ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

Date: 09-04-2024

Location: ಬೆಂಗಳೂರು


"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮುಕ್ತಾಸನ ಶರೀರದಲ್ಲಿರುವ ಗಾಳಿಯನ್ನು ಹೊರಹಾಕಲು ಉತ್ತಮವಾದ ಆಸನವಾಗಿದೆ," ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಕುರಿತು ವಿವರಿಸಿದ್ದಾರೆ.

ಉಪವಿಷ್ಠಕೋನಾಸನ

ಉಪವಿಷ್ಟಕೋನಾಸನ ಯೋಗಾಸನದ ಒಂದು ರೂಪ.

ಉಪವಿಷ್ಠಕೋನಾಸನ ಮಾಡುವ ವಿಧಾನ:
ಮೊದಲು ದಂಡಾಸನದಲ್ಲಿ ಕುಳಿತುಕೊಳ್ಳಬೇಕು ಚಿತ್ರದಲ್ಲಿರುವಂತೆ, ನಂತರ ಧೀರ್ಘವಾಗಿ ಉಸಿರನ್ನು ತೆಗೆದುಕೊಂಡು ಎರಡು ಕೈಗಳನ್ನು ಮೇಲಕ್ಕೆ ಎತ್ತಿ, ಕಾಲಿನ ತುದಿಯನ್ನು ಹಿಡಿದುಕೊಂಡು ಉಸಿರನ್ನು ಖಾಲಿ ಮಾಡುತ್ತಾ ನಿಧಾನವಾಗಿ ಮುಂದಕ್ಕೆ ಬಾಗಬೇಕು, ಎದೆ ಹೊಟ್ಟೆ, ನೆಲಕ್ಕೆ ತಾಗಿಸಬೇಕು ಉಸಿರಾಟದ ಕ್ರಿಯೆ ಸಹಜವಾಗಿರಬೇಕು ಈ ಆಸನದಲ್ಲಿ ೨೦ ಸೆಕೆಂಡ್ಗಳ ಕಾಲ ಇದ್ದು ನಂತರ ದಂಡಾಸನದ ಸ್ಥಿತಿಗೆ ಬರಬೇಕು.

ಉಪವಿಷ್ಠಕೋನಾಸನದ ಪ್ರಯೋಜನಗಳು:
1) ಉಪವಿಷ್ಟಕೋನಾಸನವು ಬೆನ್ನು ಹಾಗೂ ಹೆಜ್ಜೆಗಳ ಸ್ಥಿರತೆಯನ್ನು ಬಲಗೊಳಿಸುವುದು.
2) ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ.
3) ನರವ್ಯೂಹವನ್ನು ಶುದ್ಧಿಗೊಳಿಸುತ್ತದೆ.
4) ದೇಹವನ್ನು ಲಾಭಕರವಾಗಿ ರಚನಾತ್ಮಕವಾಗಿ ಪುನಃ ಸ್ಥಿತಿಗೆ ತರುತ್ತದೆ. ಇದು ಹೃದಯವನ್ನು ಬಲಗೊಳಿಸುತ್ತದೆ.
ರಕ್ತ ಚಲನೆಯನ್ನು ಸುಧಾರಿಸುತ್ತದೆ.
5) ನರಮಂಡಲವನ್ನು ನಿಯಂತ್ರಿಸುವುದರಲ್ಲಿ ಸಹಾಯ ಮಾಡುತ್ತದೆ.

 

 

 

 

 

 

 

 

 

 

 

 

 

 

 

 

 

