ತಾಂತ್ರಿಕ ಕನ್ನಡ (ಪಾಲಿಟೆಕ್ನಿಕ್‌ ಡಿಪ್ಲೊಮ ಕೋರ್ಸಿನ 3ನೇ ಮತ್ತು 4ನೇ ಸೆಮಿಸ್ಟರ್‌ ಪಠ್ಯ

Author : ಅಶೋಕಕುಮಾರ ರಂಜೇರೆ

Pages 196

₹ 180.00




Year of Publication: 2019
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಡಿಪ್ಲೊಮಾ ಪಾಲಿಟೆಕ್ನಿಕ್ ನ 3ನೇ ಮತ್ತು 4ನೇ ಸೆಮಿಸ್ಟರ್‌ ತರಗತಿಯ ವಿದ್ಯಾರ್ಥಿಗಳಿಗೆ ತಾವು ಅಭ್ಯಾಸ ಮಾಡುವ ವೃತ್ತಿಪರ ವಿಷಯಗಳ ಜೊತೆಗೆ ಕನ್ನಡ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ತಾಂತ್ರಿಕ ಕನ್ನಡ ಪಠ್ಯವನ್ನು ಅಳವಡಿಸಲಾಗಿದೆ.

ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕತೆ, ಕವನ, ವೈಚಾರಿಕ-ವೈಜ್ಞಾನಿಕ ಚಿಂತನೆ, ಕ್ರೀಡೆ, ಪರಿಸರ ಮುಂತಾದ ಆಸಕ್ತಿದಾಯಕ ವಿಚಾರಗಳನ್ನು ಪಠ್ಯದಲ್ಲಿ ಒದಗಿಸಲಾಗಿದೆ. ವಿದ್ಯಾರ್ಥಿಗಳ ಭಾಷಾ ಕೌಶಲ್ಯವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಭಾಷಾ ಚಟುವಟಿಕೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಮನೋವಿಕಾಸಕ್ಕೆ ಸಹಕಾರಿಯಾಗುವಂತೆ ಈ ಕೃತಿಯನ್ನು ರಚಿಸಲಾಗಿದೆ. ಅಶೋಕಕುಮಾರ್‌ ರಂಜೆರೆ ಹಾಗೂ ಕೆ.ವೈ. ನಾರಾಯಣಸ್ವಾಮಿ ಒಟ್ಟಾಗಿ ಕೃತಿ ರಚಿಸಿದ್ದಾರೆ. ಈ ಕೃತಿಯು ನಾಲ್ಕು ಮುದ್ರಣಗಳನ್ನು ಕಂಡಿದೆ.

 

About the Author

ಅಶೋಕಕುಮಾರ ರಂಜೇರೆ
(01 June 1967)

ಅಶೋಕಕುಮಾರ ರಂಜೇರೆ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕ ಆಗಿದ್ದಾರೆ. ಕನ್ನಡ ಭಾಷ ಅಧ್ಯಯನ, ಕನ್ನಡ ಸಾಹಿತ್ಯ ಅಧ್ಯಯನ, ರಂಗಭೂಮಿ,  ಭಾಷಾ ಭೋಧನೆ ಮತ್ತು ಭಾಷಾ ಕಲಿಕೆ ಇವರ ಪ್ರಮುಖ ಅಧ್ಯಯನ ಕ್ಷೇತ್ರಗಳು. ಸಾಹಿತ್ಯ ಮತ್ತು ಇತಿಹಾಸ ಸಂಬಂಧ, ಭಾಷೆ ಮತ್ತು ಶಿಕ್ಷಣ, ವಿವಿಧ ವೃತ್ತಿ ಪದಕೋಶ, ಮೂಕನಾಟಕ ಇತ್ಯಾದಿ ಪ್ರಕಟಿತ ಕೃತಿಗಳು. ಶಾಸ್ತ್ರೀಯ ಭಾಷ ರಾಜಕಾರಣ, ಸ್ತ್ರೀ ಭಾಷ ಯೋಜನೆ, ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆ, ಶಾಲಾ ಶಿಕ್ಷಣದಲ್ಲಿ ವ್ಯಾಕರಣ  ಮೊದಲಾದ ಸಂಶೋಧನ ಲೇಖನ ಪ್ರಕಟಿಸಿದ್ದಾರೆ. ...

READ MORE

Related Books