ಕನ್ನಡ ಕಹಳೆ

Author : ಪರಮೇಶ್ವರಯ್ಯ ಸೊಪ್ಪಿಮಠ

Pages 264

₹ 250.00




Year of Publication: 2020
Published by: ಪ್ರಭುದೇವ ಜನ ಕಲ್ಯಾಣ ಸಂಸ್ಥೆ, ಸಂಡೂರು
Address: ಶ್ರೀ ಪ್ರಭುಸ್ವಾಮಿಗಳು, ವಿರಕ್ತಮಠ, ಪ್ರಭುದೇವ ಜನ ಕಲ್ಯಾಣ ಸಂಸ್ಥೆ, ಸಂಡೂರು.
Phone: 6360848644

Synopsys

ಹಿಂದಿನ ತಲೆಮಾರಿನವರು ಕನ್ನಡಕ್ಕಾಗಿ ಯಾವ ರೀತಿ ದುಡಿದರು ಎಂಬುದು ಇವತ್ತಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಲೇಖಕ ಪರಮೇಶ್ವರಯ್ಯ ಸೊಪ್ಪಿಮಠ ಅವರು ಹೊರತಂದ ಕೃತಿ ಇದಾಗಿದೆ. ಈ ಕೃತಿಯಲ್ಲಿ ಕನ್ನಡಕ್ಕಾಗಿ ದುಡಿದ ಜೀವನ ಮುಡಿಪಾಗಿಟ್ಟ 16 ಜನರ ರೋಚಕ ಬದುಕನ್ನು ಸಶಕ್ತವಾಗಿ ನಿರೂಪಿಸಲಾಗಿದೆ. ಇವು ವ್ಯಕ್ತಿಗತವಾಗಿ ಬಿಡಿಬಿಡಿ ಲೇಖನಗಳಾಗಿ ಕಂಡರೂ, ಕನ್ನಡ-ಕರ್ನಾಟಕತ್ವದ ಬಗ್ಗೆ ಇಲ್ಲಿಯ ಹದಿನಾರು ಜನ ಮಹನೀಯರು ಇಟ್ಟ ದಿಟ್ಟಹೆಜ್ಜೆ, ಪಟ್ಟ ಪರಿಶ್ರಮ, ಕೊಟ್ಟ ಸಾಹಿತ್ಯ ಕೊಡುಗೆಗಳನ್ನು ಅಖಂಡ ಕರ್ನಾಟಕತ್ವದ ಏಕೀಕರಣ ಚರಿತ್ರೆಯನ್ನಾಗಿ ಪರಿಭಾವಿಸಬಹುದಾಗಿದೆ. 

ಕನ್ನಡ ಋಷಿ : ಕಿಟೆಲ್, ಭುವನೇಶ್ವರಿಯ ಜೀವಕಳೆ : ಡೆಪ್ಯೂಟಿ ಚೆನ್ನಬಸಪ್ಪ, ಕನ್ನಡ ಶಾಸನ ಬ್ರಹ್ಮ : ರೈಸ್, ಸಿರಿಗನ್ನಡದ ತೇರು : ರಾ.ಹ.ದೇಶಪಾಂಡೆ, ಕನ್ನಡದ ಪುಣ್ಯ ಪುರುಷ : ಗಳಗನಾಥ, ವಚನ ಪ್ರಕಾಶ: ಹಳಕಟ್ಟಿ, ಕನ್ನಡ ಪುರೋಹಿತ : ಆಲೂರು ವೆಂಕಟರಾಯ, ಸರ್ವಜ್ಞ ಸಮರ್ಪಿತ ಜೀವ: ಉತ್ತಂಗಿ ಚನ್ನಪ್ಪ, ಗಡಿನಾಡ ಭುವನೇಶ್ವರಿ : ಜಯದೇವಿತಾಯಿ, ಕನ್ನಡದ ಸ್ವಾಮೀಜಿ : ತೋಂಟದ ಸಿದ್ಧಲಿಂಗ ಮಹಾಸ್ವಾಮಿ ಮುಂತಾದ ಲೇಖನಗಳನ್ನು ಇಲ್ಲಿ ಕಾಣಬಹುದಾಗಿದೆ. 

About the Author

ಪರಮೇಶ್ವರಯ್ಯ ಸೊಪ್ಪಿಮಠ
(21 September 1974)

ಪರಮೇಶ್ವರಯ್ಯ ಸೊಪ್ಪಿಮಠ: 1974 ಸೆಪ್ಟೆಂಬರ್ 21ರಂದು ಬಳ್ಳಾರಿ ಜಿಲ್ಲೆ, ಹಗರಿಬೊಮ್ಮನಹಳ್ಳಿಯಲ್ಲಿ ಜನನ. ಪ್ರಾಥಮಿಕದಿಂದ ಪಿ.ಯು.ವರೆಗೂ ಹ.ಬೊ.ಹಳ್ಳಿಯಲ್ಲಿ ವಿದ್ಯಾಭ್ಯಾಸ. ಶಿಕ್ಷಕ ತರಬೇತಿಯು ತುಮಕೂರಿನ ಸಿದ್ಧಗಂಗಾಮಠದಲ್ಲಿ ಆಯಿತು. ತದನಂತರ ದೂರಶಿಕ್ಷಣದ ಮುಖಾಂತರ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಬಿ.ಎ ಪದವಿ ಹಾಗೂ ಎಂ.ಎ. (ಕನ್ನಡ) ಸ್ನಾತಕೋತ್ತರ ಶಿಕ್ಷಣ. ಎಂ.ಎ. (ಪತ್ರಿಕೋದ್ಯಮ) ಸ್ನಾತಕೋತ್ತರ ಶಿಕ್ಷಣವನ್ನು ಕನ್ನಡ ವಿ.ವಿ. ಹಂಪಿಯಲ್ಲಿ ಅಭ್ಯಾಸ. ಪ್ರಸ್ತುತ ಕನ್ನಡ ವಿ.ವಿ. ಹಂಪಿಯ ಕನ್ನಡ ಅಧ್ಯಯನ ವಿಭಾಗದಲ್ಲಿ “ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ” ವಿಷಯದ ಮೇಲೆ ಪಿಹೆಚ್.ಡಿ. ಅಧ್ಯಯನ. 1998ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸಕ್ಕೆ ಸೇರ್ಪಡೆ. ಶಿಕ್ಷಕಿ ವನಿತಾರೊಂದಿಗೆ ...

READ MORE

Related Books