ಪು.ತಿ.ನ.

Author : ಪ್ರಭುಶಂಕರ

Pages 120

₹ 80.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಪು.ತಿ.ನ. (ಪುರೋಹಿತ ತಿರುನಾರಾಯಣ ನರಸಿಂಹಾಚಾರ್) ಕನ್ನಡ ನವೋದಯ ಕಾಲದ ಪ್ರಮುಖ ಕವಿಗಳಲ್ಲಿ ಒಬ್ಬರು. ಗೀತರೂಪಕಗಳ ಕ್ಷೇತ್ರದಲ್ಲಿನ ಅವರ ಸಾಧನೆ ಅಪೂರ್ವವಾದದ್ದು. ಅವುಗಳು ಗೇಯತೆಯ ಗುಚ್ಛವೇ ಆಗಿವೆ. ಅವರ ಪ್ರಬಂಧಗಳಲ್ಲಿ, ಕಾವ್ಯಮೀಮಾಂಸಾ ಬರಹಗಳಲ್ಲಿ ಮೌಲಿಕ ಚಿಂತನೆ ಗಳಿವೆ.ಕನ್ನಡ ಕಾವ್ಯಲೋಕಕ್ಕೆ ಪು.ತಿ.ನ. ಅವರ ಕೊಡುಗೆ ಅಪಾರವಾದದ್ದು. ಇವರ "ಹಂಸ ದಮಯಂತಿ ಮತ್ತು ಇತರ ರೂಪಕಗಳು" ಕೃತಿಗೆ 1966ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ಕನ್ನಡದ ಮತ್ತೊಬ್ಬ ಪ್ರಮುಖ ಲೇಖಕ ಪ್ರಭುಶಂಕರ ಅವರು ಈ ಪುಸ್ತಕದ ಲೇಖಕರು.

About the Author

ಪ್ರಭುಶಂಕರ
(15 February 1929)

ಬರಹಗಾರರಾದ ಪ್ರಭುಶಂಕರ ಅವರು ಜನಿಸಿದ್ದು 1929  ಫೆಬ್ರುವರಿ 15ರಂದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು.  ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು  ಅಮೆರಿಕ ಭೇಟಿಯ ಕುರಿತು ’ಅಮೆರಿಕಾದಲ್ಲಿ ನಾನು ಮತ್ತು ಶಾಂತಿ’ ಎಂಬ ಪ್ರವಾಸ ಕಥನ ರಚಿಸಿದ್ದಾರೆ. ಅವರ ಕೆಲವು ಕೃತಿಗಳು- ಕನ್ನಡದಲ್ಲಿ ಭಾವಗೀತೆ, ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ.  ...

READ MORE

Related Books