ಬಸವರಾಜ ದೇವರ ರಗಳೆ

Author : ಟಿ.ಎಸ್. ವೆಂಕಣ್ಣಯ್ಯ

Pages 151

₹ 1.00




Year of Publication: 1938
Published by: ವೆಸ್ಲಿ ಪ್ರೆಸ್ ಪಬ್ಲಿಷಿಂಗ್ ಹೌಸ್
Address: ಮೈಸೂರು

Synopsys

ಹರಿಹರ ಕವಿ ಬರೆದ ಬಸವರಾಜ ದೇವರ ರಗಳೆ-ಕೃತಿಯನ್ನು ಪ್ರೊ. ಟಿ.ಎಸ್. ವೆಂಕಣ್ಣಯ್ಯ ಸಂಪಾದಿಸಿದ್ದಾರೆ. ಇದು ದ್ವಿತೀಯ ಆವೃತ್ತಿ. ಜನನ ಮತ್ತು ಬಾಲ್ಯ, ಕಪ್ಪಡಿ ಸಂಗಮಕ್ಕೆ ಪ್ರಯಾಣ, ಸಂಗಮೇಶ್ವರ ಪೂಜೆಯ ವರ್ಣನೆ, ಸಂಗಮೇಶ್ವರನ ಆದೇಶ -ವೃಷಭರಾಜನ ಉಪದೇಶ, ಬಿಜ್ಜಳನ ಹತ್ತಿರ ಅಧಿಕಾರ ಪ್ರಾಪ್ತಿ, ಕೇದಗೆಯ ಹೂವಿನ ಕಥೆ, ಗಣಾರಾಧನೆಯ ವರ್ಣನೆ, ಭಂಡಾರ ದ್ರೋಹದ ಅಪರಾಧ ಮತ್ತು ಅದರ ಪರಿಹಾರ, ಬದನೆಕಾಯಿ ಲಿಂಗವಾದ ಕಥೆ, ಕಂಬಳಿಯ ನಾಗಿದೇವನ ಕಥೆ, ಕಿನ್ನರ ಬೊಮ್ಮಯ್ಯನ ಕಥೆ, ಲೆಂಕರಸನು ಓಲೆಯನ್ನು ಅಪಹರಿಸಿದ್ದು,-ಈ ರೀತಿಯ ಶೀರ್ಷಿಕೆಗಳಡಿ ಕೃತಿಯು ವಿಷಯ ಸಮೃದ್ಧವಾಗಿದೆ.

About the Author

ಟಿ.ಎಸ್. ವೆಂಕಣ್ಣಯ್ಯ
(01 October 1885 - 28 February 1939)

ಲೇಖಕ, ಅನುವಾದಕ ಟಿ.ಎಸ್. ವೆಂಕಣ್ಣಯ್ಯನವರು (ಜನನ:01-10-1885) ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ಮೈಸೂರಿನಲ್ಲಿ ಕನ್ನಡ, ತೆಲುಗು ಸಾಹಿತ್ಯಾಧ್ಯಯನ ಮಾಡಿ, ಮದರಾಸು ವಿಶ್ವವಿದ್ಯಾಲಯದಿಂದ 1914ರಲ್ಲಿ ಎಂ.ಎ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು, ದೊಡ್ಡಬಳ್ಳಾಪುರ ಮುಂತಾದೆಡೆ ಶಿಕ್ಷಕ ವೃತ್ತಿ. ಬಹುಭಾಷಾ ವಿಶಾರದರು ಅವರು ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಬಂಗಾಳಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ’ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಭಾಗ, ರವೀಂದ್ರರ ಪ್ರಬಂಧಗಳನ್ನಾಧರಿಸಿ ಬರೆದ ‘ಪ್ರಾಚೀನ ಸಾಹಿತ್ಯ’ ಅನುವಾದ ಕೃತಿಗಳು. ’ಹರಿಹರನ ...

READ MORE

Related Books