ಕೊಡಗಿನ ಭಾಷೆ ಮತ್ತು ಸಂಸ್ಕೃತಿ

Author : ಲಲಿತ ಕೆ.ಪಿ

Pages 84

₹ 10.00




Year of Publication: 2021
Published by: ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ
Address: ಮಾನಸ ಗಂಗೋತ್ರಿ ಕರ್ನಾಟಕ 570009\n

Synopsys

ಕೊಡಗಿನ ಭಾಷೆ ಮತ್ತು ಸಂಸ್ಕೃತಿ ಲಲಿತ ಕೆ.ಪಿ ಅವರ ಕೃತಿಯಾಗಿದೆ. ಕೊಡಗಿನ ಪ್ರಮುಖ ಭಾಷೆಯಾದ ಕೊಡವ ಭಾಷೆ ವಿಕಸಿಸಿರುವುದು ಮೂಲದ್ರಾವಿಡ ಭಾಷೆಯಿಂದ, ಈ ಭಾಷೆಯಲ್ಲಿ ಶೇಕಡ ೪೦ರಷ್ಟು ಕನ್ನಡ ಉಳಿದ್ದದ್ದು ತಮಿಳು, ಮಲೆಯಾಳಂ, ತುಳು, ತೆಲುಗು ಇತ್ಯಾದಿಗಳು, ದ್ರಾವಿಡ ಭಾಷೆಗಳ ಕಲಸುಮೇಲೋಗರವಾಗಿರುವ ಈ ಲಿಪಿ ರಹಿತ ಭಾಷೆಯಲ್ಲಿ ಹಿಂದಿ, ರಾಜಸ್ತಾನಿ, ಹಿಂದುಸ್ತಾನಿ ಸಂಸ್ಕೃತಿ ಹಾಗೂ ಇಂಗ್ಲಿಷ್ ಪದಗಳು ಕೂಡಾ ಇವೆ. ಹಾಗೆಯೇ ಕೆಲವು ಹಳಗನ್ನಡದ ಶಬ್ದಗಳು ಈ ಭಾಷೆಯಲ್ಲಿ ಕಂಡುಬರುತ್ತವೆ. ಕೊಡವ ಭಾಷೆಯ ಒಂದು ಗಾದೆಯಾದ 'ಅಣ್ಣಚತ್ತದ್ ನಂದಾಚಿ, ಅಂಬು ಜಿಲ್ಸ್‌ನಾಕಾಚಿ'. (ಅಣ್ಣಸತ್ತಿದ್ದು ಒಳ್ಳೇದ ಆಯಿತು ಏಕೆಂದರೆ ಅವನ ಬಿಲ್ಲುಬಾಣ ನನಗಾಯಿತು) ಈ ಸಾಲಿನಲ್ಲಿರುವ 'ಅಂಬು' ಎಂಬ ಶಬ್ದ ಹಳಗನ್ನಡ ಪದ. ಇದರ ಅರ್ಥ 'ಬಾಣ' ಹಾಗೆಯೇ ಬಳಕೆಯಲ್ಲಿರುವ 'ಮಿಗ' ಅಂದರೆ ಜಿಂಕೆ ಕೊಡವ ಭಾಷೆಯಲ್ಲಿ ಇವೇ ಮೊದಲಾದ ಹಳಗನ್ನಡ ಶಬ್ದಗಳನ್ನು ಗಮನಿಸಿದಾಗ ಈ ಕೊಡವ ಭಾಷೆಗೂ ಹಳಗನ್ನಡ ಭಾಷೆಗೂ ಸಂಬಂಧವಿತ್ತು ಎಂಬ ಅಂಶ ಗಮನಕ್ಕೆ ಬರುತ್ತದೆ. ಎಂದು ಕೊಡವ ಭಾಷೆಯ ಬಗ್ಗೆ ಲೇಖಕಿ ಈ ಕೃತಿಯಲ್ಲಿ ತಿಳಿಸಿದ್ದಾರೆ.

About the Author

ಲಲಿತ ಕೆ.ಪಿ

ಲಲಿತ ಕೆ.ಪಿ ಮೂಲತಃ ಕೊಡಗಿನವರು. ಪ್ರಸ್ತುತ್ತ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತಿದ್ದಾರೆ.  ಕೃತಿಗಳು: ವಿರಾಜಪೇಟೆ ತಾಲೂಕಿನ ಸ್ಥಳನಾಮಗಳು, ವಿವಕ್ಷಾ,ಜೀವಂತ ಪಳೆಯುಳಿಕೆಗಳ ಕುರಿತು, ವಿವೇಚನೆ,ಶೋಧನೆಯ ಹಾದಿಯಲ್ಲಿ, ಪೊಮ್ಮೋದಿರ ಪೊನ್ನಪ್ಪ, ಕೊಡಗಿನ ಜನಪದ ಕಥೆಗಳು, ಕೊಡಗಿನ ಭಾಷೆ ಮತ್ತು ಸಂಸ್ಕೃತಿ ...

READ MORE

Related Books