ಎಂ ಎಂ ಕಲಬುರ್ಗಿ

Author : ಸಿದ್ದನಗೌಡ ಪಾಟೀಲ

Pages 112

₹ 113.00




Year of Publication: 2022
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

”ಎಂ ಎಂ ಕಲಬುರ್ಗಿ’ ಸಿದ್ದನಗೌಡ ಪಾಟೀಲ ಅವರ ಕೃತಿಯಾಗಿದೆ. ಅವರ ವೈಚಾರಿಕ ವಿಶ್ಲೇಷಣೆ ಎಷ್ಟು ಆಳವೂ, ವಿಶಾಲವೂ, ಸಮರ್ಪಕವೂ ಆಗಿದೆ ಎಂಬುದಕ್ಕೆ 'ಚಿಂತಕ-ಹಂತಕ ಪರಂಪರೆ' ಎಂಬ ಮೊದಲ ಅಧ್ಯಾಯವೇ ಸಾಕ್ಷಿಯಾಗಿದೆ. 'ಕರಿಯನ್ನು ಕನ್ನಡಿಯಲ್ಲಿ ತೋರಿಸಿದಂತೆ', ಕಲಬುರ್ಗಿ ಅವರ ಅಗಾಧ ಸಾಹಿತ್ಯದ ವೈದುಷ್ಯ ಸಾಧನೆಗಳನ್ನು ಅತ್ಯಂತ ಸಮರ್ಥವಾಗಿ, ಯಶಸ್ವಿಯಾಗಿ ತೆರೆದು ತೋರಿದ್ದಾರೆ. ನಾನೇ ಈ ಗ್ರಂಥವನ್ನು ರಚಿಸಿದ್ದರೂ, ಇಷ್ಟು ಪರಿಣಾಮಕಾರಿಯಾಗಿ ಅರ್ಥಪೂರ್ಣವಾಗಿ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮಾಲೆಯಲ್ಲಿನ ಉತ್ಕೃಷ್ಟ ಕೃತಿಗಳಲ್ಲಿ ಇದು ಒಂದಾಗಿ ನಿಲ್ಲುತ್ತದೆಂದು ನಂಬಿದ್ದೇನೆ. ಇಂಥ ಕೃತಿ ರಚನೆಯಿಂದ ಈ ಮಾಲೆಯ ಗೌರವವನ್ನು ಹೆಚ್ಚಿಸಿರುವುದಕ್ಕಾಗಿ ಶ್ರೀ ಪಾಟೀಲರನ್ನು ಹೃತೂರ್ವಕವಾಗಿ ಅಭಿನಂದಿಸಬಯಸುತ್ತೇನೆ. ಎಂದು ಪುಸ್ತಕದ ಮುನ್ನುಡಿಯಲ್ಲಿ ಪ್ರಧಾನ್‌ ಗುರುದತ್ತ್‌ ತಿಳಿಸಿದ್ದಾರೆ.

About the Author

ಸಿದ್ದನಗೌಡ ಪಾಟೀಲ
(05 October 1959)

ಹೊಸತು ನಿಯತಕಾಲಿಕೆ ಸಂಪಾದಕ, ಲೇಖಕ, ಪ್ರಗತಿಪರ ಚಿಂತಕರಾದ ಸಿದ್ದನಗೌಡ ಪಾಟೀಲರು ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕರಾಗಿದ್ದರು. ನಾನು ಬಸ್ಯಾ ಅಂತ, ಸಾಕ್ಷಿಗಳು ಮಾರಾಟಕ್ಕಿವೆ ಇವರ ಕೃತಿಗಳು. ...

READ MORE

Related Books