ಸಾಹಿತ್ಯ ಭಾರತೀ

Author : ಎನ್. ಅನಂತ ರಂಗಾಚಾರ್

Pages 1308

₹ 800.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

‘ಸಾಹಿತ್ಯ ಭಾರತೀ’ ಕೃತಿಯು ಎನ್. ಅನಂತರಂಗಾಚಾರ್ ಅವರ ಗ್ರಂಥವಾಗಿದೆ. ಈ ಕೃತಿ ಭರತ ಖಂಡದ ಹತ್ತೊಂಬತ್ತು ಅಧಿಕೃತ ಭಾಷೆಗಳ ಸಾಹಿತ್ಯ ಚರಿತ್ರೆಯ ಜೊತೆಗೆ ಇಲ್ಲಿ ಭಾರತೀಯರಿಂದ ರಚಿತವಾಗುತ್ತಿರುವ ಇಂಗ್ಲೀಷ್ ಸಾಹಿತ್ಯದ ಚರಿತ್ರೆಯೂ ರೂಪುಗೊಂಡಿದೆ. ಅಲ್ಲದೇ ಭಾರತದ ವಿವಿಧ ಭಾಷೆಗಳ ಮಾದರಿ ಬರೆಹಗಳನ್ನೂ ನೀಡಿರುವುದು ಮತ್ತೊಂದು ವಿಶೇಷ. ಸಾಹಿತ್ಯ ಭಾರತೀ ಹೆಸರೇ ಹೇಳುವಂತೆ ಭಾರತದ ಸಾಹಿತ್ಯಕ ಸಂವೇದನೆಯನ್ನು ಕಾಲಾನುಕ್ರಮಣಿಕೆಯನ್ನು ದಾಖಲಿಸುವ ಕಾರ್ಯವಾಗಿವೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ತೌಲನಿಕ ಅಧ್ಯಯನಕ್ಕೆ ಆಕರಗ್ರಂಥವಾಗಿ ಒದಗುವ ಒಂದು ಸಂಶೋಧನಾ ಗ್ರಂಥವಾಗಿಯೂ ಇದು ಅತ್ಯಂತ ಗಮನಾರ್ಹವಾದ ಕೃತಿಯಾಗಿದೆ.

About the Author

ಎನ್. ಅನಂತ ರಂಗಾಚಾರ್ - 28 October 1997)

ಕ್ರಿ.ಶ. 1904 ಜೂನ್ ತಿಂಗಳಲ್ಲಿ , ಎನ್ . ಅನಂತರಂಗಾಚಾರ್, ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಜನಿಸಿದರು. ತಂದೆ ಶ್ರೋತ್ರೀಯ ಬ್ರಾಹ್ಮಣ ನರಸಿಂಹಾಚಾರ್ಯರು. ಆಚಾರ್ಯರೇ ಒಂದೆಡೆ ಹೇಳಿರುವಂತೆ ಇವರೇ ಅವರಿಗೆ ಕಾಯಕ ಮೌಲ್ಯವನ್ನೂ ಕಾಲಪ್ರಜ್ಞೆಯನ್ನು ಕಲ್ಪಿಸಿಕೊಟ್ಟವರು. ನಾಲ್ಕನೇ ವರ್ಷದಿಂದ ಹದಿಮೂರನೇ ವರ್ಷದವರೆಗೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಜೊತೆಯಲ್ಲಿಯೇ ಇರಿಸಿಕೊಂಡು ಆ ಅವಧಿಯಲ್ಲಿ ವೇದ , ಪ್ರಬಂಧ , ಪ್ರಯೋಗ , ಸಂಸ್ಕೃತ  ಕಲಿಸಿದರು .ತಿ. ನರಸೀಪುರದ ಎ.ವಿ. ಸ್ಕೂಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ, ನಂತರ, ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು .ಮೈಸೂರು ...

READ MORE

Related Books