ಮಾಧ್ಯಮ ಮೌಢ್ಯ

Author : ಶಿವರಾಮ ಅಸುಂಡಿ

Pages 114

₹ 100.00




Year of Publication: 2013
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ, ಕಲಬುರಗಿ
Phone: 9448570985

Synopsys

ಮಾಧ್ಯಮ ಮೌಢ್ಯ ಲೇಖನಗಳ ಸಂಕನಲ. ಮಾಧ್ಯಮ ಕ್ಷೇತ್ರದ ಒಳ-ಹೊರಗುಗಳ ಕುರಿತ ಲೇಖನಗಳನ್ನೊಳಗೊಂಡಿದೆ. ಮಾಧ್ಯಮ ಮೌಢ್ಯ, ಮಾಧ್ಯಮ ತಲ್ಲಣಗಳು, ಸೆಕ್ಸ್ ಕ್ಲೂಸಿವ್, ಕಾಸಿನ ಸುದ್ದಿಗೆ ಕಡಿವಾಣ, ಪತ್ರಿಕಾ ಸ್ವಾತಂತ್ರ್ಯ ಹರಣ ಎಂಬಿತ್ಯಾದಿ ಲೇಖನಗಳು ಕೃತಿಯಲ್ಲಿವೆ. ಮೌಢ್ಯ, ಕಂದಾಚಾರಗಳ ಕುರಿತು ಜಾಗೃತಿ ಮೂಡಿಸಬೇಕಾದ ಮಾಧ್ಯಮಗಳೇ ಇಂದು ಮೌಢ್ಯಗಳನ್ನು ವೈಭವೀಕರಿಸುವ ಕಾರ್ಯ ಮಾಡುತ್ತಿವೆ. ಬೆಳಿಗ್ಗೆ ಜ್ಯೋತಿಷಿಗಳನ್ನು ಕೂಡಿಸದಿದ್ದಲ್ಲಿ ಟಿ.ಆರ್.ಪಿ. ಬರುವುದಿಲ್ಲ, ಜನ ನಮ್ಮ ವಾಹಿನಿಯನ್ನು ನೋಡೋದಿಲ್ಲ ಎನ್ನುವಷ್ಟರ ಮಟ್ಟಿಗೆ ಬೆಳಿಗ್ಗೆಯಿಂದ ಹಿಡಿದು ರಾತ್ರಿಯಾಗುವವರೆಗೂ ಒಂದಲ್ಲ ಒಂದು ರೂಪದಲ್ಲಿ ಮೌಢ್ಯತೆಯನ್ನು ಬಿತ್ತುವ ಕಾರ್ಯಗಳು ನಡೆಯುತ್ತಿವೆ. ಹಾಗೆಯೇ ಮಾಧ್ಯಮಗಳು ಹಳಿ ತಪ್ಪಲಾರಂಭಿಸಿದ್ದು, ಜನತೆಯನ್ನೂ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿಯೇ ಮಾಧ್ಯಮದ ಹೊರ-ಒಳಗುಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಇಲ್ಲಿ ನಡೆದಿದೆ.

About the Author

ಶಿವರಾಮ ಅಸುಂಡಿ

ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಶಿವರಾಮ ಅಸುಂಡಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಅಸುಂಡಿ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಆರಂಭಿಸಿ ಮಾಧ್ಯಮದೊಂದಿಗೆ ನಂಟು ಬೆಳೆಸಿಕೊಂಡರು. ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿರುವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. ಬಳ್ಳಾರಿಯ ’ಈ ನಮ್ಮ ಕನ್ನಡ ನಾಡು’ ದೈನಿಕದಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ .ಟಿ.ವಿ.ಗೆ ಸೇರಿ ಹಾವೇರಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. 2004ರಿಂದ ಕಲಬುರಗಿಯಲ್ಲಿ ಈಟಿವಿ ಪ್ರತಿನಿಧಿಯಾಗಿದ್ದಾರೆ.  ’ದು.ನಿಂ.ಬೆಳಗಲಿ ಅವರ ದೇವದಾಸಿ’ ಕಾದಂಬರಿ ಕುರಿತು ಎಂ.ಫಿಲ್. ಪದವಿ ಮಾಡಿರುವ ಅಸುಂಡಿ ಅವರು ಡಾ.ಮಲ್ಲಿಕಾ ಘಂಟಿ ಮಾರ್ಗದರ್ಶನದಲ್ಲಿ ’ದಲಿತ ...

READ MORE

Related Books