ದೇವನೂರ ಮಹಾದೇವ

Author : ಎನ್.ಪಿ. ಶಂಕರನಾರಾಯಣ ರಾವ್

Pages 124

₹ 70.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ದೇವನೂರ ಮಹಾದೇವ ದಲಿತ ಸಂವೇದನೆಯನ್ನು ರೂಪಕಗಳಲ್ಲಿ ಕಟ್ಟಿಕೊಟ್ಟ ಬಹುದೊಡ್ಡ ಲೇಖಕ, ಚಿಂತಕ. ಹೋರಾಟ ಮತ್ತು ಸಂಘಟನೆ ಅವರ ಇನ್ನೊಂದು ಕ್ಷೇತ್ರ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಅವರೂ ಒಬ್ಬರು. ತಾವು ಕಂಡ ಸಮಾಜದ ಯಥಾರ್ಥ ಚಿತ್ರವನ್ನು ಯಾವುದೇ ಕೃತಕ ಅಲಂಕರಣವಿಲ್ಲದೆ, ಅತ್ಯಂತ ಸಮರ್ಥವಾಗಿ ಕೃತಿಗಳಲ್ಲಿ ಬಿಂಬಿಸಿದವರು. ಕಲಾತ್ಮಕತೆ ತುಂಬ ಸಹಜವಾಗಿ ಅವರ ಬರಹಗಳಲ್ಲಿ ಮೈದಳೆದಿದ್ದು ಅವರು ಕನ್ನಡ ಸಾಹಿತ್ಯ ಲೋಕದ, ಅಷ್ಟೇ ಏಕೆ, ಭಾರತೀಯ ಸಾಹಿತ್ಯ ಲೋಕದ ವಿಶಿಷ್ಟ ಲೇಖಕರೆನ್ನಿಸಿಕೊಂಡಿದ್ದಾರೆ. ’ಕುಸುಮಬಾಲೆ’ ಕೃತಿಗಾಗಿ 1990 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಭಾಜನರಾಗಿರುವ ದೇವನೂರು ಮಹದೇವ ’ದ್ಯಾವನೂರು’, ’ಒಡಲಾಳ’, ’ಎದೆಗೆ ಬಿದ್ದ ಅಕ್ಷರ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ದೇವನೂರ ಮಹದೇವ ಅವರ ಬದುಕು ಮತ್ತು ಬರಹವನ್ನು ಪರಿಚಯಿಸುವ ಕೃತಿಯನ್ನು ಹಿರಿಯ ಲೇಖಕರಲ್ಲಿ ಒಬ್ಬರಾದ ಎನ್.ಪಿ. ಶಂಕರನಾರಾಯಣ ರಾವ್ ರಚಿಸಿದ್ದಾರೆ. 

About the Author

ಎನ್.ಪಿ. ಶಂಕರನಾರಾಯಣ ರಾವ್
(03 August 1928 - 28 November 2006)

.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ...

READ MORE

Related Books