ಮೂಲಬಾಶೆಯೊಂದನ್ನು ಕಲ್ಪಿಸಿ ವಿವರಿಸುವ ಕ್ರಮ ಪಾಶ್ಚಾತ್ಯದೇಶಗಳಲ್ಲಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿದೆ. ಆದರೆ ಕನ್ನಡದಲ್ಲಿ ಈ ರೀತಿಯ ಸಂಶೋದನೆ ನಡೆದಿರುವುದು ಬಹಳ ಕಡಿಮೆ. ಬರಹದ ಬೇರೆಬೇರೆ ರೂಪಗಳನ್ನು ಮಾತ್ರವೇ ಆದರಿಸಿ ಬಾಶೆಯ ಲಿಕಿತ ಚರಿತ್ರೆಯನ್ನು ಬರೆಯುವುದೇ ಕನ್ನಡದಲ್ಲಿ ಪ್ರಚಲಿತವಾಗಿರುವ ಮುಕ್ಯ ವಿದಾನ. ಈ ಎರಡು ರೀತಿಯ ವಿದಾನಗಳ ಗುಣಾವಗುಣಗಳನ್ನು ಈ ಪುಸ್ತಕದಲ್ಲಿ ವರ‍್ಣಿಸಲಾಗಿದೆ. ಮತ್ತು ಇವೆರಡು ಹೇಗೆ ಒಂದಕ್ಕೊಂದು ಪೂರಕವಾಗಬಲ್ಲುವೆಂಬುದನ್ನು ಸೂಚಿಸಲಾಗಿದೆ.

ಈ ಪುಸ್ತಕವು ಮೊದಲ ಬಾರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 1995ರಲ್ಲಿ ಪ್ರಕಟವಾಗಿತ್ತು. 2018ರಲ್ಲಿ ಈ ಕೃತಿಯು ಎರಡನೇ ಮುದ್ರಣವನ್ನು ಕಂಡಿರುತ್ತದೆ. 

About the Author

ಡಿ.ಎನ್. ಶಂಕರ ಬಟ್

ಹಿರಿಯ ಲೇಖಕ ಡಿ.ಎನ್. ಶಂಕರ ಬಟ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಮದ್ರಾಸ್ ವಿಶ್ವವಿದ್ಯಾಲಯದಿಂದ  ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವೀಧರರು.  ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ.ಪದವೀಧರರು. ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ...

READ MORE

Related Books