ಅರ್ಧ ಕಟಿ ಚಕ್ರಾಸನ ಮತ್ತು ಉತ್ಥಿತ ಪದ್ಮಾಸನ

Date: 11-06-2024

Location: ಬೆಂಗಳೂರು


"ಅರ್ಧ ಕಟಿ ಚಕ್ರಾಸನವು ಥೈರಾಯಿಡ್‌ ಸಮಸ್ಯೆಯಿಂದ ಬಳಲುವವರಿಗೆ ಮತ್ತು ಪದೇ ಪದೆ ಕುತ್ತಿಗೆ ನೋವಿಗೆ ಒಳಗಾಗುವವರಿಗೆ ಇದು ಉತ್ತಮವಾದ ಆಸನವಾಗಿದೆ. `ಉತ್ಥಿತ ಪದ್ಮಾಸನ'ಕ್ಕೆ ಹಲವು ಹೆಸರುಗಳಿವೆ. ಇದನ್ನು ತೋಲಾಸನವೆಂದೂ, ಮತ್ತು ಲೋಲಾಸನವೆಂದೂ ಕರೆಯುತ್ತಾರೆ," ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಕುರಿತು ವಿವರಿಸಿದ್ದಾರೆ.

ಅರ್ಧ ಕಟಿ ಚಕ್ರಾಸನ

ಅರ್ಥ: ಕಟಿ ಎಂದರೆ ಪಕ್ಕೆಲುಬು ಮತ್ತು ಸೊಂಟದ ಮಧ್ಯದ ಭಾಗ.

ಅರ್ಧ ಚಕ್ರ ಎಂದರೆ : ಚಕ್ರದ ಅರ್ಧ ಭಾಗ. ಕಟಿಯ ಭಾಗದಲ್ಲಿ ಅರ್ಧ
ಚಕ್ರಾಕೃತಿಯಲ್ಲಿ ಬಾಗುವುದಕ್ಕೆ ಅರ್ಧ
ಕಟೀಚಕ್ರಾಸನ ಎಂದು ಕರೆಯುತ್ತಾರೆ.

ಅರ್ಧ ಕಟಿ ಚಕ್ರಾಸನ ಮಾಡುವ ವಿಧಾನ:
ಮೊದಲಿಗೆ ಸಮಸ್ಥಿತಿಯಲ್ಲಿ ನಿಂತುಕೊಳ್ಳಿ. ನಂತರ ಬಲಗೈಯನ್ನು ಮೇಲಕ್ಕೆ ತೆಗೆದುಕೊಳ್ಳಿ. ಪಕ್ಕೆಲುಬಿನ ಪಕ್ಕದಲ್ಲಿ ಭುಜದ ನೇರಕ್ಕೆ ಅಂಗೈಯನ್ನು ಮೇಲ್ಮುಖ ಮಾಡುತ್ತ ಉಸಿರನ್ನು ಹೊರಗೆ ಹಾಕಿ. ಈಗ ಉಸಿರನ್ನು ತೆಗೆದುಕೊಳ್ಳುತ್ತಾ ಬಲಗೈಯನ್ನು ಸಂಪೂರ್ಣ ಮೇಲಕ್ಕೆ ತೆಗೆದುಕೊಳ್ಳಿ. ಭುಜದ ನೇರಕ್ಕೆ ಒಮ್ಮೆ ಉಸಿರನ್ನು ಹೊರ ಹಾಕಿ ಮತ್ತೊಮ್ಮೆ ಉಸಿರನ್ನು ತೆಗೆದುಕೊಳ್ಳುತ್ತ ಬಲಗೈಯನ್ನು ಸಂಪೂರ್ಣ ಮೇಲಕ್ಕೆ ಹಿಗ್ಗಿಸಬೇಕು. ಈಗ ಉಸಿರನ್ನು ಹೊರ ಹಾಕುತ್ತ ಎಡಭಾಗಕ್ಕೆ ಬಾಗಿ. ಎಡ ಪಕ್ಕೆಲುಬಿನ ಭಾಗ ಕುಸಿಯದ ಹಾಗೆ ಬಾಗಬೇಕು. ಬಲ ಪಕ್ಕೆಲುಬಿನ ಭಾಗವನ್ನು ಹಿಗ್ಗಿಸಿ. ಬಲ ಹಿಮ್ಮಡಿಯನ್ನು ನೆಲಕ್ಕೆ ಒತ್ತಿ. ನಿಮ್ಮ ದೃಷ್ಟಿ ಬಲ ರಟ್ಟೆಯಿಂದ ಮೇಲ್ಮುಖವಾಗಿ ಆಕಾಶದ ಕಡೆಗೆ ಇರಬೇಕು ಹೊಟ್ಟೆಯನ್ನು ಒಳಗೆ ಎಳೆದುಕೊಳ್ಳುತ್ತಾ
ಸೊಂಟವನ್ನು ಮುಂದಕ್ಕೆ ತಳ್ಳಿ. ಎರಡೂ ಭುಜಗಳು ಒಂದೇ ನೇರದಲ್ಲಿರಬೇಕು
( ಚಿತ್ರದಲ್ಲಿರುವಂತೆ) ಈ ಸ್ಥಿತಿಯಲ್ಲಿ ಉಸಿರಾಟ ಸಹಜವಾಗಿರಬೇಕು.

