ಪರಿಘಾಸನ ಮತ್ತು ಅರ್ಧ ಚಕ್ರಾಸನ 

Date: 16-04-2024

Location: ಬೆಂಗಳೂರು


"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್ರಾಸನ’ ಆಸನ ಮಾಡುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ," ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಕುರಿತು ವಿವರಿಸಿದ್ದಾರೆ.

ಪರಿಘಾಸನ

ಪರಿಘ ಎಂದರೆ : ಅಗಳಿ ಎಂದರ್ಥ.
(ಅಂದರೆ ಮನೆಯ ಬಾಗಿಲನ್ನು ಮುಚ್ಚಲು ಉಪಯೋಗಿಸುವ ಅಡ್ಡ ಸಲಾಕೆ ಈ ಆಸನವು ಅಡ್ಡ ಸಲಾಕೆಯ ಭಂಗಿಗೆ ಹೋಲುವುದರಿಂದ ಇದಕ್ಕೆ ಪರಿಘಾಸನ ಎಂದು ಕರೆಯುತ್ತಾರೆ.)

ಪರಿಘಾಸನ ಮಾಡುವ ವಿಧಾನ:
ಮೊದಲು ವಜ್ರಾಸನದಲ್ಲಿ ಕುಳಿತು ಮಂಡಿಯ ಮೇಲೆ ನಿಂತುಕೊಳ್ಳಿ, ನಂತರ ಬಲಗಾಲನ್ನು ಬಲಕ್ಕೆ ಚಾಚಿ. ಬಲಗೈಯಿಂದ ಬಲಪಾದದ ಒಳ ತುದಿಯನ್ನು ಎಡಗೈಯಿಂದ ಬಲ ಪಾದದ ಹೊರ ತುದಿಯಿಂದ ಹಿಡಿಯಿರಿ. ಬಲ ಭುಜ ಮತ್ತು ಬಲ ಪಕ್ಕೆಲುಬನ್ನು ಮುಂದೆ ತಳ್ಳಿ. ಈ ಸಮಯದಲ್ಲಿ ಎಡ ಭುಜ ಮತ್ತು ಎಡ ಪಕ್ಕೆಲುಬನ್ನು ಹಿಂದೆ ತಳ್ಳಬೇಕು ಮತ್ತು ದೃಷ್ಟಿ ಮೇಲ್ಮುಖವಾಗಿರಬೇಕು. ಉಸಿರಾಟದ ಕ್ರಿಯೆ ಸಹಜವಾಗಿರಬೇಕು ಇದೇ ರೀತಿ ಮತ್ತೊಂದು ಕಡೆ ಆಸನ ಮಾಡಿ.

ಪರಿಘಾಸನದ ಪ್ರಯೋಜನಗಳು:
1) ಈ ಆಸನ ಮಾಡುವುದರಿಂದ ಪಕ್ಕೆಲುಬುಗಳ ಕೊಬ್ಬಿನಂಶ ಕರಗುವುದು.
2) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವವು.
3) ಕಾಲುಗಳು ಚೈತನ್ಯ ಪಡೆಯುತ್ತವೆ.
4) ಮಂಡಿ ನೋವು ಇರುವವರು ಈ ಆಸನವನ್ನು ಮಾಡಬಾರದು.

 

 

 

 

 

 

 

 

 

 

ಅರ್ಧ ಚಕ್ರಾಸನ

ಅರ್ಧಚಕ್ರಾಸನ ಎಂದರೆ ಚಕ್ರದ ಅರ್ಧ ಭಾಗ. ಕಟಿಯ ಭಾಗದಲ್ಲಿ ಅರ್ಥ ಚಕ್ರಾಕೃತಿಯಲ್ಲಿ ಬಾಗುವುದಕ್ಕೆ ಅರ್ಥ ಕಟೀಚಕ್ರಾಸನ ಎಂದು ಕರೆಯುತ್ತಾರೆ.

