ಕಿತ್ತೂರು ಸಂಸ್ಠಾನ ಸಾಹಿತ್ಯ -ಭಾಗ ೩

Author : ಎಂ.ಎಂ. ಕಲಬುರ್ಗಿ

Pages 127

₹ 100.00




Year of Publication: 2005
Published by: ವೀರಶೈವ ಅಧ್ಯಯನ ಸಂಸ್ಥೆ
Address: ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ-ಡಂಬಳ

Synopsys

ಕಿತ್ತೂರು ಸಂಸ್ಥಾನ ಸಾಹಿತ್ಯವನ್ನು ಮೂರು ಭಾಗಗಳಾಗಿ ವ್ಯವಸ್ಥಿತವಾಗಿ ವಿಂಗಡಿಸಿ ಸಂಪಾದಿಸಿದ್ದಾರೆ ಡಾ.ಎಂ.ಎಂ. ಕಲಬುರ್ಗಿ. ಮೊದಲೆರಡು ಕೃತಿಗಳನ್ನು ಇತರರೊಂದಿಗೆ ಸೇರಿ ಹೊರತಂದಿದ್ದರೆ ಮೂರನೇ ಭಾಗ ಕಲಬುರ್ಗಿ ಅವರೊಬ್ಬರೇ  ಸಂಪಾದಿಸಿದ್ದು.

ಸಂಸ್ಥಾನದ ಪ್ರಮುಖ ರಾಜ-ರಾಣಿಯರ ಚರಿತ್ರೆ, ಯುದ್ಧವೇಶ, ಪದಸಾಹಿತ್ಯ, ಪುರಾಣ, ಉತ್ಸವ, ಸರ್ ವಾಲ್ಟರ್ ಎಲಿಯಟ್ ರಚಿಸಿದ 'ಮಿಸಲೆನಿಯಸ್ ನಿಟ್ಸ್ ಆಫ್ ಸರ್ ವಾಲ್ಟರ್ ಎಲಿಯಟ್'ಕೃತಿಯ ಆಯ್ದ ಲೇಖನಗಳ ಇಂಗ್ಲೀಷ ಮೂಲದೊಂದಿಗೆ ಕನ್ನಡ ಅನುವಾದ ಕೃತಿಯಲ್ಲಿದೆ. ಶಿಷ್ಟ ಹಾಗೂ ಜನಪದ ಕವಿಗಳ ಕೃತಿಗಳನ್ನು ಆಧರಿಸಿ ಪುಸ್ತಕ ಹೊರಬಂದಿದೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books