ಕನ್ನಡ ಭಾಷೆಯ ಕಲಿಕೆಯ ಸಮಸ್ಯೆಗಳು

Author : ಪಿ. ಮಹಾದೇವಯ್ಯ

Pages 92

₹ 60.00




Year of Publication: 2009
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಕರ್ನಾಟಕದಲ್ಲಿರುವ ಉರ್ದು ಭಾಷಿಕರು, ದ್ವಿಭಾಷಿಕರು ಮತ್ತು ಬಹುಭಾಷಿಕರಾಗಿದ್ದಾರೆ. ಈ ಲಕ್ಷಣ ಕರ್ನಾಟಕದಾದ್ಯಂತ ಬೇರೆ ಬೇರೆ ಪ್ರಮಾಣದಲ್ಲಿದ್ದು ಉರ್ದು ಭಾಷಿಕರು ಶಾಲೆಯ ಪರಿಸರದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಮೂರನೇ ತರಗತಿಯಿಂದ ಓದಬೇಕಾಗಿದೆ. ಈ ಹಿನ್ನಲೆಯಲ್ಲಿ ಉರ್ದು ಭಾಷಿಕರು ಶಾಲೆಯ ಪರಿಸರದಲ್ಲಿ ಕನ್ನಡವನ್ನು ಓದುವಾಗ ಮತ್ತು ಬರವಣಿಗೆ ಮಾಡುವಾಗ ಎಂಥಹ ಸಮಸ್ಯೆಗಳನ್ನು ಎದುರಿಸುತ್ತಾರೆ? ಮತ್ತು ಏಕ? ಎಂಬುದನ್ನು ಈ ಗ್ರಂಥದಲ್ಲಿ ವಿಸ್ತರಿಸಲಾಗಿದೆ. ಪ್ರಸ್ತುತ ಅಧ್ಯಯನದಲ್ಲಿ ಸಾಮುದಾಯಿಕ ನೆಲೆಯಲ್ಲಿ ಕಂಡುಬರುವ ಭಾಷಾ ಕಲಿಕಾ ಸಮಸ್ಯೆಗಳನ್ನು ಮಾತ್ರ ಪರಿಗಣಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ:ಓದು ಮತ್ತು ಬರವಣಿಗೆಯಲ್ಲಿನ ಸಮಸ್ಯೆಗಳು , ಗುಣಿತಾಕ್ಷರಗಳು ,ಒತ್ತಕ್ಷರಗಳು ,ವ್ಯಾಕರಣಾಂಶಗಳಲ್ಲಿ ಕಂಡುಬರುವ ವ್ಯತ್ಯಾಸಗಳು , ಕಥಾ ಮಾದರಿಗಳು , ಕಾರಣಗಳು ಮತ್ತು ಪರಿಹಾರಗಳು

Related Books