ಹೇಮಚಂದ್ರ

Author : ಎಸ್.ಬಿ.ವಸಂತರಾಜಯ್ಯ

Pages 35

₹ 10.00
Year of Publication: 2005
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560030
Phone: 080-22107732

Synopsys

12 ನೇ ಶತಮಾನದಲ್ಲಿ ಅಹಿಂಸೆಯ ತತ್ವದ ಮೂಲಕ ಚಿರಪರಿಚಿತರಾದ “ ಆಚಾರ್ಯ ಹೇಮಚಂದ್ರ” ಅವರ ಬಗ್ಗೆ ಲೇಖಕ ಎಸ್.ಬಿ ವಸಂತರಾಜಯ್ಯ ರವರು ಈ ಕೃತಿಯಲ್ಲಿಕೊಟ್ಟಿದ್ದಾರೆ. ಅಹಿಂಸೆಯ ಮೂಲಕ ಪ್ರಸಿದ್ಧಿಯಾದ ಮಹಾತ್ಮ ಗಾಂಧೀಜಿ ಅವರು ಹುಟ್ಡಿದ ಗುಜರಾತ್ ನಲ್ಲಿ ಅಹಿಂಸೆಯನ್ನು ಗಾಂಧೀಜಿಗಿಂತ ಮೊದಲೇ ಹೇಮಚಂದ್ರ ಅವರು ಪ್ರತಿಪಾದಿಸಿದ್ದರು. ಗುಜರಾತಿನ ರಾಜ ಸಿದ್ದರಾಜ ಜಯಸಿಂಹ ಮತ್ತು ಅವರ ನಂತರ ಪಟ್ಟಕ್ಕೇರಿದ ಕುಮಾರಪಾಲನಿಗೆ ರಾಜಗುರುವಾಗಿ ಮಾರ್ಗದರ್ಶನ ಮಾಡಿದ್ದ ಹೇಮಚಂದ್ರರು ಅಹಿಂಸೆಯ ತತ್ವವನ್ನು ಮುನನುಷ್ಯರಿಗೆ ಅಷ್ಟೇ ಅಲ್ಲದೆ ಪ್ರಾಣಿಗಳ ಸಂಕುಲಕ್ಕೂ ತುಂಬಾ ಶೃದ್ಧೆಯಿಂದ ಪಾಲನೆ ಮಾಡಿದವರು. ಈ ಎಲ್ಲಾ ಸಂಗತಿಗಳನ್ನು ಈ ಕೃತಿಯಲ್ಲಿ ವಿವರವಾಗಿ ಕಟ್ಟಿಕೊಡಲಾಗಿದೆ.

About the Author

ಎಸ್.ಬಿ.ವಸಂತರಾಜಯ್ಯ
(13 September 1924)

ಎಸ್. ಬಿ. ವಸಂತರಾಜಯ್ಯ ಅವರು 1924 ಸೆಪ್ಟಂಬರ್‌ 13 ಮೈಸೂರು ಜಿಲ್ಲೆ ಕೆ ಆರ್ ನಗರ ಸಾಲಿಗ್ರಾಮದಲ್ಲಿ ಜನಿಸಿದರು. ತಂದೆ: ಎಸ್. ಬಿ. ಬ್ರಹ್ಮದೇವಯ್ಯ. ತಾಯಿ: ಸರಸ್ವತಮ್ಮ. ಹಲವಾರು ಜೈನ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವ್ಯವಸ್ಥಾಪಕ ಟ್ರಸ್ಟಿ ಹಾಗೂ ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. `ನಿಷ್ಕಾಮ ಯೋಗಿ - ಕಿರು ಕಾದಂಬರಿ, `ಅಹಿಂಸಾ ಜ್ಯೋತಿ ಮಹಾವೀರ’, ‘ಹೇಮಚಂದ್ರ’ - ಜೀವನ ಚರಿತ್ರ, `ಶ್ರವಣಬೆಳಗೊಳದಿಂದ ಕೊಪ್ಪಳ’ - ಪ್ರಾಚೀನ ಕ್ಷೇತ್ರಗಳ ಪರಿಚಯ, `ಅಷ್ಟಪಾಹುಡ’ - ಅನುವಾದ, ‘ನಿತ್ಯ ...

READ MORE

Related Books