ಆಯ್ದ ಹಳೆಗನ್ನಡ ಪಠ್ಯಗಳು

Author : ಕಲ್ಯಾಣರಾವ ಜಿ. ಪಾಟೀಲ

Pages 96

₹ 40.00




Year of Publication: 2011
Published by: ಪ್ರಸಾರಾಂಗ
Address: # ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ

Synopsys

ಲೇಖಕ ಡಾ. ಕಲ್ಯಾಣರಾವ್ ಜಿ. ಪಾಟೀಲ ಅವರ ಕೃತಿ-ಆಯ್ದ ಹಳೆಗನ್ನಡ ಪಠ್ಯಗಳು. ಈ ಕೃತಿಯು ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎ.ನಾಲ್ಕನೇ ಸೆಮಿಸ್ಟರ್ ಪಠ್ಯಪುಸ್ತಕವಾಗಿದೆ. ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲು ಸಿಕ್ಕಿರುವ ಲಾಕ್ಷಣಿಕ ಗ್ರಂಥವಾದ ಶ್ರೀವಿಜಯನ ಕವಿರಾಜಮಾರ್ಗದ ಕಾವ್ಯ ಭಾಗವನ್ನು ‘ಪರಿಣತ ಮತಿಗಳ್’ ಎಂಬ ಶೀರ್ಷಿಕೆಯಲ್ಲಿ ಸಂಗ್ರಹಿಸಿದೆ. ಕನ್ನಡ ನಾಡಿನ ಜನರಲ್ಲಿರುವ ಪರಧರ್ಮ ಸಹಿಷ್ಣುತೆ, ಸರ್ವಧರ್ಮ ಸಮನ್ವಯದ ಸಂದೇಶವಿದೆ. ಶಿವಕೊಟ್ಯಾಚಾರ್ಯರ ವಡ್ಡಾರಾಧನೆಯಲ್ಲಿಯ ಸುಕುಮಾರಸ್ವಾಮಿಯ ಕಥೆಯಲ್ಲಿನ ಅಗ್ನಿಭೂತಿ ಮತ್ತು ವಾಯುಭೂತಿಯರ ಕಥಾನಕವನ್ನು ‘ಓದಲಾರ್ಪೊಡೆ ಓದಿಸಲಕ್ಕುಮ್’ ಶೀರ್ಷಿಕೆಯಡಿ ಕೊಡಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಇರಬೇಕಾದ ಶಿಸ್ತು, ಪರಿಶ್ರಮ, ವಿನಮ್ರತೆ ಗಳನ್ನು ಎತ್ತಿಹಿಡಿಯುತ್ತದೆ. ಇದರ ಜೊತೆಯಲ್ಲಿಯೇ ‘ಗಂಭೀರೆಯ ಕಥೆ’ಯನ್ನು ಸಂಗ್ರಹಿಸಿ ಕೊಡಲಾಗಿದೆ. ಇದು ಇಂದಿನ ಸ್ತ್ರೀವಾದದ ನೆಲೆಯಲ್ಲಿಯೂ ನೋಡಬಹುದಾಗಿದೆ. ಅಂದಿನ ಕಾಲದಲ್ಲಿ ಒಬ್ಬ ವಯೋವೃದ್ಧ ಮಹಿಳೆಯು ತನಗೆದುರಾದ ಸಂಕಟದ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಿರುವುದಕ್ಕೆ ಈ ಕಥಾನಕವು ನಿದರ್ಶನವಾಗಿದೆ. ಆದಿಕವಿ ಪಂಪನು ಬರೆದ ವಿಕ್ರಮಾರ್ಜುನ ವಿಜಯದಲ್ಲಿ ಬರುವ ಕರ್ಣ, ಭೀಷ್ಮ, ದ್ರೋಣ, ದುರ್ಯೋಧನರ ಸಂಭಾಷಣೆಯ ಸನ್ನಿವೇಶವನ್ನು ‘ಸೂಳ್ಪಡೆಯಲಪ್ಪುದು’ ಶೀರ್ಷಿಕೆಯಲ್ಲಿ ಸಂಗ್ರಹಿಸಲಾಗಿದೆ. ಇದು ಅಂದಿನ ರಾಜನೀತಿ ಛಲ, ಪರಾಕ್ರಮ, ಸತ್ಯ, ಸ್ನೇಹ, ತ್ಯಾಗ ಮತ್ತಿತರ ಮೌಲ್ಯಗಳನ್ನು ದಿಗ್ದರ್ಶಿಸುತ್ತದೆ. ಪಂಪನ ಮತ್ತೊಂದು ಕೃತಿ ಆದಿಪುರಾಣದಲ್ಲಿನ ಭರತ ಬಾಹುಬಲಿಯರ ಸಂಭಾಷಣೆಯ ಪ್ರಸಂಗವನ್ನು ಸಂಗ್ರಹಿಸಲಾಗಿದೆ. ಸಂಪತ್ತು, ಅಧಿಕಾರ, ಪ್ರತಿಷ್ಠೆಗಿಂತ ಅಹಿಂಸೆ, ಮಾನವ ಸಂಬಂಧಗಳ ಮಹತ್ವವನ್ನು ಇದು ಸೂಚಿಸುತ್ತದೆ. ಕವಿ ರನ್ನನು ಬರೆದ ಸಾಹಸಭೀಮವಿಜಯ ಕೃತಿಯಲ್ಲಿನ ದುರ್ಯೋಧನ ವಿಲಾಪಂ ಪ್ರಸಂಗವನ್ನು ‘ಕರ್ಣಂಗಿದೇ ಕೂರ್ತೆನೋ’ ಎಂದು, ಭೀಮಸೇನಾಡಂಬರಂ ಪ್ರಸಂಗವನ್ನು ‘ಬೆಮರ್ತನುರಗಪತಾಕಂ’ ಅಧ್ಯಾಯದಡಿ ಸಂಗ್ರಹಿಸಿದೆ. ಇವೆರೆಡು ಸನ್ನಿವೇಶಗಳು ರನ್ನನ ನಾಟಕೀಯತೆ, ಸಂಭಾಷಣೆ, ಸಿಂಹಾವಲೋಕನ ಕ್ರಮ, ಕರುಣ, ರೌದ್ರ ರಸ ದರ್ಶನಕ್ಕೆ ಸಾಕ್ಷಿಯಾಗಿವೆ. ಜೊತೆಗೆ ಅವು ಅಂದಿನ ಯುಗಧರ್ಮದ ಮೌಲ್ಯಗಳನ್ನು ಸಾರುತ್ತವೆ. ದುರ್ಗಸಿಂಹನು ಬರೆದ ಕರ್ಣಾಟಕ ಪಂಚತಂತ್ರದಲ್ಲಿನ ‘ಕೋಪಾತುರನಪ್ಪನ್ನಂ ಬಳ್ದಪನೆ’ ಮತ್ತು ‘ತುಂಗಭುಜನ ಕಥೆ’ಗಳನ್ನು ಸಂಗ್ರಹಿಸಿದೆ. ಮನುಷ್ಯರಿಗೆ ಕಠಿಣ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ಜಾಗರೂಕತೆಯನ್ನು ಸಾರುತ್ತವೆ. ಕನ್ನಡ ಸಾಹಿತ್ಯದಲ್ಲಿ ಉಪಲಬ್ಧ ಮೊದಲ ರಾಮಾಯಣ ಕೃತಿಯಾಗಿರುವ ನಾಗಚಂದ್ರ ವಿರಚಿತ ಪಂಪರಾಮಾಯಣದಲ್ಲಿನ ಸೀತಾಪಹರಣ ಪ್ರಸಂಗವನ್ನು ‘ಪಾಪಕ್ಕಮ್ ಅಂಜದವರೇಗೆಯ್ಯರ್’ ಎಂಬ ಶೀರ್ಷಿಕೆಯಲ್ಲಿ ಸಂಗ್ರಹಿಸಲಾ ಗಿದೆ. ಇದು ರಾಜನೀತಿಜ್ಞ, ಶೂರ, ಬುದ್ಧಿವಂತ, ಮಹಾನ್ ತಪಸ್ವಿ, ಗಟ್ಟಿ ಮನದವನೂ ಸಹ ಚಿತ್ತ ಚಂಚಲತೆಗೆ ಒಳಗಾಗುವ ಮನೋವಿಶ್ಲೇಷಣಾತ್ಮಕ ಸಂದರ್ಭಕ್ಕೆ ಸಾಕ್ಷಿಯಾಗಿದೆ. ಹೀಗೆ ಇಡೀ ಹಳಗನ್ನಡ ಕಾವ್ಯಗಳಲ್ಲಿರುವ ಮೌಲಿಕ ಸನ್ನಿವೇಶಗಳನ್ನು ಒಂದೆಡೆಗೆ ಸೇರಿಸಿ, ಅವುಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡುವಲ್ಲಿ, ಅವರಲ್ಲಿ ಆತ್ಮವಿಶ್ವಾಸ, ಮನೋಸ್ಥೈರ್ಯ ಬೆಳೆಸುವಲ್ಲಿ, ಅವರು ನಿಜಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅನುಸರಿಸುವ ನಿಟ್ಟಿನಲ್ಲಿ ಈ ಪಠ್ಯ ಸಂಗ್ರಹವು ಪರಿಣಾಮಕಾರಿಯಾಗಿದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books