ಶಾಲಾ ಪ್ರಬಂಧಗಳು

Author : ಬೆ.ಗೋ. ರಮೇಶ್

Pages 202

₹ 100.00




Year of Publication: 2010
Published by: ಚಂದನ ಪ್ರಕಾಶನ
Address: ಕಾಮಾಕ್ಷಿಪಾಳ್ಯ, ಬೆಂಗಳೂರು

Synopsys

ಲೇಖಕ ಬೆ.ಗೋ. ರಮೇಶ್ ಅವರು ಮಕ್ಕಳಿಗಾಗಿ ಬರೆದ ಕೃತಿ-ಶಾಲಾ ಪ್ರಬಂಧಗಳು. ಪ್ರಬಂಧ ಬರೆಯುವುದು ಒಂದು ಕಲೆ. ಪ್ರಬಂಧ ಬರೆಯುವುದನ್ನು ಮಕ್ಕಳ ಪಠ್ಯವಾಗಿ ಕಲಿಸಲಾಗುತ್ತದೆ. ವಿಷಯ ನಿರೂಪಣೆಯ ಈ ಕಲೆಯನ್ನು ಮಕ್ಕಳು ರೂಢಿಸಿಕೊಂಡರೆ ಬರೆಹದಲ್ಲಿ ಶಿಸ್ತು ಕಾಣಿಸಿಕೊಳ್ಳುತ್ತದೆ ಮಾತ್ರವಲ್ಲ; ವಿಚಾರಗಳ ಅಭಿವ್ಯಕ್ತಿಯಲ್ಲೂ, ಸಂಯಮದ ನಡೆಯನ್ನು ಕಾಣಬಹುದು. ಅದಕ್ಕಾಗಿ ಪ್ರಬಂಧಗಳನ್ನು ಬರೆಯುವ ಕಲೆಯನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ.

About the Author

ಬೆ.ಗೋ. ರಮೇಶ್
(22 August 1945)

ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...

READ MORE

Related Books