ಸಾಧಾರಣ ಜನ ಅಸಾಧಾರಣ ಶಿಕ್ಷಕರು

Author : ಎಸ್. ಗಿರಿಧರ್

Pages 240

₹ 250.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ ಪೂರ್ವ, ಬೆಂಗಳೂರು

Synopsys

ಲೇಖಕ ಎಸ್. ಗಿರಿಧರ ಅವರ ಕೃತಿ-ಸಾಧಾರಣ ಜನ ಅಸಾಧಾರಣ ಶಿಕ್ಷಕರು. ಭಾರತದ ನಿಜವಾದ ಧೀರರು ಎಂಬ ಉಪಶೀರ್ಷಿಕೆಯಡಿ ಕೃತಿ ರಚಿತವಾಗಿದೆ. 

ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಕಾರ್ಯನಿಮಿತ್ತವಾಗಿ ಸುಮಾರು ಎರಡು ದಶಕಗಳಿಂದ ದೇಶದುದ್ದಗಲಕ್ಕೂ ಸುತ್ತಾಡುತ್ತಿರುವ ಎಸ್. ಗಿರಿಧರ್, ದೂರದ ಮೂಲೆಯಲ್ಲಿರುವ ಪ್ರದೇಶಗಳಿಗೆ ಸಂಚರಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಅವಲೋಕಿಸಿದ್ದಾರೆ. ಈ ಅವಧಿಯಲ್ಲಿ, ತಮ್ಮ ಆರೈಕೆಯಲ್ಲಿರುವ ಮಕ್ಕಳ ಏಳಿಗೆಗಾಗಿ ಗಾಢವಾಗಿ ಸಮರ್ಪಿಸಿಕೊಂಡಿರುವ ನೂರಾರು ಮಂದಿ ಸರ್ಕಾರಿ ಶಿಕ್ಷಕರುಗಳೊಂದಿಗೆ ಅವರು ಶಾಲಾ ಒಡನಾಡಿದ್ದಾರೆ. ಪ್ರತಿಯೊಂದು ಮಗುವೂ ಕಲಿಯಬಲ್ಲದು ಎಂಬ ಉತ್ಕಟವಾದ ನಂಬಿಕೆ ಹೊಂದಿದ್ದು, ಇದಕ್ಕೆ ಪೂರಕವಾಗಿ ಇಲ್ಲಿಯ ಬರಹಗಳಿವೆ.

ಈ ಕೃತಿಯಲ್ಲಿ ‘ನಾವೇಕೆ ಸರ್ಕಾರಿ ಶಾಲೆಗಳನ್ನು ಬೆಂಬಲಿಸಬೇಕು ಎಂಬ ಪ್ರಧಾನ ಪ್ರಶ್ನೆಯ ಮೂಲಕವೇ ಭಾರತದ ಶೈಕ್ಷಣಿಕ ಸ್ಥಿತಿಗತಿಯನ್ನು ವಿಶ್ಲೇಷಿಸಲಾಗಿದೆ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಮುಖ್ಯ ಶಿಕ್ಷಕರು, ಚಿಂತನಶೀಲ ಅಭ್ಯಾಸಿಗರು: ಜೀವನವನ್ನು ಕಲಿಕೆಗೆ ಅರ್ಪಿಸಿಕೊಂಡವರು, ಸಮತೆ ಮತ್ತು ಗುಣಮಟ್ಟ: ಇವು ತರಬೇತಿಯಲ್ಲಿ ಪ್ರಾರಂಭವಾಗುತ್ತವೆ, ಬಗ್ಗಟ್ಟಿನ ಕೆಲಸ; ಅತೀತ ಗುರಿಗಳತ್ತ ಸೆಳೆತ, ಅಡೆತಡೆಗಳನ್ನು ಲೆಕ್ಕಿಸದ ಧೀರರು, ಕೊನೆಯ ಮಾತು: ಯಾಕೆ ಈ ಕಥನಗಳನ್ನು ಹೇಳಲೇಬೇಕು? (ಅನುರಾಗ್ ಬೆಹಾರ್) ಹೀಗೆ ವಿವಿಧ ಅಧ್ಯಾಯಗಳಡಿ ಶಿಕ್ಷಣದ ಸ್ವರೂಪ, ಉದ್ದೇಶ, ಭಾರತದ ಮಕ್ಕಳು ಪಡೆಯುತ್ತಿರುವ ಶಿಕ್ಷಣ ಎಲ್ಲವನ್ನೂ ಸಮಗ್ರವಾಗಿ ವಿವರಿಸಲಾಗಿದೆ. 

About the Author

ಎಸ್. ಗಿರಿಧರ್

ಎಸ್. ಗಿರಿಧರ್ ಅವರು ‘ಅಜೀಂ ಪ್ರೇಮ್ ಜಿ’ ವಿಶ್ವವಿದ್ಯಾಲಯದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಆಗಿದ್ದಾರೆ. ಅವರು ಅಜೀಂ ಪ್ರೇಮ್ ಜಿ ಫೌಂಡೇಷನ್ ನ ಆರಂಭಿಕ ಸದಸ್ಯರಲ್ಲಿ ಒಬ್ಬರು. ವ್ಯವಹಾರ ನಿರ್ವಹಣೆಯ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದ ಸೇವೆಯ ಬಳಿಕ, 18  ವರ್ಷಗಳ ಹಿಂದೆ ಅವರು ಫೌಂಡೇಷನ್ ಅನ್ನು ಸೇರಿದರು. ಈ  ಫೌಂಡೇಷನ್, ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದಾಗ ಅವರು ಅದರ ಮೊದಲ ಮುಖ್ಯ ಕಾರ್ಯಾಚರಣೆ ಅಧಿಕಾರಿ ಹಾಗೂ ರಿಜಿಸ್ಟ್ರಾರ್ ಹುದ್ದೆಗಳನ್ನು ವಹಿಸಿಕೊಂಡರು. ಈಗ್ಗೆ ಅನೇಕ ವರ್ಷಗಳಿಂದ ತಾವು ಗಳಿಸಿದ ಸಮೃದ್ಧ ಅನುಭವವನ್ನೂ ಒಳನೋಟವನ್ನೂ ಬಳಸಿಕೊಂಡು ನಿಯತವಾಗಿ ಬರೆಯುತ್ತಿದ್ದಾರೆ. ...

READ MORE

Related Books