
‘ಮಕ್ಕಳಿಗಾಗಿ ತತ್ವಚಿಂತನೆ’ ಕೃತಿಯು ಸುಂದರ್ ಸರುಕ್ಕೈ ಅವರ ಮೂಲ ಕೃತಿಯಾಗಿದ್ದು, ಲೇಖಕ ಮಾಧವ ಚಿಪ್ಪಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಿಯಾ ಕುರಿಯನ್ ಅವರು ಈ ಕೃತಿಯಲ್ಲಿನ ಚಿತ್ರಗಳನ್ನು ಬರೆದಿರುತ್ತಾರೆ. ಈ ಕೃತಿಯಲ್ಲಿ ಒಟ್ಟು ಎಂಟು ಸಾಧನಗಳಿದ್ದು, ತತ್ವಚಿಂತನೆಯೇ ಈ ವಿಚಾರಗಳ ಮೂಲ ಧ್ಯೇಯವಾಗಿದೆ. ನೋಡುವುದು, ಯೋಚಿಸುವುದು, ಬರೆಯುವುದು, ಓದುವುದು, ಗಣಿತ, ಕಲೆ, ಬೀಯಿಂಗ್ ಗುಡ್, ಮತ್ತು ಕಲಿಯುವುದು ತತ್ವಚಿಂತನೆಗಳಾಗಿವೆ.
ಇಲ್ಲಿನ ಪ್ರತೀ ವಿಭಾಗದಲ್ಲಿಯೂ ವಿಷಯಕ್ಕೆ ತಕ್ಕುದಾದ ನಿರೂಪಣೆಯ ತಂತ್ರಗಳನ್ನು ರೂಪಿಸಲಾಗಿದೆ. ಸರಳ ಚಟುವಟಿಕೆಗಳನ್ನು ಕೊಡುವುದರ ಮೂಲಕ ಪ್ರಶ್ನೆಗಳನ್ನು ಕೇಳುವುದರ ಮೂಲಕ, ಉದಾಹರಣೆಗಳನ್ನು ಕೊಟ್ಟು ವಿವರಿಸುವುದರ ಮೂಲಕ ಲೇಖಕರು ವಿಷಯಗಳನ್ನು ಮನನ ಮಾಡಿಸುತ್ತಾರೆ. ವಿಜ್ಞಾನ ಕುರಿತ ವಿಚಾರಗಳಿವೆ. ಇಂದಿನ ಚಿಂತನಹೀನ ಶೈಕ್ಷಣಿಕ ವ್ಯವಸ್ಥೆಯು ಜ್ಞಾನವೆಂದರೆ ಅದು ವಿಜ್ಞಾನ, ಶಿಕ್ಷಣವೆಂದರೆ ಒತ್ತಡ, ಭಯ, ಸ್ಪರ್ಧೆ ಎಂಬಂತೆ ಮಾಡಿದೆ’ ಎಂದು ಇಲ್ಲಿ ಲೇಖಕರು ವಿಶ್ಲೇಷಿಸುತ್ತಾರೆ.
©2025 Book Brahma Private Limited.