ಮಹಿಳೆ ಸಮಾಜ ಕಾನೂನು

Author : ಗೀತಾ ಕೃಷ್ಣಮೂರ್ತಿ

Pages 200

₹ 90.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ಲೇಖಕಿ ಡಾ. ಗೀತಾ ಕೃಷ್ಣಮೂರ್ತಿ ಅವರ ಕೃತಿ-ಮಹಿಳೆ ಸಮಾಜ ಕಾನೂನು. ಮಹಿಳೆಯರ ವಿರುದ್ಧ ನಡೆಯುತ್ತಿರುವ ಶೋಷಣೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕ್ರೌರ್ಯ, ಹೆಣ್ಣು ಭ್ರೂಣಹತ್ಯೆ, ಉದ್ಯೋಗ ಸ್ಥಳದಲ್ಲಿ ಕಿರುಕುಳ - ಹೀಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಿವೆ. ಹಕ್ಕುಗಳಿಗಾಗಿ ಮಹಿಳೆಯರು ಧ್ವನಿ ಎತ್ತಬೇಕು. ಮಾನಸಿಕ ಹಿಂಸೆ ವಿಚ್ಛೇದನಕ್ಕೆ ಆಧಾರ, ದತ್ತಕ, ಮಕ್ಕಳಿಲ್ಲದವರ ಬಾಳಿಗೆ ಆಧಾರ, ಹೆಣ್ಣುಮಕ್ಕಳಿಗೆ ಆಸ್ತಿಹಕ್ಕು, ಭ್ರೂಣಹತ್ಯೆ ಮತ್ತು ಸದ್ಯದ ಕಾನೂನು, ಸಮಾನ ಶ್ರಮಕ್ಕೆ ಸಮಾನ ವೇತನ ಇತ್ಯಾದಿ ಲೇಖನಗಳು ಮಹಿಳೆ ಎದುರಿಸುವ ಹಲವಾರು ಸಮಸ್ಯೆ ಹಾಗೂ ಸಂಬಂಧಿತ ಕಾನೂನು ಪರಿಹಾರಗಳತ್ತ ಈ ಕೃತಿಯು ಮಾಹಿತಿಯನ್ನು ನೀಡುತ್ತದೆ.

About the Author

ಗೀತಾ ಕೃಷ್ಣಮೂರ್ತಿ
(23 October 1951)

ಸಂಶೋಧನಾ ಲೇಖಕಿಯಾದ ಗೀತಾ ಕೃಷ್ಣಮೂರ್ತಿಯವರು ಕಾನೂನು, ವ್ಯಕ್ತಿತ್ವ ವಿಕಸನ, ಸಂವಿಧಾನದ ಕುರಿತಾಗಿ ಉತ್ತಮ ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು ಎಲ್.ಎಲ್.ಬಿ, ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. 1951 ಅಕ್ಟೋಬರ್ 23ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.  ಮಹಿಳೆ ಮತ್ತು ಕಾನೂನು - ನವ ಸಾಕ್ಷರರಿಗಾಗಿ, ವಿವಾಹ ಕಾನೂನು ಮಹಿಳೆ, ಕಾನೂನು ಮತ್ತು ರಾಜಕಾರಣ, ಮಹಿಳಾ ಹಕ್ಕುಗಳುಮಾನವ ಹಕ್ಕುಗಳ ನೆಲೆಯಲ್ಲಿ, ಮಹಿಳೆ ಸಮಾಜ ಮತ್ತು ಕಾನೂನು (ಲೇಖನಗಳ ಸಂಗ್ರಹ) ವ್ಯಕ್ತಿತ್ವ ವಿಕಸನ ಮತ್ತು ಕಾನೂನು, ಮೂಲಭೂತ ಹಕ್ಕುಗಳು ಒಂದು ಕಿರುಪರಿಚಯ, ಕೌಟುಂಬಿಕ ಕಾನೂನು ಸಂಗಾತಿ, ಕಾನೂನು ...

READ MORE

Related Books