ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ಹೋರಾಟದ ಹಾಡುಗಳು. ದಲಿತ ಚಳವಳಿ ಸಂದರ್ಭದಲ್ಲಿ ಈ ಹಾಡುಗಳು ಮೂಡಿಬಂದಿವೆ. ಇಲ್ಲಿ ಲಯವಿದೆ. ರಾಗವಿದೆ. ನೋವಿದೆ. ಸಾವಿರಾರು ವರ್ಷಗಳ ನೋವಿನ ಇತಿಹಾಸವಿದೆ. ಹಾಡುಗಳ ಆಕ್ರೋಶಕ್ಕೆ ಸಾಮಾಜಿಕ ಸಮರ್ಥನೆ ಇದೆ. ಅರಣ್ಯರೋದನವಾಗಿರುವ ಅಮಾಯಕರ ಕೂಗನ್ನು ಜಾಗೃತಿಗೆ, ಸಂಘಟನೆಗೆ ಬಳಸಿಕೊಳ್ಳಲು ಒಂದು ಕ್ರಮಬದ್ಧತೆಯನ್ನು ಅಕ್ಷರ ರೂಪದಲ್ಲಿ ಕೊಟ್ಟಿದ್ದರ ಫಲವಾಗಿ ಈ ಹೋರಾಟದ ಹಾಡುಗಳು ಮೂಡಿ ಬಂದಿವೆ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ. ಕೃತಿಗೆ ಬೆನ್ನುಡಿ ಬರೆದ ಡಾ. ಎಂ. ಅಕಬರ ಅಲಿ ಅವರು ‘ದಲಿತ -ಬಂಡಾಯದ ಮನೋಧರ್ಮವು ತನ್ನ ವಿಶಿಷ್ಟ ಧ್ವನಿ ಹಾಗೂ ವಿಲಕ್ಷಣ ಬನಿಯಿಂದಾಗಿ ಗಮನಾರ್ಹವಾಗಿವೆ ಎಂದು ಪ್ರಶಂಸಿಸಿದ್ದಾರೆ.
ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...
READ MORE