ಅರ್ಧಕಟಿ ಚಕ್ರಾಸನ ಪ್ರಯೋಜನಗಳು:
1.ಈ ಆಸನವು ಪಕ್ಕೆಲುಬುಗಳಲ್ಲಿರುವ ಕೊಬ್ಬುವನ್ನು ಕರಗಿಸುತ್ತದೆ.
2. ಈ ಆಸನವು ಪಿತ್ತಜನಕಾಂಗ ಮತ್ತು ಪಿತ್ತಕೋಶದ ಸ್ಪ್ಲೀನ್‌ ಉತ್ತೇಜನಗೊಳ್ಳುವುದು.
3. ಈ ಆಸನವು ಥೈರಾಯಿಡ್‌ ಸಮಸ್ಯೆಯಿಂದ ಬಳಲುವವರಿಗೆ ಮತ್ತು ಪದೇ ಪದೆ ಕುತ್ತಿಗೆ ನೋವಿಗೆ ಒಳಗಾಗುವವರಿಗೆ ಇದು ಉತ್ತಮವಾದ ಆಸನವಾಗಿದೆ.
4. ⁠ಭುಜಗಳು ಮತ್ತು ಕೈಗಳು ಬಲಿಷ್ಠವಾಗುತ್ತವೆ.

 

 

 

 

 

 

 

 

 

ಉತ್ಥಿತ ಪದ್ಮಾಸನ

ಉತ್ಥಿತ ಪದ್ಮಾಸನಕ್ಕೆ ಹಲವು ಹೆಸರುಗಳಿವೆ. ಇದನ್ನು ತೋಲಾಸನವೆಂದೂ, ಮತ್ತು ಲೋಲಾಸನವೆಂದೂ ಕರೆಯುತ್ತಾರೆ. ಪದ್ಮಾಸನ ಸಹಿತ ನೆಲದಿಂದ ಮೇಲಕ್ಕೆ ಇಡೀ ಶರೀರವನ್ನು ಎತ್ತುವುದಕ್ಕೆ ಉತ್ಥಿತ ಪದ್ಮಾಸನವೆಂದೂ, ಎರಡೂ ಕೈಗಳು ಇಡೀ ಶರೀರದ ಭಾರವನ್ನು ಹೊರುವುದರಿಂದ ತೋಲಾಸನವೆಂದು ಕರೆಯಲಾಗುತ್ತದೆ.

ಉತ್ಥಿತ ಪದ್ಮಾಸನ ಮಾಡುವ ವಿಧಾನ:
ಉತ್ಥಿತ ಪದ್ಮಾಸನಕ್ಕೆ ಮೊದಲು ಯೋಗಾಭ್ಯಾಸಿಯು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಎರಡೂ ತೊಡೆಗಳ ಹಿಂದೆ ಅಂಗೈಗಳನ್ನು ನೆಲದಲ್ಲಿ ಭದ್ರವಾಗಿ ಊರಬೇಕು. ಅನಂತರ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪದ್ಮಾಸನದ ಸ್ಥಿತಿಯಲ್ಲೇ ಚಿತ್ರದಲ್ಲಿ ತೋರಿಸಿರುವಂತೆ ಶರೀರವನ್ನು ಮೇಲಕ್ಕೆತ್ತಬೇಕು. ಯಾವುದೇ ಸಂದರ್ಭದಲ್ಲೂ ಕೈಗಳನ್ನು ಬಗ್ಗಿಸಬಾರದು. ಈ ಬಗ್ಗೆ ವಿಶೇಷ ಗಮನ ಹರಿಸಬೇಕು. ಶರೀರದ ಭಾರದಿಂದ ಕೊಂಚ ಕೈಗಳು ಬಗ್ಗುವುದು ಸಹಜ. ಈ ಸ್ಥಿತಿಯಲ್ಲಿ ಮೊದಲು ಸಮತೋಲನ ಪಡೆಯನಂತರ ಉಯ್ಯಾಲೆಯಂತೆ ಶರೀರವನ್ನು ನಿಧಾನವಾಗಿ ಹಿಂದಕ್ಕೂ ಮುಂದಕ್ಕೂ ತೂಗಾಡಿಸಬಹುದು. ಆಯ ತಪ್ಪಿ ಮುಗ್ಗರಿಸುವ ಸಂಭವ ಇದೆ. 1ರಿಂದ 3ನಿಮಿಷಗಳ ವರೆಗೆ ಈ ಸ್ಥಿತಿಯಲ್ಲಿ ಇದ್ದು ಕಾಲುಗಳನ್ನು ಬದಲಿಸಬಹುದು. ಈ ಆಸನವನ್ನು ಮೂರು ನಾಲ್ಕು ಬಾರಿ ಮಾಡುವುದು ಉತ್ತಮ, ಉಸಿರಾಟದ ಕ್ರಿಯೆ ಸಹಜವಾಗಿರಬೇಕು ನಂತರ ಸಮಸ್ಥಿತಿಗೆ ಬನ್ನಿ.