ಪವನಮುಕ್ತಾಸನ

ಪವನ ಮುಕ್ತಾಸನವನ್ನು ಗಾಳಿ ನಿವಾರಕ ಭಂಗಿ ಎಂದೂ ಕರೆಯುತ್ತಾರೆ, ಇದು ಹೊಟ್ಟೆಯೊಳಗಿನ ಗಾಳಿಯನ್ನು ಬಿಡುಗಡೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಪವನಮುಕ್ತಾಸನ ಮಾಡುವ ವಿಧಾನ:
ಮೊದಲು ಮ್ಯಾಟ್ ಕುಳಿತು ಬೆನ್ನಿನ ಮೇಲೆ ಮಲಗಬೇಕು ನಂತರ ನಿಮ್ಮ ಮೊಣಕಾಲುನ್ನು ಬಗ್ಗಿಸಿ ಮತ್ತು ಅದನ್ನು ನಿಮ್ಮ ಎದೆಯ ಕಡೆಗೆ ತನ್ನಿ, ಇನ್ನೊಂದು ಕಾಲು ನೇರವಾಗಿರಬೇಕು. ನಂತರ ಎರಡು ಕೈಗಳಿಂದ ಸಹಾಯದಿಂದ ಮೊಣಕಾಲನ್ನು ಇಂಟರ್ಲಾಕ್ ಮಾಡಿ
ಉಸಿರನ್ನು ಹೊರಗೆ ಹಾಕಿ ಮೊಣಕಾಲು ಗದ್ದಕ್ಕೆ ತಾಗಿಸಬೇಕು ಆಗ ಸಹಜವಾದ ಉಸಿರಾಟ ಮಾಡಬೇಕು, 20 ಸೆಕೆಂಡ್ ಗಳ ಕಾಲ ಇದ್ದು ನಂತರ ಮೊದಲಿನ ಸ್ಥಿತಿಗೆ ಬನ್ನಿ.

ಪವನಮುಕ್ತಾಸನ ಪ್ರಯೋಜನಗಳು:
1) ಈ ಆಸನವು ಶರೀರದಲ್ಲಿರುವ ಗಾಳಿಯನ್ನು ಹೊರಹಾಕಲು ಉತ್ತಮ ಆಸನವಿದು.
2) ವಾತ ಪ್ರಕೃತಿಯವರಿಗೆ ಬರುವ ಸಂಧಿವಾತ ದೂರ ಆಗುವುದು.
3) ಗ್ಯಾಸ್ಟ್ರಿಕ್‌ನಿಂದ ಬಳಲುತ್ತಿರುವವರಿಗೆ ಉತ್ತಮ ಆಸನವಿದು.
4) ಕಿಬ್ಬೊಟ್ಟೆಯಲ್ಲಿನ ಭಾಗಗಳು ಒತ್ತಲ್ಪಟ್ಟು ಹುರುಪು ಪಡೆಯುತ್ತವೆ.

- ಚೈತ್ರಾ ಹಂಪಿನಕಟ್ಟಿ

ಈ ಅಂಕಣದ ಹಿಂದಿನ ಬರಹಗಳು:
ಜಾನು ಶೀರ್ಷಾಸನ ಮತ್ತು ಉತ್ಕಟಾಸನ
ಚಕ್ರಾಸನ ಮತ್ತು ಭುಜಂಗಾಸನ
ಪಾರ್ಶ್ವೋತ್ತನಾಸನ, ಪರಿವೃತ್ತ ಜಾನುಶೀರ್ಷಾಸನ
ನಾವಾಸನ ಹಾಗೂ ಪರಿವೃತ್ತ ಉತ್ಕಟಾಸನ

ಅರ್ಧಮತ್ಸ್ಯೇಂದ್ರಾಸನ ಮತ್ತು ವೀರಾಸನ
ಅಧೋಮುಖ ಶ್ವಾನಾಸನ, ಸುಪ್ತ ವಜ್ರಾಸನ
ದಂಡಿಯಾಮ ಜಾನುಶಿರಾಸನ
ಪಾರ್ಶ್ವಕೋನಾಸನ ಮತ್ತು ವೃಕ್ಷಾಸನ
ಪಾದಹಸ್ತಾಸನ ಮತ್ತು ಶಶಾಂಕಾಸನ
ವಕ್ರಾಸನ ಮತ್ತು ಸೇತುಬಂಧಾಸನ
ಗೋಮುಖಾಸನ ಹಾಗೂ ವೀರಭದ್ರಾಸನ
ಯೋಗದ ವಿವಿಧ ಭಂಗಿಗಳು
ಯೋಗದ ವಿವಿಧ ‘ಆಸನಗಳು’
ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...