1973ರ ಪೌರಾಡಳಿತ ಸಚಿವ ಬಿ.ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯವನ್ನು ಲೇವಡಿ ಮಾಡಿದ್ದರ ಪರಿಣಾಮ ಅವರ ಹೇಳಿಕೆಯನ್ನು ರಾಜಕೀಯ ಗೊಳಿಸಲಾಯಿತು. ಇದು ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸಿ, ದಲಿತ ಹಾಗೂ ದಲಿತೇತರ ನಡುವಿನ ಘರ್ಷಣೆಗೆ ಕಾರಣವಾಗಿ ‘ಬೂಸಾ ಚಳವಳಿ’ ಮುನ್ನೆಲೆಗೆ ಬಂದಿತು. ಹೀಗೆ ದಲಿತ ಚಳವಳಿಗೆ ಭದ್ರ ಬುನಾದಿ ಹಾಕಿದ್ದು `ಬೂಸಾ ಚಳವಳಿ’ ಎಂದರೆ ತಪ್ಪಾಗಲಾರದು. ಬೂಸಾ ಚಳವಳಿಗೆ 25 ವರ್ಷಗಳಾದ ಹಿನ್ನೆಲೆಯಲ್ಲಿ ಲಕ್ಷ್ಮೀನಾರಾಯಣ ನಾಗವಾರ ಅವರು ‘ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳವಳಿ : ಕಾಲು ಶತಮಾನ’ ಸಂಪಾದಿಸಿದ ಕೃತಿ ಇದಾಗಿದೆ.
ಸಮಾನತೆಯ ಮತ್ತು ಆಧ್ಯಾತ್ಮದ ಹಸಿವು - ಯು. ಆರ್. ಅನಂತಮೂರ್ತಿ, ಬೂಸಾ ಚಳವಳಿ - ನೆನಪು ಸಾಧನೆ - ಕಿ. ರಂ. ನಾಗರಾಜ್, ಬೂಸಾ ಚಳವಳಿ : ಹಿರಿಯರು ಮತ್ತು ಕಿರಿಯರು - ಕೆ. ಮರುಳಸಿದ್ದಪ್ಪ, ಬೂಸಾ ಚಳವಳಿ ಒಂದು ಸಾಂಸ್ಕೃತಿಕ ಅನುಭವ - ಶೂದ್ರ ಶ್ರೀನಿವಾಸ, ಸಮರ್ಥ ನಾಯಕತ್ವ - ವಿ ಶ್ರೀನಿವಾಸ ಪ್ರಸಾದ್ ಮುಂತಾದವರು ಚಳವಳಿ ಕುರಿತು ಮೆಲುಕು ಹಾಕಿದ ಬರಹಗಳನ್ನು ಇಲ್ಲಿ ಕಾಣಬಹುದು.
©2023 Book Brahma Private Limited.