About the Author

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು.

ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ಆಳ- ವಿಸ್ತಾರದ ದ್ಯೋತಕವಾಗಿದೆ. ಒಂದು ಚಳವಳಿಯನ್ನು ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಹಾಗೂ ಸಮಾಜ ಸುಧಾರಣೆಯಲ್ಲಿ ಅದು ವಹಿಸುವ ಪಾತ್ರವಾಗಿಯೂ ಚಿಂತನೆ ನಡೆಸುವುದು ಸುಲಭದ ಮಾತಲ್ಲ; ಆದರೆ. ಮುನಿ ವೆಂಕಟಪ್ಪನವರು ಅದನ್ನು ಸಾಧಿಸಿದ್ದಾರೆ.

ವಿ. ಮುನಿವೆಂಕಟಪ್ಪ

Books by Author