ಗಿರಿಜಾ ಕಲ್ಯಾಣ ಮಹಾಪ್ರಬಂಧಂ

Author : ಎಚ್. ದೇವೀರಪ್ಪ

Pages 182

₹ 2.00




Year of Publication: 1953
Published by: ಶ್ರೀ ಗೌರಿಶಂಕರ ಬುಕ್ ಡಿಪೋ
Address: ಮೈಸೂರು

Synopsys

ದೇ. ಜವರೇಗೌಡ ಹಾಗೂ ಎಚ್. ದೇವೀರಪ್ಪ ಸಂಪಾದಕತ್ವದ ಕೃತಿ-ಗಿರಿಜಾ ಕಲ್ಯಾಣ ಮಹಾಪ್ರಬಂಧಂ. ಇದರ ಕರ್ತೃ ಹರಿಹರ ಕವಿ. ಹಿಂದಿನ ಕವಿಗಳಂತೆ ಈತನೂ ಸಹ ಪುರಾಣೇತಿಹಾಸದ ವಸ್ತುವನ್ನೇ ತನ್ನ ಕಾವ್ಯಕ್ಕೆ ಬಳಸಿಕೊಂಡಿದ್ದಾನೆ. ಹೈಮವತಿ ಶೈಶವಲೀಲೆ, ಗಿರಿಜಾ ವಧೂ ನಿತ್ಯ ಶಿವಾರ್ಚನೆ, ಅನಿರ್ದಲ್ಲಿಗೆ ಸಮಂತು ತನ್ನನೆ ತರ್ಪೆಂ, ತಪವಗಣ್ಯ ಪಾವನ ಪುಣ್ಯಂ, ಮನೋಜಹರೆ ದಂಪತಿಗಳ್- ಅಧ್ಯಾಯಗಳು ಸೇರಿದಂತೆ, ಶಿವಪುರಾಣದ ಪಾರ್ವತೀಖಂಡದ ಕಥಾ ಸಾರ, ಸ್ಕಂಧ ಪುರಾಣದ ಕೌಮಾರಿಕಾ ಖಂಡದ ಕಥಾ ಸಾರ ಹೀಗೆ ಟಿಪ್ಪಣಿಸಹಿತ ಇರುವ ವಿವರಣೆಯು ಈ ಕೃತಿಯ ವೈಶಿಷ್ಟ್ಯವಾಗಿದೆ.

About the Author

ಎಚ್. ದೇವೀರಪ್ಪ
(06 June 1913 - 03 January 1988)

ಕನ್ನಡ ಸಾಹಿತ್ಯ ಲೋಕದ ಸಂಶೋಧಕ ದಿಗ್ಗಜರೆಂದೇ ಖ್ಯಾತರಾಗಿರುವ ಎಚ್.ದೇವಿರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ (ಈಗ ದಾವಣಗೆರೆ ಜಿಲ್ಲೆ) ಮಲ್ಲಿಗೇನಹಳ್ಳಿಯಲ್ಲಿ ಜನಿಸಿದರು, ಶ್ರೇಷ್ಠ ಉನ್ನತ ಮಟ್ಟದ ಸಂಶೋಧಕರಾಗಿದ್ದಂತೆಯೇ ಒಳ್ಳೆಯ ಕಾದಂಬರಿಕಾರರೂ, ಕಲೆಗಾರರೂ, ಜೀವನ ಚರಿತ್ರಕಾರರೂ ಆಗಿದ್ದ ದೇವಿರಪ್ಪ ಅವರಿಗೆ ಹಲವು ಗೌರವ, ಪ್ರಶಸ್ತಿಗಳು ಸಂದಿವೆ. 1975ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸಾಹಿತ್ಯ ಪ್ರಶಸ್ತಿಯಲ್ಲಿ ಸಿರಿಗೆರೆಯ ತರಳಬಾಳು ಸಂಸ್ಥೆಯು ದೇವಿರಪ್ಪ ಅವರನ್ನು ವಿಶ್ವ ಮಾನವ ಪತ್ರವನ್ನು ನೀಡಿ ಗೌರವಿಸಿದೆ. ಹೊನ್ನಾಳಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಶ್ರೀ ಎಚ್. ದೇವೀರಪ್ಪ (1913-1988) ಅವರು ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ...

READ MORE

Related Books