ಚೆನ್ನವೀರ ಜಂಗಮದೇವ ವಿರಚಿತ ಷಟ್ಸ್ಥಲ ವಲ್ಲಭ

Author : ಚನ್ನಪ್ಪ ಎರೇಸೀಮೆ

Pages 498

₹ 35.00




Year of Publication: 1980
Published by: ವೀರಶೈವ ಅಧ್ಯಯನ ಸಂಸ್ಥೆ
Address: ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ.

Synopsys

`ಚೆನ್ನವೀರ ಜಗದ್ಗುರು ವಿರಚಿತ ಷಟ್ ಸ್ಥಲ ವಲ್ಲಭ' ಕೃತಿಯನ್ನು ಪಂಡಿತ ಚನ್ನಪ್ಪ ಎರೇಸೀಮೆ ಹಾಗೂ ಎಚ್. ದೇವೀರಪ್ಪ ಅವರು ಸಂಪಾದಿಸಿದ್ದಾರೆ. ಷಟ್ ಸ್ಥಲ ವಲ್ಲಭ ಎಂಬ ಗ್ರಂಥವನ್ನು ರಚಿಸಿದವರು-ಚೆನ್ನವೀರೇಶ್ವರರು. ಕವಿ ಚರಿತೆಕಾರರ ಪ್ರಕಾರ ಇವರು 1470ರ ಆಸುಪಾಸು ಜೀವಿಸಿದ್ದರೆಂದು ಹೇಳಲಾಗುತ್ತಿದೆ. ಕಾಲ ನಿಗದಿ ಕುರಿತು ಸಂಶೋಧನೆಗಳು ನಡೆದಿವೆ. ಷಟ್ ಸ್ಥಲ ವಲ್ಲಭ ಕೃತಿಯು ಚಂಪೂಕಾವ್ಯವಾಗಿದೆ. ಬಸವಾದಿ ಪ್ರಮಥರ ನಂತರ ಷಟ್ ಸ್ಥಲ ಸಿದ್ಧಾಂತದ ಪ್ರಬಲ ಸಮರ್ಥಕರಾಗಿ ಕ್ರಾಂತಿಗೆ ನಾಂದಿ ಹಾಡಿದ ಶ್ರೀ ಮದನಾದಿ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರರ ಹಿರಿಮೆ-ಹೆಚ್ಚುಗಾರಿಕೆಯನ್ನು ಬೆಳಗುವ ಒಂದು ಉತ್ತಮ ಕೃತಿ.

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books