ಚಂದ್ರಶೇಖರ ಕಂಬಾರ

Author : ಬಸವರಾಜ ಮಲಶೆಟ್ಟಿ

Pages 124

₹ 60.00




Year of Publication: 2006
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ತಂದಿತ್ತವರು ಪ್ರಸಿದ್ಧ ಸಾಹಿತಿ ಚಂದ್ರಶೇಖರ ಕಂಬಾರ. ನವ್ಯಕಾಲ ಘಟ್ಟದಲ್ಲಿಯೇ ಬದುಕಿದ್ದರೂ ತಮ್ಮ ವಿಭಿನ್ನ ಬರವಣಿಗೆಯಿಂದಾಗಿ ಅನನ್ಯ ಪಥದಲ್ಲಿ ಹೆಜ್ಜೆ ಇರಿಸಿದವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿದ್ದ ಅವರ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಾಧನೆಗಳು ಕನ್ನಡನಾಡಿನ ಹೆಮ್ಮೆ. ಅವರ ಕೃತಿಗಳಲ್ಲಿ ಬರುವ ’ಶಿವಾಪುರ’ ಎಂಬ ಕಾಲ್ಪನಿಕ ಊರನ್ನು ಯಾರು ತಾನೇ ಮರೆಯಲು ಸಾಧ್ಯ? ಕಂಬಾರರ ಮತ್ತೊಂದು ಆಸಕ್ತಿಯ ಕ್ಷೇತ್ರ ಸಿನಿಮಾ.’ಸಂಗ್ಯಾ ಬಾಳ್ಯಾ’, ’ಕಾಡು ಕುದುರೆ’ಯಂತಹ ಸಿನಿಮಾಗಳು ಅವರ ಸಿನಿ ಸಾಹಸಕ್ಕೆ ಸಾಕ್ಷಿಯಾಗಿವೆ. ಅವರ  ’ಸಿರಿ ಸಂಪಿಗೆ’ ನಾಟಕಕ್ಕೆ 1991ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ’ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಲಿಕೆಯಡಿ ಲೇಖಕ ಬಸವರಾಜ ಮಲಶೆಟ್ಟಿ ಅವರು ಕಂಬಾರರನ್ನು ಪರಿಚಯಿಸಿದ್ದಾರೆ. 

About the Author

ಬಸವರಾಜ ಮಲಶೆಟ್ಟಿ
(10 August 1949 - 29 June 2014)

ಜಾನಪದ ತಜ್ಞರಾಗಿದ್ದ ಡಾ. ಬಸವರಾಜ ಮಲಶೆಟ್ಟಿ ಅವರು ಉತ್ತರ ಕರ್ನಾಟಕದ ಬಯಲಾಟಕ್ಕೆ ವಿಶಿಷ್ಟ ಸ್ಪರ್ಶ ನೀಡಿದವರು. ರಂಗಭೂಮಿ, ಸಂಗೀತ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ್ದ ಮಲಶೆಟ್ಟಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿಯವರು. ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಅವರು ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ಬಸವರಾಜ ಮಲಶೆಟ್ಟಿಯವರು ಜನಿಸಿದ್ದ 1949ರ ಆಗಸ್ಟ್‌ 10ರಂದು ತಂದೆ ಮರಿಕಲ್ಲಪ್ಪ, ತಾಯಿ ನಾಗೇಂದ್ರವ್ವ. ಬಾಲ್ಯದ ದಿನಗಳಲ್ಲಿಯೇ ರಂಗಭೂಮಿಯ ಒಡನಾಟ ಆರಂಭವಾಯಿತು. ತಂದೆಯ ಜೊತೆಯಲ್ಲಿ ಆಟಕ್ಕೆ ಹೋಗುತ್ತಿದ್ದ ಬಸವರಾಜ ಅವರು ಬಯಲಾಟದಲ್ಲಿ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ...

READ MORE

Related Books