ಒಲಿದಂತೆ ಹಾಡುವೆ

Author : ರಮೇಶ ಗಬ್ಬೂರ

₹ 100.00




Published by: ಕರ್ನಾಟಕ ಜನಶಕ್ತಿ ಪ್ರಕಾಶನ

Synopsys

ರಮೇಶ್ ಗಬ್ಬೂರ್ ಅವರು ಜನಪರ ದನಿಗೆ ದನಿಯಾಗುವ ಗಾಯಕರು ಹಾಗೂ ಜನಕವಿಗಳಾಗಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಹಾಡಿನ ಮೂಲಕ ಪ್ರತಿರೋಧ ವ್ಯಕ್ತಪಡಿಸುವವರಾಗಿದ್ದಾರೆ. ಈ ರೀತಿಯಾಗಿ ಪ್ರಸಕ್ತ ವಿದ್ಯಾಮಾನಗಳಿಗೆ ಬರೆದ ಹೋರಾಟದ ಹಾಡುಗಳ ಸಂಗ್ರಹ ಇದಾಗಿದ್ದು ತಪ್ಪದೇ ಓದಿ ಹಾಡಲೇ ಬೇಕಾದ ಹಾಡುಗಳು ಇವಾಗಿವೆ. ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ನೂರ್ ಶ್ರೀಧರ್ ಅವರ ಬೆನ್ನುಡಿಯ ಮಾತುಗಳು ಈ ಸಂಕಲನದಲ್ಲಿದೆ.

About the Author

ರಮೇಶ ಗಬ್ಬೂರ
(05 June 1968)

ಹಾಡುಗಾರ, ಕವಿ ರಮೇಶ ಗಬ್ಬೂರ ಅವರು ಜನಿಸಿದ್ದು 1968 ಜೂನ್‌ 5ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಗಬ್ಬೂರ. ಪ್ರಸ್ತುತ ಗಂಗಾವತಿಯ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕೃಷಿ ಹಾಗೂ ಸಾಮಾಜಿಕ ಚಳವಳಿಯಲ್ಲಿಯೂ ಸಕ್ರಿಯರಾಗಿರುವ ಇವರು ಜಾಗೃತ ಗೀತೆ ರಚನೆ ಹಾಗೂ ಹಾಡುಗಾರಿಕೆಯಲ್ಲಿಯೂ ತೊಡಗಿಕೊಂಡಿದ್ದಾರೆ. ಗೂನು ಬೆನ್ನಿನ ಗದ್ದೆ, ಅಲೆಮಾರಿಯ ಹಾಡು, ಗರೀಬ್‌ ಗಜ಼ಲ್‌, ಸಂಜೀವಪ್ಪ ಗಬ್ಬೂರ, ಒಲಿದಂತೆ ಹಾಡುವೆ, ಗಬ್ಬೂರ್‌ ಗಜ಼ಲ್‌ ಹಾಗೂ ಕಾಮ್ರೆಡ್‌ ಬಸವಣ್ಣ ಇವರ ಪ್ರಮುಖ ಕೃತಿಗಳು.   ...

READ MORE

Related Books