ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ

Author : ಬಿ.ಎಸ್ ಸೊಪ್ಪಿನ

Pages 108

₹ 70.00




Year of Publication: 2011
Published by: ಚಿಂತನ ಪುಸ್ತಕ
Address: #1863, 11ನೇ ಮುಖ್ಯ ರಸ್ತೆ, 38ನೇ ಅಡ್ಡರಸ್ತೆ, 4 ಟಿ. ಬ್ಲಾಕ್ ಜಯನಗರ. ಬೆಂಗಳೂರು-560041
Phone: 9902249150

Synopsys

ಲೇಖಕ ಬಿ.ಎಸ್ ಸೊಪ್ಪಿನ ಅವರ ’ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ’ ಕೃತಿಯು ರೈತ ಬಂಡಾಯದ ಕತಾನಕವಾಗಿದೆ. ಪ್ರತಿಭಟನೆ, ಚಳವಳಿ ಅನ್ಯಾಯದ ವಿರುದ್ಧದ ಹೋರಾಟ ಇತ್ಯಾದಿ ಮೌಲ್ಯ ಕಳೆದುಕೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಕರ್ನಾಟಕದ ಯಾವುದೋ ಮೂಲೆಯಲ್ಲಿ ಹೇಳಹೆಸರಿಲ್ಲದ ರೈತರು ರಾಜ್ಯ ರಾಜಕೀಯದ ದಿಕ್ಕುದಿಶೆಯನ್ನು ಬದಲಾಯಿಸುವ ಚಳವಳಿಯನ್ನು ಸಂಘಟಿಸಿದ ಕಥನ ಈ ಕೃತಿಯಾಗಿದೆ.

ಲೇಖಕರು ರೈತರ ಹಲವು ಸಮಸ್ಯೆಗಳನ್ನು ಚರ್ಚಿಸುತ್ತಾರೆ. ಅವು ಎಪ್ಪತ್ತು ಎಂಬತ್ತರ ದಶಕಕ್ಕಷ್ಟೇ ಮೀಸಲಾದ ಸಮಸ್ಯೆಗಳಲ್ಲ. ಇವತ್ತಿನ ರೈತರೂ ಅನುಭವಿಸುತ್ತಿರುವ ಸಮಸ್ಯೆಗಳಾಗಿವೆ.  ಮಲಪ್ರಭಾ ಹೋರಾಟ ರೈತ ಇತಿಹಾಸವನ್ನು ಪುನರ್ ರಚಿಸುವ ಕೆಲಸವಾಗಿದ್ದು, ಅನೇಕ ಚಳವಳಿಗಳ ಅಬ್ಬರದಲ್ಲಿ ಮಸುಕಾದ ಮಲಪ್ರಭೆ ತಡಿಯ ಮಣ್ಣಿನ ಮಕ್ಕಳ ಬಂಡಾಯದ ಕಥನವನ್ನು ಲೇಖಕರು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ. ಧಾರವಾಡ ಜಿಲ್ಲೆಯ ನರಗುಂದ- ನವಲಗುಂದ ರೈತ ಪ್ರತಿಭಟನೆಯ ಕಾರಣವನ್ನು ಶಾಂತಿಯುತ ರೈತ ಹೋರಾಟ ಹಿಂಸಾರೂಪಕ್ಕೆ ಪರಿವರ್ತನೆಗೊಂಡ ಬಗೆಯನ್ನು ಮತ್ತು ರೈತ ದಂಗೆಯ ಪರಿಣಾಮಗಳನ್ನು ಈ ಕೃತಿಯು ಬಿಡಿಬಿಡಿಯಾಗಿ ವಿವರಿಸುತ್ತದೆ.

About the Author

ಬಿ.ಎಸ್ ಸೊಪ್ಪಿನ

ಲೇಖಕ ಬಿ.ಎಸ್ ಸೊಪ್ಪಿನ ಅವರು ಮೂಲತಃ ಧಾರವಾಡ ಜಿಲ್ಲೆಯ ನರಗುಂದ ತಾಲೂಕಿನವರು. 1960 ರಲ್ಲಿ , ಮಲಪ್ರಭ ನದಿಯ ಅಣೆಕಟ್ಟುನಿರ್ಮಾಣ ವಿರುದ್ಧವಾಗಿ ನಡೆದ  ಪ್ರತಿಭಟನೆಯಲ್ಲಿ  ಹೋರಾಟಗಾರರಾಗಿ ಭಾಗಿಯಾಗಿದ್ದರು. ಕೃತಿಗಳು: ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ ...

READ MORE

Related Books