ಅನಂತದೆಡೆಗೆ ಭಾಗ-1

Author : ಶ್ರೀನಿವಾಸ ಡಿ. ಶೆಟ್ಟಿ

Pages 68

₹ 50.00




Year of Publication: 2017
Published by: ನವಿಲುಗರಿ ಪ್ರಕಾಶನ
Address: ರೂಪಾ ಶ್ರೀನಿವಾಸ್ , w/o ಶ್ರೀನಿವಾಸ ಡಿ.ಶೆಟ್ಟಿ, ಅತ್ತಿಚೌಡೇನಹಳ್ಳಿ, ದೊಡ್ಡಕುಂಚೆ ಅಂಚೆ, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ- 573 211
Phone: 8951261033

Synopsys

ಲೇಖಕ ಶ್ರೀನಿವಾಸ ಡಿ ಶೆಟ್ಟಿ ಅವರ ಗಣಿತ ಲೇಖನಗಳ ಸಂಗ್ರಹ ಅನಂತದೆಡೆಗೆ ಭಾಗ-1.ಕೃತಿಯಲ್ಲಿ ಲೇಖಕರೇ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಗಣಿತ ಲೇಖನಗಳನ್ನೊಳಗೊಂಡ ಪುಸ್ತಕವನ್ನು ಹೊರತರುವುದು ಸುಲಭದ ಮಾತಲ್ಲ. ಏಕೆಂದರೆ ಗಣಿತ ವಿಷಯಕ್ಕೆ ಆಂಗ್ಲ ಭಾಷೆಯಲ್ಲಿ ಸಿಗುವಷ್ಟು ಹೇರಳವಾಗಿ ಆಕರ ಗ್ರಂಥಗಳು ಕನ್ನಡದಲ್ಲಿ ಸಿಗುವುದಿಲ್ಲ. ಆದರೂ ಅನಂತದೆಡೆಗೆ ತಂಡವು ಕೆಲವು ವರ್ಷಗಳಿಂದ ಕನ್ನಡದಲ್ಲಿ ಗಣಿತ ಸಂಬಂಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ.ಈ ಪುಸ್ತಕವನ್ನು ಪ್ರೌಢಶಾಲಾ ಹಂತದ ಸಂಖ್ಯಾಶಾಸ್ತ್ರಕೆ, ಆಕರ ಗ್ರಂಥವಾಗಿ ಬಳಸಬಹುದು. ನಾರಾಯಣಸ್ವಾಮಿಯವರು ಇದನ್ನು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವ ನಿಟ್ಟಿನಲ್ಲಿ, ಲೇಖನ ಬರೆದಿರುವುದು ನಿಜಕ್ಕೂ ಮೆಚ್ಚುವಂತದ ಸಂಖ್ಯಾಶಾಸ್ತ್ರದ ಪೂರ್ಣ ಚಿತ್ರಣ ನೀಡುವಲ್ಲಿ ಬಹುಪಾಲು ಯಶಸ್ಸು ಗಳಿಸಿದ್ದಾರೆ. ಇದನ್ನು ಓದುಗ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸದುಪಯೋಗಪಡಿಸಿಕೊಂಡರೆ ಮಾತ್ರ ಇದರ ಸಾರ್ಥಕತೆ ಎಂದಿದ್ದಾರೆ.

About the Author

ಶ್ರೀನಿವಾಸ ಡಿ. ಶೆಟ್ಟಿ

ಶ್ರೀನಿವಾಸ ಡಿ. ಶೆಟ್ಟಿ ಅವರು ವೃತ್ತಿಯಿಂದ ಪ್ರೌಢಶಾಲಾ ಗಣಿತ ಶಿಕ್ಷಕರು. ಪ್ರಸ್ತುತ ಶಿಕ್ಷಣ ಸಂಯೋಜಕರಾಗಿ ಬಿಇಓ ಕಚೇರಿ, ಅರಕಲಗೂಡು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.. ಇದುವರೆಗೂ ಪ್ರಕಟಿತ ಕೃತಿ: ಮೌನ ಮನದ ಮಾತು (ಮನೋ ವಿಶ್ಲೇಷಣಾತ್ಮಕ ಕೃತಿ) ,ಮಧುರ ಮನಸಿನ ಅಲೆಗಳು (ಕವಿತೆಗಳು), ಮುಖವಾಡವಿಲ್ಲದ ಬದುಕು (ಕವಿತೆಗಳು), ಕರ್ನಾಟಕ ಪರಿಚಯ (ಸಾಮಾನ್ಯ ಜ್ಞಾನ), ಅನಂತದೆಡೆಗೆ (ಸಂಪಾದಿತ ಗಣಿತ ಲೇಖನಗಳು), ಗಣಿತ ಪ್ರಶಸ್ತಿಗಳು. ಜಿಲ್ಲೆ ಮತ್ತು ರಾಜ್ಯಮಟ್ಟದ ಕವಿಗೋಷ್ಟಿಯಲ್ಲಿ ಕವಿತೆ ವಾಚಿಸಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಗಣಿತ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದಾರೆ. ...

READ MORE

Related Books