ರಕ್ಷಾಶತಕ ಮತ್ತು ಪಂಪಾಶತಕ

Author : ಶಿ.ಶಿ. ಬಸವನಾಳ

Pages 57

₹ 0.00




Year of Publication: 1952
Published by: ಸಾಹಿತ್ಯ ಸಮಿತಿ
Address: ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಧಾರವಾಡ

Synopsys

ಹಂಪಿಯ ಹರಿಹರದೇವನ ಶತಕಗಳ ಪೈಕಿ ರಕ್ಷಾಶತಕ ಮತ್ತು ಪಂಪಾಶತಕಗಳು ಪ್ರಮುಖವಾಗಿದ್ದು, ಶಿ.ಶಿ. ಬಸವನಾಳರು ಸಂಪಾದಿಸಿದ್ದಾರೆ. ಧಾರವಾಡದ ಶ್ರೀ ಜಗದ್ಗುರು ಮುರುಘರಾಜೇಂದ್ರ ಪ್ರಸಾದ ನಿಲಯದ ಬೆಳ್ಳಿ ಹಬ್ಬದಂಗವಾಗಿ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯು 1943ರಲ್ಲಿ ಮೊದಲ ಆವೃತ್ತಿ ಕಂಡಿತ್ತು. 1951ರಲ್ಲಿ ಶಿ.ಶಿ. ಬಸವನಾಳರು ಮರಣ ಹೊಂದಿದ್ದು, ಅವರ ಅನುಪಸ್ಥಿತಿಯಲ್ಲಿ ಕೃತಿ ಎರಡನೇ ಆವೃತ್ತಿ ಪಡೆಯುತ್ತಿದೆ. ಈ ಕೃತಿಯನ್ನು ಮೈಸೂರು ವಿ.ವಿ. ಹಾಗೂ ಕರ್ನಾಟಕ ವಿ.ವಿ. ಗಳು ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿಸಿದ್ದವು. ಹರಿಹರ ಕವಿಯ ಸಮಗ್ರ ಪರಿಚಯದೊಂದಿಗೆ ಶತಕಗಳನ್ನು ಸಂಗ್ರಹಿಸಿ ಕೊಡಲಾಗಿದೆ.

About the Author

ಶಿ.ಶಿ. ಬಸವನಾಳ
(07 November 1893 - 22 February 1951)

ಸಾರ್ವಜನಿಕ ಬದುಕು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ ಅವರು ವಚನ ಸಾಹಿತ್ಯ ಮತ್ತು ವೀರಶೈವ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. 1893ರ ನವೆಂಬರ್ 7ರಂದು ಜನಿಸಿದ ಅವರ ತಂದೆ ಶಿವಯೋಗಪ್ಪ ತಾಯಿ ಸಿದ್ಧಮ್ಮ. ಮೆಟ್ರಿಕ್ ಪರೀಕ್ಷೆ (1910) ಮುಗಿಸಿದ ನಂತರ ಪುಣೆಗೆ ತೆರಳಿದ್ದು, ಅಲ್ಲಿಯ ಡೆಕ್ಕನ್ ಕಾಲೇಜಿನಲ್ಲಿ ಎಂ. ಎ. (1915) ಪೂರ್ಣಗೊಳಿಸಿದರು.  ಸರ್ಕಾರಿ ಕೆಲಸಕ್ಕೆ ಸೇರದೆ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಧಾರವಾಡದಲ್ಲಿ ಕೆಎಲ್ಇ ಸೊಸೈಟಿ ಸ್ಥಾಪಿಸಿ, ಕೆಲವು ಕಾಲ ಧಾರವಾಡದ ಆರ್. ಎಲ್. ಎಸ್. ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿ, ಲಿಂಗರಾಜ ಕಾಲೇಜಿನಲ್ಲಿ ...

READ MORE

Related Books