ಜೈನ ನಿತ್ಯವಿಧಿ ಮುಕ್ತಾವಲೀ

Author : ಎರ್ತೂರು ಶಾಂತಿರಾಜಶಾಸ್ತ್ರಿ

Pages 80

₹ 110.00




Year of Publication: 2013
Published by: ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್
Address: ಜಯನಗರ, ಬೆಂಗಳೂರು- 560070

Synopsys

ಎರ್ತೂರು ಶಾಂತಿರಾಜಶಾಸ್ತ್ರಿಗಳು ಸಂಪಾದಿಸಿರುವ ಕೃತಿ ಜೈನ ನಿತ್ಯವಿಧಿ ಮುಕ್ತಾವಲೀ. ಅತ್ಯಂತ ಲೋಕಪ್ರಿಯವಾದ ಈ ಕೃತಿ ಐದು ಬಾರಿ ಮರುಮುದ್ರಣವಾಗಿದ್ದು, ಇದು ಆರನೇ ಆವೃತ್ತಿಯಾಗಿದೆ. ಜೈನ ನಿತ್ಯವಿಧಿ ಮುಕ್ತಾವಲೀ ಹೆಸರಿನ ಈ ಕೃತಿಯಲ್ಲಿ ಮೂಲ ಪುಸ್ತಕದ ಪೂಜಾಪಾಠಗಳಲ್ಲದೆ ದರ್ಶನ ಸ್ತುತಿ, ಸಾಮಾಯಿಕ ಪಾಠ, ಭಕ್ತಾಮರ ಸ್ತೋತ್ರಂ, ತೀರ್ಥಂಕರ ಜಯಮಾಲ ಮೊದಲಾದವುಗಳನ್ನು ಸೇರ್ಪಡೆ ಮಾಡಲಾಗಿದೆ.

About the Author

ಎರ್ತೂರು ಶಾಂತಿರಾಜಶಾಸ್ತ್ರಿ

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ...

READ MORE

Related Books