ಉತ್ಥಿತ ಪದ್ಮಾಸನ ಪ್ರಯೋಜನಗಳು:
1) ಈ ಆಸನವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
2) ಸ್ನಾಯುಗಳ ಮೇಲಿನ ಒತ್ತಡವು ಕಡಿಮೆಯಾಗಿ ರಕ್ತದೊತ್ತಡವನ್ನು ಸಹಜಸ್ಥಿತಿಯಲ್ಲಿಡುತ್ತದೆ.
3) ಸ್ನಾಯುಗಳು ಬಲಶಾಲಿಯಾಗುತ್ತವೆ.

 

 

 

 

 

 

 

 

 

 

- ಚೈತ್ರಾ ಹಂಪಿನಕಟ್ಟಿ.

ಈ ಅಂಕಣದ ಹಿಂದಿನ ಬರಹಗಳು:
ಗರುಡಾಸನ ಮತ್ತು ಬದ್ಧಕೋನಾಸನ
ತಾಡಾಸನ ಮತ್ತು ಸಿದ್ಧಾಸನ

ಪ್ರಸಾರಿತ ಪದೋತ್ತಸನ ಮತ್ತು ಅರ್ಧ ಚಂದ್ರಾಸನ
ಪರಿಘಾಸನ ಮತ್ತು ಅರ್ಧ ಚಕ್ರಾಸನ
ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ
ಜಾನು ಶೀರ್ಷಾಸನ ಮತ್ತು ಉತ್ಕಟಾಸನ
ಚಕ್ರಾಸನ ಮತ್ತು ಭುಜಂಗಾಸನ
ಪಾರ್ಶ್ವೋತ್ತನಾಸನ, ಪರಿವೃತ್ತ ಜಾನುಶೀರ್ಷಾಸನ
ನಾವಾಸನ ಹಾಗೂ ಪರಿವೃತ್ತ ಉತ್ಕಟಾಸನ

ಅರ್ಧಮತ್ಸ್ಯೇಂದ್ರಾಸನ ಮತ್ತು ವೀರಾಸನ
ಅಧೋಮುಖ ಶ್ವಾನಾಸನ, ಸುಪ್ತ ವಜ್ರಾಸನ
ದಂಡಿಯಾಮ ಜಾನುಶಿರಾಸನ
ಪಾರ್ಶ್ವಕೋನಾಸನ ಮತ್ತು ವೃಕ್ಷಾಸನ
ಪಾದಹಸ್ತಾಸನ ಮತ್ತು ಶಶಾಂಕಾಸನ
ವಕ್ರಾಸನ ಮತ್ತು ಸೇತುಬಂಧಾಸನ
ಗೋಮುಖಾಸನ ಹಾಗೂ ವೀರಭದ್ರಾಸನ
ಯೋಗದ ವಿವಿಧ ಭಂಗಿಗಳು
ಯೋಗದ ವಿವಿಧ ‘ಆಸನಗಳು’
ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ

MORE NEWS

ನಾನೊಂದು ಕನಸ ಕಂಡೆ

19-06-2024 ಬೆಂಗಳೂರು

"ನನಗೆ ನೆನ್ನೆ ಬಿದ್ದ ಕನಸೊಂದನ್ನು ನಿಮಗೆ ಹೇಳಲೇಬೇಕು. ಅದು ಕನಸೋ ಎಚ್ಚರವೋ ಅಂತ ಇನ್ನೂ ಬಗೆಹರಿದೆ ಇಲ್ಲ! ನೆನ್ನೆ...

ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ

16-06-2024 ಬೆಂಗಳೂರು

"ಇನ್ನೇನು ಆರು ವರುಷ ಕಳೆದರೆ ಅವರಿಗೆ ನೂರು ತುಂಬುತ್ತವೆ. ಅವರೀಗ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಂ.ಎಲ್...

ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ

15-06-2024 ಬೆಂಗಳೂರು

"ಸಾಮಾನ್ಯರ ಜೊತೆಯಲ್ಲಿಯೆ ಇರುತ್ತಿದ್ದ ಸೂಪಿಗಳಿಗೆ ಸಾಮಾನ್ಯರಿಗೆ ತಲುಪುವುದಕ್ಕೆ ಪರ‍್ಶಿಯನ್ ಒಂದು ಮಹತ್ವದ ದ...