ಅರ್ಧ ಚಕ್ರಾಸನ ಮಾಡುವ ವಿಧಾನ :
ಮೊದಲು ತಾಡಾಸನದಲ್ಲಿ ನಿಂತುಕೊಳ್ಳಬೇಕು (ಸಮಸ್ಥಿತಿಯಲ್ಲಿ)
ನಂತರ ಎರಡು ಕಾಲುಗಳು ಭುಜಕ್ಕೆ ಸಮಾಂತರವಾಗಿ ಅಗಲವಾಗಿರಬೇಕು, ಎರಡು ಕೈಗಳು ಸೊಂಟದ ಭಾಗದಲ್ಲಿ ಇಡಬೇಕು ನಂತರ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಉಸಿರನ್ನು ಖಾಲಿ ಮಾಡುತ್ತಾ ಹಿಂದಕ್ಕೆ ಬಾಗಬೇಕು ಚಿತ್ರದಲ್ಲಿರುವಂತೆ ಮೊಣಕಾಲುಗಳು ನೇರವಾಗಿರಬೇಕು ದೃಷ್ಟಿ ನೇರವಾಗಿರಬೇಕು ಉಸಿರಾಟದ ಕ್ರಿಯೆ ಸಹಜವಾಗಿರಬೇಕು ೨೦ ಸೆಂಕೆಡ್ಗಳ ಕಾಲ ಇದ್ದು ನಂತರ ತಾಡಾಸನ ಸ್ಥಿತಿಗೆ ಬರಬೇಕು.

ಅರ್ಧಚಕ್ರಾಸದ ಪ್ರಯೋಜನಗಳು:
1) ಈ ಆಸನವು ಬೆನ್ನುಮೂಳೆಯ ನಮ್ಯತೆಯನ್ನು ಸುಧಾರಿಸುತ್ತದೆ.
2) ರಕ್ತದ ಸಕ್ಕರೆಯ ಮಟ್ಟವನ್ನು ಕಾಪಾಡುತ್ತದೆ.
3) ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
4) ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

 

 

 

 

 

 

 

 

 

 

- ಚೈತ್ರಾ ಹಂಪಿನಕಟ್ಟಿ.

ಈ ಅಂಕಣದ ಹಿಂದಿನ ಬರಹಗಳು:
ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ
ಜಾನು ಶೀರ್ಷಾಸನ ಮತ್ತು ಉತ್ಕಟಾಸನ
ಚಕ್ರಾಸನ ಮತ್ತು ಭುಜಂಗಾಸನ
ಪಾರ್ಶ್ವೋತ್ತನಾಸನ, ಪರಿವೃತ್ತ ಜಾನುಶೀರ್ಷಾಸನ
ನಾವಾಸನ ಹಾಗೂ ಪರಿವೃತ್ತ ಉತ್ಕಟಾಸನ

ಅರ್ಧಮತ್ಸ್ಯೇಂದ್ರಾಸನ ಮತ್ತು ವೀರಾಸನ
ಅಧೋಮುಖ ಶ್ವಾನಾಸನ, ಸುಪ್ತ ವಜ್ರಾಸನ
ದಂಡಿಯಾಮ ಜಾನುಶಿರಾಸನ
ಪಾರ್ಶ್ವಕೋನಾಸನ ಮತ್ತು ವೃಕ್ಷಾಸನ
ಪಾದಹಸ್ತಾಸನ ಮತ್ತು ಶಶಾಂಕಾಸನ
ವಕ್ರಾಸನ ಮತ್ತು ಸೇತುಬಂಧಾಸನ
ಗೋಮುಖಾಸನ ಹಾಗೂ ವೀರಭದ್ರಾಸನ
ಯೋಗದ ವಿವಿಧ ಭಂಗಿಗಳು
ಯೋಗದ ವಿವಿಧ ‘ಆಸನಗಳು’
ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...